ಛತ್ತೀಸ್‌ಗಢ:ಐದು ತಿಂಗಳ ಗರ್ಭವತಿಯಾಗಿದ್ದ ಅಪ್ರಾಪ್ತೆ ಗರ್ಭಪಾತ ಮಾತ್ರೆ ತಿಂದು ಸಾವನ್ನಪ್ಪಿದ ಪ್ರಕರಣದಲ್ಲಿ ಆರೋಪಿ ಪ್ರೇಮಿಗೆ ಪೋಕ್ಸೋ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 1 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಪ್ರಕರಣವೇನು?:ಘಟನೆ ಛತ್ತೀಸ್ಗಢದ ಗೌರೇಲಾ ಪೆಂಡ್ರಾ ಮರ್ವಾಹಿಯಲ್ಲಿ ಒಂದೂವರೆ ವರ್ಷಗಳ ಹಿಂದೆ ನಡೆದಿತ್ತು. 15 ವರ್ಷದ ಅಪ್ರಾಪ್ತೆ 5 ತಿಂಗಳ ಗರ್ಭವತಿಯಾಗಿದ್ದ ವೇಳೆ ಪ್ರೇಮಿ ತಂದುಕೊಟ್ಟ ಗರ್ಭಪಾತ ಮಾತ್ರೆ ನುಂಗಿದ್ದಳು. ಇದರಿಂದ ತೀವ್ರ ಅಸ್ತಸ್ಥಳಾಗಿ ಆಕೆ ಮೃತಪಟ್ಟಿದ್ದಳು. ಇದರ ವಿರುದ್ಧ ಬಾಲಕಿಯ ಕುಟುಂಬಸ್ಥರು ದೂರು ನೀಡಿದ್ದರು.
ವಿಚಾರಣೆಯ ವೇಳೆ ಅದೇ ಗ್ರಾಮದ ಯುವಕ, ಬಾಲಕಿಯ ಜೊತೆ ಸಂಬಂಧ ಹೊಂದಿದ್ದು ಗೊತ್ತಾಗಿದೆ. ಆಕೆಯ ಜೊತೆಗೆ ನಿರಂತರ ದೈಹಿಕ ಸಂಪರ್ಕ ಸಾಧಿಸಿದ ಕಾರಣ ಆಕೆ 5 ತಿಂಗಳ ಗರ್ಭವತಿಯಾಗಿದ್ದಳು. ಇದನ್ನು ತಪ್ಪಿಸಲು ಆತ ಸ್ನೇಹಿತನ ನೆರವಿನಿಂದ ಗರ್ಭಪಾತದ ಮಾತ್ರೆ ತಿನ್ನಿಸಿದ್ದ. ಅಸುರಕ್ಷಿತ ಗರ್ಭಪಾತದಿಂದ ಆಕೆ ತೀವ್ರ ಅಸ್ವಸ್ಥಳಾಗಿ ಸಾವನ್ನಪ್ಪಿದ್ದಳು.