ಜೈಪುರ(ರಾಜಸ್ಥಾನ):15 ವರ್ಷದ ಬಾಲಕಿ ಮೇಲೆ ಕಾಂಗ್ರೆಸ್ ಶಾಸಕನ ಪುತ್ರನೋರ್ವ ಅತ್ಯಾಚಾರ ಎಸಗಿದ್ದಾನೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆದಿದೆ ಎನ್ನಲಾದ ಘಟನೆ ಇದಾಗಿದ್ದು, ರಾಜಗಢ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೊಹಾರಿ ಲಾಲ್ ಮೀನಾ ಅವರ ಪುತ್ರ ದೀಪಕ್ ಮೀನಾ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆಂದು ಹೇಳಲಾಗಿದೆ.
ಹೋಟೆಲ್ವೊಂದಕ್ಕೆ ಅಪ್ರಾಪ್ತೆಯನ್ನು ಕರೆದೊಯ್ದು, ಮಾದಕ ದ್ರವ್ಯ ನೀಡಿ ಅತ್ಯಾಚಾರವೆಸಗಲಾಗಿದೆ ಎಂದು ಮಾರ್ಚ್ 20ರಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಳು. ಘಟನೆ ನಡೆದ ಬಳಿಕ ನನಗೆ ಬ್ಲ್ಯಾಕ್ ಮೇಲ್ ಮಾಡಲಾಗಿದ್ದು, 15 ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ವಿಫಲವಾದರೆ ಅತ್ಯಾಚಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಬೆದರಿಕೆ ಹಾಕಿದ್ದರೆಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.