ಜಂಬೂರ್(ಗುಜರಾತ್): ಮಿನಿ ಆಫ್ರಿಕಾ ಎಂದೇ ಕರೆಯಲ್ಪಡುವ ಜಂಬೂರ್ ಗ್ರಾಮದ ನಿವಾಸಿಗಳು ಮೊದಲ ಬಾರಿಗೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಇದಕ್ಕಾಗಿ ಜಂಬೂರ್ ನಿವಾಸಿಗಳು ಮತದಾನ ಪ್ರಕ್ರಿಯೆಯ ಭಾಗವಾಗಲು ಅವಕಾಶ ನೀಡಿದ್ದಕ್ಕೆ ಭಾರತೀಯ ಚುನಾವಣಾ ಆಯೋಗಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಗುಜರಾತ್ ಚುನಾವಣೆ: ಮೊದಲ ಬಾರಿಗೆ ಮತ ಚಲಾಯಿಸಿದ ಸಿದ್ಧಿ ಬುಡಕಟ್ಟು ಸಮುದಾಯ
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಂಬೂರ್ ಗ್ರಾಮದ ನಿವಾಸಿಗಳು ಮೊದಲ ಬಾರಿಗೆ ಮತದಾನ ಮಾಡಿದ್ದಾರೆ.
ಗುಜರಾತ್ ಚುನಾವಣೆ: ಮೊದಲ ಬಾರಿಗೆ ಮತ ಚಲಾಯಿಸಿದ ಸಿದ್ಧಿ ಬುಡಕಟ್ಟು ಸಮುದಾಯ
ಜಂಬೂರ್ ನಿವಾಸಿಗಳು ಮೂಲತಃ ಆಫ್ರಿಕಾದಿಂದ ಭಾರತಕ್ಕೆ ವಲಸೆ ಬಂದವರು. ಸಿದ್ಧಿ ಬುಡಕಟ್ಟು ಸಮುದಾಯ ಎಂದೇ ಗುರುತಿಸಿಕೊಂಡ ಇವರಿಗೆ ಇಲ್ಲಿಯವರೆಗೂ ಯಾವುದೇ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡಿರಲಿಲ್ಲ. ಇದೀಗ ಮೊದಲ ಬಾರಿಗೆ 2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿದೆ. ಇದು ಆ ಸಮುದಾಯದಲ್ಲಿ ಭಾರಿ ಸಂತಸ ತಂದಿದೆ.
ಇದನ್ನೂ ಓದಿ:ಗುಜರಾತ್ ವಿಧಾನಸಭಾ ಚುನಾವಣೆ: ಈವರೆಗೆ ಶೇ 19.13 ರಷ್ಟು ಮತದಾನ
Last Updated : Dec 1, 2022, 5:00 PM IST