ETV Bharat Karnataka

ಕರ್ನಾಟಕ

karnataka

ETV Bharat / bharat

350 ರೂಪಾಯಿಗಾಗಿ 60 ಬಾರಿ ಇರಿದು ಯುವಕನ ಕೊಂದ ಬಾಲಕ.. ಡ್ಯಾನ್ಸ್ ಮಾಡಿ ವಿಕೃತಿ! - ದೆಹಲಿಯಲ್ಲಿ ಭೀಕರ ಕೊಲೆ

ಕೇವಲ 350 ರೂಪಾಯಿಗಾಗಿ ಬಾಲಕನೊಬ್ಬ 18 ವರ್ಷದ ಯುವಕನನ್ನು ಕೊಲೆ ಮಾಡಿದ್ದಾನೆ.

murder in delhi  16 Year Old Stabs Teen Multiple Times  minor brutally murdered  teenager for just Rs 350 in delhi  ಬಿರಿಯಾನಿ ತಿನ್ನಲು ಹಣವಿಲ್ಲ  60 ಇರಿದು ಕೊಂದು ಡ್ಯಾನ್ಸ್​ ಮಾಡಿದ ಬಾಲಕ  350 ರೂಪಾಯಿ  ದೆಹಲಿಯಲ್ಲಿ ದುರಂತ ಘಟನೆ  350 ರೂಪಾಯಿಗಾಗಿ ಬಾಲಕ  18 ವರ್ಷದ ಯುವಕನನ್ನು ಕೊಲೆ  ದೇಶದ ರಾಜಧಾನಿ ದೆಹಲಿ  ದೆಹಲಿಯಲ್ಲಿ ಭೀಕರ ಕೊಲೆ  ಬಾಲಕನೊಬ್ಬ ಯುವಕನನ್ನು ಕೊಲೆ
350 ರೂಪಾಯಿಗಾಗಿ ಯುವಕನನ್ನು 60 ಇರಿದು ಕೊಂದು ಡ್ಯಾನ್ಸ್​ ಮಾಡಿದ ಬಾಲಕ!
author img

By ETV Bharat Karnataka Team

Published : Nov 23, 2023, 2:07 PM IST

Updated : Nov 23, 2023, 3:36 PM IST

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಭೀಕರ ಕೊಲೆ ಪ್ರಕರಣ ನಡೆದಿದೆ. ಕೇವಲ 350 ರೂಪಾಯಿಗಾಗಿ ಬಾಲಕನೊಬ್ಬ ಯುವಕನನ್ನು ಕೊಲೆಗೈದು ಆತನ ಮೃತದೇಹದ ಬಳಿ ವಿಕೃತವಾಗಿ ಡ್ಯಾನ್ಸ್​ ಮಾಡಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳವಾರ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಉತ್ತರ ದೆಹಲಿಯ ವೆಲ್ಕಮ್ ಏರಿಯಾದಲ್ಲಿ ಹಾದುಹೋಗುತ್ತಿದ್ದ ಯುವಕನೊಬ್ಬನ ಮೇಲೆ ಬಾಲಕ ದಾಳಿ ಮಾಡಿದ್ದಾನೆ. ಯುವಕ ಉಸಿರಾಡಲೂ ಸಾಧ್ಯವಾಗದಂತೆ ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಬಾಲಕನಿಂದ ಯುವಕ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಪ್ರಜ್ಞೆ ತಪ್ಪಿದ ಬಳಿಕ ತನ್ನಲ್ಲಿದ್ದ ಚಾಕುವಿನಿಂದ ಸುಮಾರು 60 ಬಾರಿ ಇರಿದಿದ್ದಾನೆ. ಇದರಿಂದ ಸಂತ್ರಸ್ತನ ಪ್ರಾಣಪಕ್ಷಿ ಹಾರಿಹೋಗಿದೆ. ಬಳಿಕ ಆತನ ಬಳಿಯಿದ್ದ 350 ರೂಪಾಯಿ ತೆಗೆದುಕೊಂಡಿದ್ದಾನೆ. ಮೃತದೇಹದ ಮುಂದೆ ಕೆಲಕಾಲ ವಿಕೃತವಾಗಿ ಡ್ಯಾನ್ಸ್ ಮಾಡಿದ್ದಾನೆ.

ಏನಿದು ಪ್ರಕರಣ?: ಮಂಗಳವಾರ ರಾತ್ರಿ 10:20ರ ಸುಮಾರಿಗೆ ಘಟನೆ ನಡೆದಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಪೊಲೀಸರಿಂದ ಬಂದಿರುವ ಮಾಹಿತಿ ಪ್ರಕಾರ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮೃತನ ಕುತ್ತಿಗೆ, ಕಿವಿ ಮತ್ತು ಮುಖದ ಮೇಲೆ ಚಾಕು ದಾಳಿಯ ಗುರುತುಗಳಿವೆ. ಮೃತದೇಹದ ಮೇಲೆ 60ಕ್ಕೂ ಹೆಚ್ಚು ಬಾರಿ ಚಾಕು ಇರಿತದ ಗುರುತುಗಳಿವೆ. ಬುಧವಾರ ಬೆಳಿಗ್ಗೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ದಾಳಿಯ ವೇಳೆ ಬಾಲಕ ಪಾನಮತ್ತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನನ್ನು ಜಾಫ್ರಾಬಾದ್ ನಿವಾಸಿ ಎಂದು ಗುರುತಿಸಲಾಗಿದೆ.

ಬಿರಿಯಾನಿ ತಿನ್ನಲು ಹಣ ಕೇಳುತ್ತಿದ್ದ: ಪೊಲೀಸರಿಂದ ಬಂದ ಖಚಿತ ಮಾಹಿತಿ ಮೇರೆಗೆ ಜಂತಾ ಮಜ್ದೂರ್ ಕಾಲೊನಿ ಬಳಿ ಸಂತ್ರಸ್ತ ಯುವಕನನ್ನು ಹಿಡಿದ ಆರೋಪಿಗಳು ಬಿರಿಯಾನಿ ತಿನ್ನಲು ಹಣ ಕೇಳಲಾರಂಭಿಸಿದ್ದಾರೆ. ಸಂತ್ರಸ್ತ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾನೆ. ಹೀಗಾಗಿ ಆರೋಪಿ ಕತ್ತು ಹಿಸುಕಲು ಯತ್ನಿಸಿದ. ಈ ವೇಳೆ ಆರೋಪಿ ಹಣ ದೋಚಲು ವಿಫಲನಾದಾಗ ಚಾಕುವಿನಿಂದ ದಾಳಿ ಮಾಡಿದ್ದಾನೆ. ಸದ್ಯ ಆರೋಪಿ ಪೊಲೀಸ್ ವಶದಲ್ಲಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ಪಂಜಾಬ್​: ಗುರುದ್ವಾರದಲ್ಲಿ ನಿಹಾಂಗ್ ಸದಸ್ಯರಿಂದ ಗುಂಡಿನ ದಾಳಿ, ಪೊಲೀಸ್ ಸಿಬ್ಬಂದಿ ಸಾವು

Last Updated : Nov 23, 2023, 3:36 PM IST

ABOUT THE AUTHOR

...view details