4 ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈರನ್ ಪ್ರಯೋಗ ಅಂತ್ಯ - Corona vaccine dry run
ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ದೇಶಾದ್ಯಂತ ಕೇಂದ್ರ ಸರ್ಕಾರ ಡ್ರೈ ರನ್ ಆರಂಭಿಸಿದ್ದು, 4 ರಾಜ್ಯಗಳಲ್ಲಿ ಡ್ರೈರನ್ ಮುಕ್ತಾಯವಾಗಿದೆ ಎಂದು ತಿಳಿಸಿದೆ. ಈ ವರದಿಯನ್ನು ಆಯಾ ರಾಜ್ಯದ ಟಾಸ್ಕ್ಫೋರ್ಸ್ಗೆ ಸಲ್ಲಿಸಲಿವೆ..
4 ರಾಜ್ಯದಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈರನ್ ಪ್ರಯೋಗ ಅಂತ್ಯ
By
Published : Jan 2, 2021, 7:54 PM IST
ನವದೆಹಲಿ :ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಡಿಸೆಂಬರ್ 28,29ರಂದು ಆಂಧ್ರಪ್ರದೇಶ, ಗುಜರಾತ್, ಅಸ್ಸೋಂ ಮತ್ತು ಪಂಜಾಬ್ ಈ 4 ರಾಜ್ಯಗಳಲ್ಲಿ ಆರಂಭಿಸಿದ್ದ ಕೋವಿಡ್ ಲಸಿಕೆಯ ಡ್ರೈ ರನ್ ಯಶಸ್ವಿಯಾಗಿ ಮುಗಿಸಿದೆ ಎಂದು ಸಚಿವಾಲಯ ತಿಳಿಸಿದೆ. ಇಂದು ಈ ನಾಲ್ಕು ರಾಜ್ಯಗಳ ಮೂರು ಭಾಗಗಳಲ್ಲಿ ಬೆಳಗ್ಗೆ 9ರಿಂದ 11 ಗಂಟೆಯವರೆಗೆ ಡ್ರೈ ರನ್ ನಡೆಸಲಾಯ್ತು ಎಂದು ತಿಳಿಸಿದೆ.
ಲಸಿಕೆ ಡ್ರೈ ರನ್ ಎಂದರೇನು? :ಡ್ರೈ ರನ್ ( ಸಂಭವನೀಯ ವೈಫಲ್ಯದ ಪರಿಣಾಮಗಳನ್ನು ಉದ್ದೇಶಪೂರ್ವಕವಾಗಿ ತಗ್ಗಿಸುವ ಪರೀಕ್ಷಾ ಪ್ರಕ್ರಿಯೆಯಾಗಿದೆ. ಇದು ಪ್ರಕ್ರಿಯೆಯ ಎಲ್ಲಾ ಅಂಶಗಳನ್ನು ಒಳಗೊಂಡ (ಅನುಕರಿಸುವ/ನಕಲಿ) ವ್ಯವಸ್ಥೆಯ ಸಂಪೂರ್ಣ ಪರೀಕ್ಷೆ. ಜನರಿಗೆ ಲಸಿಕೆ ನೀಡುವ ಮೊದಲು ಅಂತಿಮ ಹಂತವಾಗಿ ಡ್ರೈ ರನ್ ನಡೆಸಲಾಗುತ್ತದೆ. ಉದಾಹರಣೆಗೆ ಯಾವುದಾದ್ರೂ ಟಿವಿ ಚಾನೆಲ್ ಆರಂಭಗೊಂಡರೆ ಅದು ನೇರವಾಗಿ ಸಾರ್ವಜನಿಕರ ವೀಕ್ಷಣೆಗೆ ಸಿಗವುದಿಲ್ಲ. ಬದಲಿಗೆ ಹಲವು ಬಾರಿ ಪ್ರಾಯೋಗಿಕವಾಗಿ ಪ್ರಸಾರ ಮಾಡಲಾಗುತ್ತದೆ.
ವ್ಯಾಕ್ಸಿನ್ ಡ್ರೈ ರನ್ ಉದ್ದೇಶ :ಡ್ರೈ ರನ್ ಮಾಡುವುದರಿಂದಾಗಿ ಕೋ-ವಿನ್ ಆಪ್ ಬಳಕೆಯಲ್ಲಿ ಉಂಟಾಗುವ ಕಾರ್ಯಸಾಧ್ಯತೆಗಳು, ಅದರ ಅನುಷ್ಠಾನoಲ್ಲಿ ಉಂಟಾಗಬಹುದಾದ ನ್ಯೂನ್ಯತೆ ಕಂಡುಕೊಳ್ಳಬಹುದು. ಇದು ವ್ಯಾಕ್ಸಿನ ವಿತರಣೆಯ ಹಂತದಲ್ಲಿ ವಿಶ್ವಾಸ ಹೆಚ್ಚಿಸಲಿದೆ.
ಡ್ರೈರನ್ ವಿಧಾನಗಳು
ಮೊದಲಿಗೆ 25 ಮಂದಿ ವೈದ್ಯಕೀಯ ಸಿಬ್ಬಂದಿಯನ್ನು ಡ್ರೈ ರನ್ಗಾಗಿ ಅಲ್ಲಿನ ಮುಖ್ಯ ವೈದ್ಯಕೀಯ ಅಧಿಕಾರಿ ಗುರುತಿಸಬೇಕು.
ಈ ಫಲಾನುಭವಿಗಳನ್ನು ಗುರುತಿಸಿದ ಬಳಿಕ ಅವರ ಮೊಬೈಲ್ ಸಂಖ್ಯೆಗೆ ಮುಂಚಿತವಾಗಿ ಲಸಿಕೆ ಹಾಕುವವರ ವಿವರ ಹಾಗೂ ಸಮಯವನ್ನು ಕಳುಹಿಸಬೇಕು.
ಲಸಿಕೆ ಪಡೆದ ಬಳಿಕ ಮುಂದಿನ 30 ನಿಮಿಷ ಅವರ ಬಳಿ ಅಭಿಪ್ರಾಯ ಸಂಗ್ರಹಿಸುವುದು ಅಥವಾ ಪ್ರತಿಕೂಲ ಘಟನೆ ಕುರಿತು ವಿವರಣೆ ಪಡೆಯುವುದು.
ಇದಾದ ಬಳಿಕ ವರದಿ ತಯಾರಿಸಿ ರಾಜ್ಯ ಟಾಸ್ಕ್ ಫೋರ್ಸ್ಗೆ ಸಲ್ಲಿಸುವುದು.
ಡ್ರೈರನ್ ನಡೆಯುತ್ತಿರುವ ರಾಜ್ಯಗಳು ಹಾಗೂ ಜಿಲ್ಲೆಯ ವಿವರ
ರಾಜ್ಯಗಳು
ಡ್ರೈ ರನ್ ನಡೆಯುವ ಸ್ಥಳಗಳು
ಕೇರಳ
ತಿರುವನಂತಪುರಂ, ಇಡುಕ್ಕಿ, ವಯನಾಡ್, ಪಾಲಕ್ಕಡ್
ಕರ್ನಾಟಕ
ಕಲಬುರಗಿ, ಶಿವಮೊಗ್ಗ, ಮೈಸೂರು, ಬೆಳಗಾವಿ, ಬೆಂಗಳೂರು
ತಮಿಳು ನಾಡು
ಒಟ್ಟು 17 ಸ್ಥಳಗಳು (ಚೆನ್ನೈ, ತಿರುವೇಲ್ವೆಳ್ಳಿ, ಕೋಯ್ಬತ್ತೂರು, ನೀಲ್ಗರಿಸ್ ಮತ್ತು ತಿರುವಲ್ಲೂರ್)
ತೆಲಂಗಾಣ
ನಾಂಪಲ್ಲಿ, ತಿಲಕ್ ನಗರ್, ಸೋಮಾಜಿಗುಡ, ಮೆಹಬೂಬ್ ನಗರ ಜಿಲ್ಲೆಯ ಮೂರು ಕಡೆ
ಮಹಾರಾಷ್ಟ್ರ
ಜಲ್ನಾ, ನಂದುರ್ಬಾರ್, ನಾಗ್ಪುರ್ ಮತ್ತು ಪುಣೆ
ಗುಜರಾತ್
ದಾಹುದ್, ಭಾವ್ನಗರ್, ವಲ್ಸದ್ ಮತ್ತು ಆನಂದ್
ಚತ್ತೀಸ್ಗಡ
ರಾಯ್ಪುರ್, ಸುರ್ಗುಜಾ, ಬಿಲಾಸ್ಪುರ್, ರಾಜನಂದಗಾಂವ್, ದರ್ಗ್, ಬಸ್ತಾರ್ ಮತ್ತು ಗೌರೆಲಾ-ಪೆಂಡ್ರಾ-ಮಾರ್ವಾಹಿ
ಪಂಜಾಬ್
ಪಟಿಯಾಲ
ಉತ್ತರ ಪ್ರದೇಶ
ಲಖನೌನ 6 ವಿವಿಧ ಸ್ಥಳಗಳಲ್ಲಿ
ಗೋವಾ
ಪಣಜಿ, ಕೋರ್ರಲಿಮ್, ಅಲ್ಡೋನಾ ಮತ್ತು ಓಲ್ಡ್ ಗೋವಾ
ಆಂಧ್ರ ಪ್ರದೇಶ
13 ಜಿಲ್ಲೆಗಳು
ಉತ್ತರಾಖಂಡ್
ಡೆಹ್ರಾಡೂನ್, ಭೋಗ್ಪುರ್, ಭನಿಯಾವಾಲಾ, ರಾಣಿಪೋಖರಿ
ಪಶ್ಚಿಮ ಬಂಗಾಳ
ವಿಧಾನ್ ನಗರ್, ಮಧ್ಯಗ್ರಾಮ್, ಅಮ್ಡಂಗಾ ಗ್ರಾಮೀಣ
ಅಸ್ಸೋಂ
ಗುವಾಹಟಿ, ಸೋನಾಪುರ್, ಖಾನಾಪರ ಸ್ಟೇಟ್
ಝಾರ್ಖಂಡ್
ರಾಂಚಿ, ಈಸ್ಟ್ ಸಿಂಗ್‌ಭೂಮ್, ಚತ್ರ, ಪಾಲಾಮು ಮತ್ತು ಪಕೂರ್
ಒರಿಸ್ಸಾ
ಎಲ್ಲಾ 30 ಜಿಲ್ಲೆಗಳು
ಜಮ್ಮು ಮತ್ತು ಕಾಶ್ಮೀರ
ಜಮ್ಮು, ಶ್ರೀನಗರ ಮತ್ತು ಕುಲ್ಗಂ 3 ಜಿಲ್ಲೆಗಳಲ್ಲಿ 9 ಆಸ್ಪತ್ರೆಗಳನ್ನು ಕೇಂದ್ರಾಡಳಿತ ಗುರುತಿಸಿದೆ
ಹರಿಯಾಣ
ಪಂಚಕುಲದ ಮೂರು ಆರೋಗ್ಯ ಕೇಂದ್ರಗಳು
ಹಿಮಾಚಲ ಪ್ರದೇಶ
ಶಿಮ್ಲಾದ ಮೂರು ಕಡೆ (ರಿಪಾನ್, ತೆನ್ಜಿನ್, ಛೋಟಾ ಶಿಮ್ಲಾ)
ಬಿಹಾರ್
ಪಾಟ್ನಾ, ಜಮಾಯ್ ಮತ್ತು ಬೆಟ್ಟಿಯ್ಯಾ
ರಾಜಸ್ಥಾನ್
7 ಜಿಲ್ಲೆಯ 19 ಸ್ಥಳಗಳು (ಬಿಲ್ವಾರ್, ಜೈಪುರ್, ಕರೌಲಿ, ಅಜ್ಮಿರ್, ಬನ್ಸ್ವಾರ, ಜೋಧ್ಪುರ್, ಬಿಕನರ್)
ಮಣಿಪುರ್
ಇಂಪಾಲ್, ತೌಬಾಲ್ ಜಿಲ್ಲೆ
ಮಧ್ಯಪ್ರದೇಶ
ಗಾಂಧಿ ನಗರ್, ಗೋವಿಂದ್ಪುರ್, ಎಲ್ ಎನ್ ಮೆಡಿಕಲ್ ಕಾಲೇಜು