ಕರ್ನಾಟಕ

karnataka

By

Published : Aug 20, 2021, 8:46 AM IST

Updated : Aug 20, 2021, 3:14 PM IST

ETV Bharat / bharat

ಪುಲ್ವಾಮಾ ಎನ್​ಕೌಂಟರ್​: ಇಬ್ಬರು ಉಗ್ರರ ಹತ್ಯೆಗೈದ ಭಾರತೀಯ ಸೇನೆ

ಪುಲ್ವಾಮಾ ಜಿಲ್ಲೆಯ ಕ್ರೀವ್​ ಪಾಂಪೋರ್ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್​ಕೌಂಟರ್​ ನಡೆದಿದ್ದು, ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ.

Militant killed
ಪುಲ್ವಾಮಾ ಎನ್​ಕೌಂಟರ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್​ಕೌಂಟರ್‌ನಲ್ಲಿ ಭಾರತೀಯ ಸೇನೆಯು ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ ಎಂದು ಕಾಶ್ಮೀರ ವಲಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪುಲ್ವಾಮಾ ಜಿಲ್ಲೆಯ ಕ್ರೀವ್​ ಪಾಂಪೋರ್ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್​ಕೌಂಟರ್​ನಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.

ನಿನ್ನೆ ಸಂಜೆ ಉಗ್ರರು ಶ್ರೀನಗರದ ಸರಾಫ್ ಕಡಲ್‌ನಲ್ಲಿ ಪೊಲೀಸ್​ ಮತ್ತು ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಪೊಲೀಸರು ಮತ್ತು ಓರ್ವ ನಾಗರಿಕ ಗಾಯಗೊಂಡಿದ್ದರು.

Last Updated : Aug 20, 2021, 3:14 PM IST

ABOUT THE AUTHOR

...view details