ಕರ್ನಾಟಕ

karnataka

By

Published : Feb 20, 2021, 9:14 AM IST

ETV Bharat / bharat

ಇಂದು ಭಾರತ - ಚೀನಾ 10ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ

ಚೀನಾದ ಬಳಿಯ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಇಂದು ಬೆಳಗ್ಗೆ 10 ಗಂಟೆಗೆ ಮಾತುಕತೆ ನಡೆಯಲಿದ್ದು, ಪ್ಯಾಂಗಾಂಗ್​ ಸರೋವರದಿಂದ ಉಭಯ ದೇಶಗಳ ಸೇನೆಗಳು ಹಿಂದಕ್ಕೆ ಸರಿದಿರುವ ಕುರಿತು ಉಭಯ ರಾಷ್ಟ್ರಗಳು ಚರ್ಚಿಸಲಿವೆ.

ಭಾರತ ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ  Military commanders of India China to hold talks today
ಭಾರತ - ಚೀನಾ 10ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ

ನವದೆಹಲಿ:ಇಂದು ಭಾರತ - ಚೀನಾ ನಡುವೆ 10ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ.

ಪ್ಯಾಂಗಾಂಗ್​​​ ಸರೋವರದ ಉತ್ತರ ಮತ್ತು ದಕ್ಷಿಣ ತೀರಗಳಿಂದ ಉಭಯ ದೇಶಗಳು ತಮ್ಮ ಸೇನೆಯನ್ನು ವಾಪಸ್​​​ ಕರೆಯಿಸಿಕೊಂಡಿವೆ. ಚೀನಾದ ಬಳಿಯ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಇಂದು ಬೆಳಗ್ಗೆ 10 ಗಂಟೆಗೆ ಮಾತುಕತೆ ನಡೆಯಲಿದ್ದು, ಪ್ಯಾಂಗಾಂಗ್​ ಸರೋವರದಿಂದ ಸೇನೆಗಳು ಹಿಂದಕ್ಕೆ ಸರಿದಿರುವ ಕುರಿತು ಉಭಯ ರಾಷ್ಟ್ರಗಳು ಚರ್ಚಿಸಲಿವೆ ಎಂದು ಸೇನಾ ಮೂಲಗಳು ತಿಳಿಸಿವೆ.

ಕಾರ್ಪ್ಸ್ ಕಮಾಂಡರ್‌ಗಳು ಹಾಟ್ ಸ್ಪ್ರಿಂಗ್ಸ್, ಗೊಗ್ರಾ ಮತ್ತು 900 ಚದರ್​ ಕಿ.ಮೀ ಡೆಪ್ಸಾಂಗ್ ಬಯಲು ಸೇರಿದಂತೆ ಇತರ ಘರ್ಷಣೆ ಪ್ರದೇಶಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ತ್ರಿವರ್ಣ ಧ್ವಜದ ಬಗ್ಗೆ ವಿವಾದಾತ್ಮಕ ಹೇಳಿಕೆ: ಮೆಹಬೂಬಾ ಮುಫ್ತಿ ವಿರುದ್ಧ ಕೇಸ್​

ಕಳೆದ ವಾರ ಸಂಸತ್​ ಅಧಿವೇಶನದಲ್ಲಿ ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಚೀನಾದೊಂದಿಗಿನ ನಮ್ಮ ನಿರಂತರ ಮಾತುಕತೆಗಳು ಪ್ಯಾಂಗಾಂಗ್​​ ಸರೋವರದ ಉತ್ತರ ಮತ್ತು ದಕ್ಷಿಣ ತೀರದಿಂದ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಹಾಗೂ ಭಾರತೀಯ ಸೇನೆ ಹಿಂದೆ ಸರಿಯುವ ಒಪ್ಪಂದ ಮಾಡಿಕೊಳ್ಳಲು ಕಾರಣವಾಗಿವೆ ಎಂದು ಹೇಳಿದ್ದರು. ಇದಕ್ಕೆ ಪೂರಕವಾದ ಫೋಟೋ ಮತ್ತು ವಿಡಿಯೋಗಳನ್ನ ಭಾರತೀಯ ಸೇನೆ ಬಿಡುಗಡೆ ಮಾಡಿತ್ತು.

ABOUT THE AUTHOR

...view details