ಶ್ರೀನಗರ (ಜಮ್ಮು- ಕಾಶ್ಮೀರ):ಕಾಶ್ಮೀರದಲ್ಲಿ ಉಗ್ರ ದಮನ ಕಾರ್ಯ ಮುಂದುವರಿದಿದ್ದು, ಈ ವರ್ಷದ ಮೊದಲ 3 ತಿಂಗಳಲ್ಲಿ 58 ಉಗ್ರರ ಪೈಕಿ 42 ಜನರನ್ನು ಮಟ್ಟ ಹಾಕಲಾಗಿದೆ. ಕಾರ್ಯಾಚರಣೆಯಲ್ಲಿ 8 ಭದ್ರತಾ ಸಿಬ್ಬಂದಿ, ಅನೇಕ ನಾಗರಿಕರು ಕೂಡ ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿಯಲ್ಲಿ 13 ಸ್ಥಳೀಯ ಮತ್ತು ಪಾಕಿಸ್ತಾನ ಸೇರಿದಂತೆ ಇತರ ದೇಶಗಳಿಂದ ನುಸುಳಿದ 9 ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಈ ವೇಳೆ ಒಬ್ಬ ಭದ್ರತಾ ಸಿಬ್ಬಂದಿ ಹತನಾಗಿದ್ದಾನೆ. ಫೆಬ್ರವರಿಯಲ್ಲಿ 7 ಉಗ್ರರು, ಮೂವರು ಭದ್ರತಾ ಪಡೆ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಸೇರಿ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಾರ್ಚ್ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅತಿ ಹೆಚ್ಚು ಅಂದರೆ 24 ಪ್ರಾಣಗಳು ಆಹುತಿಯಾಗಿವೆ. ಇದರಲ್ಲಿ ಇಬ್ಬರು ವಿದೇಶಿ ಮತ್ತು 11 ಸ್ಥಳೀಯ ಉಗ್ರರು ಕೊಲ್ಲಲ್ಪಟ್ಟಿದ್ದಾರೆ. ಅಲ್ಲದೇ, 7 ನಾಗರಿಕರು ಮತ್ತು ನಾಲ್ವರು ಭದ್ರತಾ ಸಿಬ್ಬಂದಿ ಅಸುನೀಗಿದ್ದಾರೆ.