ಕರ್ನಾಟಕ

karnataka

ETV Bharat / bharat

ಜಮ್ಮು ಕಾಶ್ಮೀರದಲ್ಲಿ ಕಿರುತೆರೆ ನಟಿಯನ್ನು ಗುಂಡಿಕ್ಕಿ ಕೊಂದ ಉಗ್ರರು - ನಟಿಯ ಮೇಲೆ ಗುಂಡಿನ ದಾಳಿ

ಜಮ್ಮು-ಕಾಶ್ಮೀರದಲ್ಲಿ ಕಿರುತೆರೆ ನಟಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ದಾಳಿ ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವರು ಟ್ವೀಟ್​ ಮಾಡಿದ್ದಾರೆ.

militants-fired-upon
ಮಹಿಳೆ ಗುಂಡಿಕ್ಕಿ ಕೊಂದ ಉಗ್ರರು

By

Published : May 25, 2022, 11:03 PM IST

Updated : May 26, 2022, 12:22 PM IST

ಕಾಶ್ಮೀರ:ಜಮ್ಮು- ಕಾಶ್ಮೀರದಲ್ಲಿ ಟಿಕ್​ಟಾಕ್​ ಸ್ಟಾರ್ ಹಾಗೂ ಕಿರುತೆರೆ ನಟಿಯನ್ನು ​ಗುಂಡಿಟ್ಟು ಕೊಲೆ ಮಾಡಲಾಗಿದೆ. ಬದ್ಗಾಮ್​ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೃತ ನಟಿಯನ್ನು ಅಮ್ರೀನ್​ ಭಟ್​ ಎಂದು ಗುರುತಿಸಲಾಗಿದೆ. ಮನೆಯ ಬಳಿಯೇ ಉಗ್ರರು ಅವರ ಮೇಲೆ ರಾತ್ರಿ 8 ಗಂಟೆಗೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅವರ ಸಹೋದರ ಸಂಬಂಧಿ ಫರಾನ್​ ಝಬೈರ್​ ಕೂಡಾ ಗಾಯೊಂಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಕಿರುತೆರೆ ನಟಿಯನ್ನು ಗುಂಡಿಕ್ಕಿ ಕೊಂದ ಉಗ್ರರು

ಅಮ್ರೀನ್​ ಅವರನ್ನು ಆಸ್ಪತ್ರೆಗೆ ಕರೆದೊಯ್ಯುದರೊಳಗೆ ಆಕೆ ಮೃತಪಟ್ಟಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಅಮ್ರೀನ್​ ಭಟ್​ ಗಾಯನ, ಕಿರುಚಿತ್ರದ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದರು. ಗುಂಡಿನ ದಾಳಿಯ ಬಳಿಕ ಆ ಪ್ರದೇಶಕ್ಕೆ ಬಿಗಿ ಭದ್ರತೆ ನೀಡಲಾಗಿದೆ.

ಕಿರುತೆರೆ ನಟಿ ಅಮ್ರೀನ್​ ಭಟ್​ ಅವರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವರು ಟ್ವೀಟ್​ ಮಾಡಿದ್ದಾರೆ.

ಓದಿ:ಎಂಟೇ ವರ್ಷ.. 25 ಭಾಷೆಯ ಮೂಲಕ ಮೇರು ಸಾಧನೆ: 95 ಕವನಗಳ ನಿರಂತರ ವಾಚಿಸುವ ಗುರಿ!

Last Updated : May 26, 2022, 12:22 PM IST

ABOUT THE AUTHOR

...view details