ಜೋರ್ಹತ್ (ಅಸ್ಸೋಂ): ಜೋರ್ಹತ್ ಮಿಲಿಟರಿ ಠಾಣೆಯ ಸೇನಾ ಗೇಟ್ ಬಳಿ ಗುರುವಾರ ಸಂಜೆ ಲಘು ಸ್ಫೋಟ ಸಂಭವಿಸಿದ ಸದ್ದು ಕೇಳಿಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಗಣರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಇಂತಹ ಘಟನೆಗಳು ಸಂಭವಿಸುತ್ತಿರುವುದು ಕೆಲ ಅನುಮಾನಗಳನ್ನು ಹುಟ್ಟುಹಾಕಿದೆ. ಇದು ಬಾಂಬ್ ಸ್ಫೋಟವೋ ಅಥವಾ ಇನ್ನಾವುದೋ ಸ್ಫೋಟವೋ ಎಂಬುದು ಸ್ಪಷ್ಟವಾಗಿಲ್ಲ, ಸೇನಾ ಠಾಣೆಯ ಆವರಣದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದ್ದು, ಪೊಲೀಸ್ ತನಿಖೆ ಚುರುಕುಗೊಂಡಿದೆ. ಈ ಕುರಿತಾದ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಈ ನಡುವೆ ಜಿಲ್ಲಾಧಿಕಾರಿ ಪುಲ್ಲಕ್ ಮಹಾಂತ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಸದ್ಯ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಈ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಪಟ್ಟಣದಾದ್ಯಂತ ಗಸ್ತು ತೀವ್ರಗೊಳಿಸಲಾಗಿದೆ.
ಈ ನಡುವೆ ಉಲ್ಫಾ (ಐ) ಭಾನುವಾರದ ಇ-ಮೇಲ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, "ತಿನ್ಸುಕಿಯಾ ಮತ್ತು ಶಿವಸಾಗರ್‌ನಲ್ಲಿ ಇತ್ತೀಚೆಗೆ ನಡೆದ ಎರಡು ಸ್ಫೋಟಗಳ ಹೊಣೆಯನ್ನು ಹೊತ್ತುಕೊಂಡಿದೆ". ನವೆಂಬರ್ 22 ರಂದು ಟಿನ್ಸುಕಿಯಾದ ಡಿರಾಕ್‌ನಲ್ಲಿರುವ ಸೇನಾ ಶಿಬಿರದ ಬಳಿ ಗ್ರೆನೇಡ್ ಸ್ಫೋಟದ ನಂತರ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ, ಆದರೆ ಡಿಸೆಂಬರ್ ಒಂಬತ್ತರಂದು ಸಿಆರ್‌ಪಿಎಫ್ ಶಿಬಿರದ ಬಳಿ ಕೇಳಿ ಬಂದ ಸ್ಫೋಟದ ಬಗ್ಗೆ ಪೊಲೀಸರು ಯಾವುದೇ ಖಚಿತ ಮಾಹಿತಿ ನೀಡಿಲ್ಲ.
ಮತ್ತೊಂದೆಡೆ ಮೊನ್ನೆಯ ಉಲ್ಫಾದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಪೊಲೀಸ್, ಸೇನೆ ಮತ್ತು CAPF ನ ಪ್ರತಿಯೊಬ್ಬ ಸಿಬ್ಬಂದಿ ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಬದ್ದವಾಗಿದೆ. ಈ ಹಿನ್ನೆಲೆಯಲ್ಲಿಯೇ ರಾಷ್ಟ್ರಧ್ವಜದ ಅಡಿ ಪ್ರತಿ ಸಿಬ್ಬಂದಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದು X ಆ್ಯಪ್ನ DGP ಖಾತೆಯ ಪೋಸ್ಟ್ ನಲ್ಲಿ ಹೇಳಲಾಗಿದೆ.
"ನಮ್ಮ ರಾಜ್ಯದ ಬೆಳವಣಿಗೆಗೆ ಅಡ್ಡಿಯುಂಟುಮಾಡುವ ಭಯೋತ್ಪಾದನೆಯ ಅವಶೇಷಗಳನ್ನು ನಾಶಮಾಡಲು ನಾವು ಬದ್ಧರಾಗಿದ್ದೇವೆ ಮತ್ತು ಅದಕ್ಕಾಗಿ, ನಾವು ನಮ್ಮ ಪ್ರಾಣವನ್ನು ತ್ಯಾಗ ಮಾಡಲು ಹಿಂಜರಿಯುವುದಿಲ್ಲ ಎಂದು ಡಿಜಿಪಿ ಹೇಳಿದ್ದಾರೆ.
ಇದನ್ನೂ ಓದಿ :ಸಹರಾನ್‌ಪುರದಲ್ಲಿ ಸೇನಾ ಕ್ಷಿಪಣಿ ಶೆಲ್ ಸ್ಫೋಟ, ಬಾಲಕ ಸಾವು