ಕರ್ನಾಟಕ

karnataka

ETV Bharat / bharat

ಇಬ್ಬರು ಅಪ್ರಾಪ್ತರಿಂದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ! - ಬಾಲಾಪರಾಧಿ ನ್ಯಾಯಾಲಯ

ಇಬ್ಬರು ಅಪ್ರಾಪ್ತರು ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಸಂಭಾಲ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

By

Published : Mar 12, 2023, 9:28 PM IST

ಸಂಭಾಲ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಮಾರ್ಚ್ 11 ರಂದು ಬಾಲಕಿಯ ಮೇಲೆ ಇಬ್ಬರು ಬಾಲಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ಮಾರ್ಚ್ 9 ರಂದು ಜಿಲ್ಲೆಯ ಜುನ್ವಾಯ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈಗಾಗಲೇ ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜುನ್ವಾಯಿ ಪೊಲೀಸ್ ಠಾಣೆಯ ಉಸ್ತುವಾರಿ ಪುಷ್ಕರ್ ಸಿಂಗ್ ಮೆಹ್ರಾ, ಮಾರ್ಚ್ 9 ರಂದು 6 ನೇ ತರಗತಿ ಓದುತ್ತಿದ್ದ ಎಂಟು ವರ್ಷದ ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಳು. ಈ ಸಮಯದಲ್ಲಿ ಸುಮಾರು 12 ವರ್ಷ ವಯಸ್ಸಿನ ಇಬ್ಬರು ಹದಿಹರೆಯದವರು ಅವಳ ಬಳಿಗೆ ಬಂದು ಆಟವಾಡುವ ನೆಪದಲ್ಲಿ ಮಾತನಾಡಲು ಪ್ರಾರಂಭಿಸಿದ್ದಾರೆ. ನಂತರ ಇಬ್ಬರು ಆರೋಪಿಗಳು ಹುಡುಗಿಯನ್ನು ತಮ್ಮೊಂದಿಗೆ ಬರುವಂತೆ ಮನವೊಲಿಸಿದ್ದಾರೆ. ಅನಂತರ ಅವಳನ್ನು ಕೃಷಿ ಭೂಮಿಗೆ ಕರೆದೊಯ್ದಿದ್ದಾರೆ. ಅಲ್ಲಿಗೆ ತಲುಪಿದ ನಂತರ ಇಬ್ಬರು ಆರೋಪಿಗಳು ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮೆಹ್ರಾ ತಿಳಿಸಿದ್ದಾರೆ.

ಇದನ್ನೂ ಓದಿ :ಹಿಮದಲ್ಲಿ ಸಿಲುಕಿದ್ದ 100 ವಾಹನಗಳು: 50 ಮಕ್ಕಳು ಸೇರಿ 370 ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

ವೈದ್ಯಕೀಯ ಪರೀಕ್ಷೆಯ ನಂತರ ಪೋಷಕರಿಗೆ ತಿಳಿದು ಬಂತು ಸತ್ಯ : ಸಾಮೂಹಿಕ ಅತ್ಯಾಚಾರದ ನಂತರ ಬಾಲಕಿ ಹೇಗೋ ಮನೆಯನ್ನು ತಲುಪಿದ್ದಾಳೆ. ಆದರೆ ನಡೆದ ಘಟನೆಯ ಬಗ್ಗೆ ಆಕೆ ತನ್ನ ಪೋಷಕರಿಗೆ ಏನನ್ನೂ ಬಾಯ್ಬಿಟ್ಟಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ದಿನಗಳ ನಂತರ ಆಕೆಯ ಆರೋಗ್ಯ ಹದಗೆಡಲು ಪ್ರಾರಂಭಿಸಿದಾಗ, ಆಕೆಯ ಪೋಷಕರು ಬಾಲಕಿಯನ್ನು ವೈದ್ಯರ ಬಳಿಗೆ ಕರೆದೊಯ್ದಿದ್ದಾರೆ. ಅಲ್ಲಿ ಅವಳನ್ನು ಪರೀಕ್ಷಿಸಿದ ನಂತರ ಆಕೆ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ :21 ಸಾವಿರ ಬಡ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಿದ ಸಚಿವ ಗೋಪಾಲ್ ಭಾರ್ಗವ.. ಈಡೇರಿದ ಸಂಕಲ್ಪ

ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತೆಯ ಪೋಷಕರು ಪೊಲೀಸ್​ ಠಾಣೆಗೆ ಬಂದು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಅದರ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ :ಅಸ್ಸೋಂ ನಾಗಾಲ್ಯಾಂಡ್ ಗಡಿಯಲ್ಲಿ 20 ಕೋಟಿ ಮೌಲ್ಯದ ಹೆರಾಯಿನ್ ವಶ

ಪೋಕ್ಸೊ ಕಾಯ್ದೆ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲು : ಇಬ್ಬರು ಅಪ್ರಾಪ್ತ ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಐಪಿಸಿಯ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಗುನ್ನೌರ್ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಸಿಧು ಹೇಳಿದ್ದಾರೆ. ಇಬ್ಬರನ್ನೂ ವಶಕ್ಕೆ ಪಡೆದು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ :ಹೋಳಿ ವೇಳೆ ಜಪಾನಿ ಮಹಿಳೆಗೆ ಕಿರುಕುಳ: ಬಾಲಾಪರಾಧಿ ಸೇರಿ ದೆಹಲಿಯಲ್ಲಿ ಮೂವರು ಸೆರೆ

ABOUT THE AUTHOR

...view details