ರಾಂಬನ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಉಗ್ರರ ಅಡಗುತಾಣವನ್ನು ಭೇದಿಸಿದ್ದು, ಕೆಲ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗೂಲ್ ಉಪವಿಭಾಗದ ಸಂಗಲ್ಡಾನ್‌ನ ತೆಥರ್ಕಾ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರ ಅಡಗುತಾಣ ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಗ್ರರ ಅಡಗುತಾಣದಲ್ಲಿ ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್, ಮ್ಯಾಗಜೀನ್ ಹೊಂದಿರುವ ಚೈನೀಸ್ ಪಿಸ್ತೂಲ್ ಮತ್ತು 36 ಕಾಟ್ರಿಡ್ಜ್‌ಗಳು, ಒಂದು ಚಾಕು, 198 ಬುಲೆಟ್‌ಗಳ ನಾಲ್ಕು ಎಕೆ 47 ರೈಫಲ್ ಮ್ಯಾಗಜೀನ್‌ಗಳು, ಒಂಬತ್ತು ಎಂಎಂ ಪಿಸ್ತೂಲ್ ಗುಂಡುಗಳು, ಬೈನಾಕ್ಯುಲರ್, ಕ್ಯಾಮರಾ ಮತ್ತು ವೈರ್‌ಲೆಸ್ ಸೆಟ್ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಚಿಕಿತ್ಸೆಗೆ ಬಂದು ಸಿಕ್ಕಿಬಿದ್ದ ಮೋಸ್ಟ್ ವಾಂಟೆಡ್ ನಕ್ಸಲ್: ಈತನ ತಲೆಗೆ ಘೋಷಿಸಲಾಗಿತ್ತು 15 ಲಕ್ಷ ರೂ. ಬಹುಮಾನ