ನವದೆಹಲಿ: 25 ರಾಜ್ಯಗಳ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ (ಗ್ರಾಮ ಪಂಚಾಯಿತಿ) ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ 13,385.70 ಕೋಟಿ ರೂ.ಬಿಡುಗಡೆ ಮಾಡಿದೆ. 15 ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಬಿಡುಗಡೆಯಾದ ಮೊದಲ ಕಂತು ಇದಾಗಿದೆ.
ಈ ಅನುದಾನವು ಸ್ವಚ್ಛತೆ, ಬಯಲು ಮುಕ್ತ ಶೌಚ ನಿರ್ವಹಣೆ, ಕುಡಿಯುವ ನೀರಿನ ಪೂರೈಕೆ, ಮಳೆ ನೀರು ಕೊಯ್ಲು, ನೀರಿನ ಬಳಕೆಗಾಗಿ ಬಳಸಲಾಗುತ್ತದೆ. ಪಂಚಾಯಿತಿಗಳಿಗೆ ಹಂಚಿಕೆಯಾದ ಒಟ್ಟು ಅನುದಾನದ ಶೇಕಡಾ 60 ರಷ್ಟು ‘ಟೈಡ್’ ಗ್ರಾಂಟ್ ಆಗಿದೆ. ಉಳಿದ ಶೇಕಡಾ 40 ರಷ್ಟನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದು.
ಕೇಂದ್ರೀಕೃತ ಪ್ರಾಯೋಜಿತ ಯೋಜನೆಗಳ (Tied) ಅಡಿಯಲ್ಲಿ ನೈರ್ಮಲ್ಯ ಮತ್ತು ಕುಡಿಯುವ ನೀರಿಗಾಗಿ ಕೇಂದ್ರ ಮತ್ತು ರಾಜ್ಯಸರ್ಕಾರದಿಂದ ಮಂಜೂರಾದ ನಿಧಿಯ ಆಧಾರದ ಮೇಲೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚುವರಿ ನಿಧಿಯ ಲಭ್ಯತೆ ಖಾತ್ರಿಪಡಿಸುವುದಕ್ಕಾಗಿ ಈ ನಿಧಿ ಬಳಸಬಹುದು.
ಇದನ್ನೂ ಓದಿ: ತೈಲ ಬೆಲೆ ಸ್ಥಿರ: ದೇಶಾದ್ಯಂತ ಪೆಟ್ರೋಲ್-ಡೀಸೆಲ್ ದರಗಳು ಹೀಗಿವೆ..
ಕೇಂದ್ರ ಸರ್ಕಾರದಿಂದ ರಾಜ್ಯಗಳು ಸ್ವೀಕರಿಸಿದ ಅನುದಾನವನ್ನು 10 ಕೆಲಸದ ದಿನಗಳಲ್ಲಿ (Working Days) ಈ ಅನುದಾನ ವರ್ಗಾಯಿಸಬೇಕಾಗುತ್ತದೆ. ಒಂದು ವೇಳೆ, ಈ ನಿಯಮ ಮೀರಿದರೆ ಬಡ್ಡಿಯೊಂದಿಗೆ ಅನುದಾನ ಬಿಡುಗಡೆ ಮಾಡಬೇಕಾಗುತ್ತದೆ.