ಗ್ವಾಲಿಯರ್(ಮಧ್ಯಪ್ರದೇಶ):ದೇಶದಲ್ಲಿ ಆಮ್ಲಜನಕರ ಕೊರತೆಯಿಂದಾಗಿ ಹಾಹಾಕಾರ ಉಂಟಾಗಿದ್ದು, ಕೆಲವೊಂದು ಆಸ್ಪತ್ರೆಗಳಲ್ಲಿ ಇದೇ ಕಾರಣದಿಂದಾಗಿ ರೋಗಿಗಳು ತಮ್ಮ ಪ್ರಾಣ ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ಆಮ್ಲಜನಕ ಪೂರೈಕೆಗೆ ಮುಂದಾದ ಸ್ಥಾವರದ ಮುಂದೆ ಮಂಡಿ ಊರಿ ನಮಸ್ಕರಿಸಿದ ಇಂಧನ ಸಚಿವ! - ಮಧ್ಯಪ್ರದೇಶ ಇಂಧನ ಸಚಿವ
ಆಮ್ಲಜನಕ ನೀಡಲು ಒಪ್ಪಿಕೊಳ್ಳುತ್ತಿದ್ದಂತೆ ಸಚಿವರೊಬ್ಬರು ಸ್ಥಾವರದ ಆಯೋಜಕರ ಮುಂದೆ ಮಂಡಿ ಊರಿ ನಮಸ್ಕಾರ ಮಾಡಲು ಮುಂದಾದ ಘಟನೆ ನಡೆದಿದೆ.
ಮಧ್ಯಪ್ರದೇಶದಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಕಳೆದ ರಾತ್ರಿ ಮೂವರು ರೋಗಿಗಳು ಇದೇ ಕಾರಣಕ್ಕಾಗಿ ಸಾವನ್ನಪ್ಪಿದ್ದಾರೆ. ಇದರ ಮಧ್ಯೆ ಕೊರೊನಾ ಉಸ್ತುವಾರಿ ಮತ್ತು ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಆಮ್ಲಜನಕ ನೀಡಲು ಒಪ್ಪಿಕೊಂಡಿರುವ ಮಲನ್ಪುರ ಇಂಡಸ್ಟ್ರೀಸ್ನ ಸೂರ್ಯ ರೋಶ್ನಿ ಕಾರ್ಖಾನೆ ಹಾಗೂ ಆಯೋಜಕರ ಮುಂದೆ ಮಂಡಿ ಊರಿ ನಮಸ್ಕರಿಸಲು ಮುಂದಾದ ಘಟನೆ ನಡೆದಿದೆ.
ಕಾರ್ಖಾನೆಗೆ ತೆರಳಿ ಆಮ್ಲಜನಕ ನೀಡುವಂತೆ ಮನವಿ ಮಾಡಿಕೊಂಡಿರುವ ಸಚಿವರಿಗೆ ಸಕಾರಾತ್ಮಕ ಉತ್ತರ ಸಿಕ್ಕಿದ್ದು, ಮುಂದಿನ 24 ಗಂಟೆಗಳಲ್ಲಿ 250 ಆಮ್ಲಜನಕ ಸಿಲಿಂಡರ್ ನೀಡುವುದಾಗಿ ಒಪ್ಪಿಕೊಂಡಿದ್ದಾರೆ. ಈ ವೇಳೆ ಆಯೋಜಕರು ಹಾಗೂ ಸ್ಥಾವರದ ಮುಂದೆ ಮಂಡಿ ಊರಿ ನಮಸ್ಕಾರ ಮಾಡಲು ಮುಂದಾಗಿದ್ದಾರೆ. ತಕ್ಷಣವೇ ಅಲ್ಲಿಗೆ ಓಡಿ ಬಂದ ಆಯೋಜಕರು ಸಚಿವರ ಕಾಲು ಹಿಡಿಯಲು ಯತ್ನಿಸಿದ್ದಾರೆ. ಆಮ್ಲಜನಕ ನೀಡಲು ಮುಂದಾಗಿರುವ ಕಾರ್ಖಾನೆ ಸಂಯೋಜಕರಿಗೆ ಸಚಿವರು ಅಭಿನಂದನೆ ಸಲ್ಲಿಸಿದ್ದು, ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.