ಕರ್ನಾಟಕ

karnataka

ETV Bharat / bharat

ಭಾರತೀಯ ನೌಕಾಪಡೆಯು ಆದ್ಯತೆಯ ಭದ್ರತಾ ಪಾಲುದಾರರಾಗಲು ಬಯಸುತ್ತಿದೆ: ನೌಕಾಪಡೆಯ ಮುಖ್ಯಸ್ಥ - ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್

ಮಿಲನ್​ನ ಪ್ರಯೋಜನಗಳಿಗೆ ಸಂಬಂಧಿಸಿದಂತೆ ನೌಕಾಪಡೆಯ ಮುಖ್ಯಸ್ಥರು ಮಾತನಾಡಿ, ಇತರ ನೌಕಾಪಡೆಗಳೊಂದಿಗೆ ಪರಸ್ಪರ ಕಾರ್ಯಸಾಧ್ಯತೆ ಸಾಧಿಸುವುದು, ಇತರ ನೌಕಾಪಡೆಗಳಿಂದ ಉತ್ತಮ ಅಭ್ಯಾಸಗಳನ್ನು ಕಲಿಯುವುದು ಮತ್ತು ನೌಕಾಪಡೆಗಳಲ್ಲಿ ನಂಬಿಕೆಯನ್ನು ಬೆಳೆಸುವುದು ಇದರ ಪ್ರಮುಖ ಕಾರ್ಯ ಆಗಿದೆ ಎಂದು ಹೇಳಿದರು.

MILAN-2022: Indian Navy seeking to be preferred security partner of smaller countries in the region says Navy Chief
MILAN-2022: Indian Navy seeking to be preferred security partner of smaller countries in the region says Navy Chief

By

Published : Feb 27, 2022, 11:00 PM IST

ವಿಶಾಖಪಟ್ಟಣ (ಆಂಧ್ರಪ್ರದೇಶ): ನೌಕಾಪಡೆಯು ಈ ಪ್ರದೇಶದಲ್ಲಿನ ಎಲ್ಲಾ ಸಣ್ಣ ದೇಶಗಳ ಆದ್ಯತೆಯ ಭದ್ರತಾ ಪಾಲುದಾರರಾಗಲು ಬಯಸುತ್ತದೆ ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಹೇಳಿದ್ದಾರೆ.

ಮಿಲನ್-2022 ರ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ನೌಕಾಪಡೆಯು ಈ ಪ್ರದೇಶದ ಎಲ್ಲಾ ಸಣ್ಣ ದೇಶಗಳ ಆದ್ಯತೆಯ ಭದ್ರತಾ ಪಾಲುದಾರರಾಗಲು ಪ್ರಯತ್ನಿಸುತ್ತಿದೆ, ಮಾತ್ರವಲ್ಲದೆ ನೈಸರ್ಗಿಕ ವಿಕೋಪ ಸಂಭವಿಸಿದಾಗಲೆಲ್ಲಾ ಪ್ರತಿಕ್ರಿಯಿಸುವ ಸಾಲಿನಲ್ಲಿ ಮೊದಲನೆಯದು ಎಂದು ಹೇಳಿದರು.

ಭಾರತೀಯ ನೌಕಾಪಡೆಯು ತನ್ನ ಸ್ನೇಹಪರ ನೆರೆಹೊರೆಯವರೊಂದಿಗೆ ಈಗ ಉನ್ನತ ಮಟ್ಟದ ವಿಶ್ವಾಸವನ್ನು ಗಳಿಸಿದೆ. ಬಹುಪಕ್ಷೀಯ ನೌಕಾ ವ್ಯಾಯಾಮವು ಭಾರತವು ಒಂದು ರಾಷ್ಟ್ರವಾಗಿ ಹೇಗೆ ಬೆಳೆದಿದೆ ಮತ್ತು ಕಾಲಾನಂತರದಲ್ಲಿ ನೌಕಾಪಡೆಯು ಹೇಗೆ ವಿಕಸನಗೊಂಡಿತು ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಮಿಲನ್​ನ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಮಾತನಾಡಿ, ಇದರಲ್ಲಿ ಮೂರು ಪ್ರಯೋಜನ ಇದೆ. ಇತರ ನೌಕಾಪಡೆಗಳೊಂದಿಗೆ ಪರಸ್ಪರ ಕಾರ್ಯಸಾಧ್ಯತೆ. ಇತರ ನೌಕಾಪಡೆಗಳಿಂದ ಉತ್ತಮ ಅಭ್ಯಾಸಗಳನ್ನು ಕಲಿಯುವುದು ಮತ್ತು ನೌಕಾಪಡೆಗಳಲ್ಲಿ ನಂಬಿಕೆಯನ್ನು ಬೆಳೆಸುವುದು ಎಂದು ವಿವರಿಸಿದರು.

ಸಮುದ್ರದಲ್ಲಿ ಕಾರ್ಯನಿರ್ವಹಿಸುವುದು, ಒಟ್ಟಿಗೆ ಕೆಲಸ ಮಾಡುವುದು ಮತ್ತು ಸ್ನೇಹ ಬೆಳೆಸುವುದು ನೌಕಾಪಡೆಗಳ ನಡುವೆ ನಂಬಿಕೆಯ ಬೆಳವಣಿಗೆಗೆ ಕಾರಣವಾಗಿದೆ. ಇದು ನಮಗೆ ಬಹಳ ಮುಖ್ಯ ಎಂದರು.

ಇದನ್ನೂ ಓದಿ:ರಷ್ಯಾದ ಪರಮಾಣು ಬೆದರಿಕೆಗೆ ಬೆಚ್ಚಿತಾ ಉಕ್ರೇನ್​ : ಕೊನೆಗೂ ಶಾಂತಿ ಮಾತುಕತೆಗೆ ಒಪ್ಪಿದ ಝೆಲೆನ್ಸ್ಕಿ

ದ್ವೈವಾರ್ಷಿಕ ಬಹುಪಕ್ಷೀಯ ನೌಕಾ ವ್ಯಾಯಾಮದ ಉದ್ಘಾಟನಾ ಸಮಾರಂಭ ಮಿಲನ್​ 22 ಶನಿವಾರ ವಿಶಾಖಪಟ್ಟಣಂನ ನೌಕಾ ಸಭಾಂಗಣದಲ್ಲಿ ಆರಂಭವಾಗಿದೆ.ಇದರಲ್ಲಿ ಭಾರತೀಯ ನೌಕಾಪಡೆಯ ಮುಖ್ಯಸ್ಥರು, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ, ರಾಯಭಾರಿಗಳು, ಹೈಕಮಿಷನರ್‌ಗಳು, ನೌಕಾಪಡೆಗಳ ಮುಖ್ಯಸ್ಥರು, ಭಾಗವಹಿಸುವ ದೇಶಗಳ ನಿಯೋಗ ಮುಖ್ಯಸ್ಥರು ಮತ್ತು ಭಾಗವಹಿಸುವ ಎಲ್ಲಾ ಹಡಗುಗಳ ಕಮಾಂಡಿಂಗ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ವಿಶಾಖಪಟ್ಟಣದ ಇತಿಹಾಸದಲ್ಲಿ ಚಿರಾಯುವಾಗಿ ಉಳಿದುಕೊಳ್ಳುವ ಹಾಗೆ ಮಿಲನ್ ಸಮರಾಭ್ಯಾಸ ನಡೆಯುತ್ತಿದ್ದು, 39 ದೇಶಗಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿವೆ. ನೌಕಾ ಕವಾಯತುಗಳಿಗೆ ಕಡಲತೀರವೇ ವೇದಿಕೆಯಾಗಿದೆ.

For All Latest Updates

ABOUT THE AUTHOR

...view details