ನವದೆಹಲಿ: ಭಾರತೀಯ ನೌಕಾಪಡೆಯ ಮಿಗ್- 29K ಎಂಬ ತರಬೇತಿದಾರರ ವಿಮಾನವೊಂದು ಗುರುವಾರ ಸಂಜೆ ಹಾರಾಟ ನಡೆಸುತ್ತಿದ್ದಾಗ ಪತನಗೊಂಡಿದೆ. ಘಟನೆಯಲ್ಲಿ ಓರ್ವ ಪೈಲಟ್ನನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ಪೈಲಟ್ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.
ಹಾರಾಟ ನಡೆಸುತ್ತಿದ್ದಾಗ ಭಾರತೀಯ ನೌಕಾಪಡೆ ವಿಮಾನ ಪತನ! ಪೈಲಟ್ ಕಾಣೆ - ವಿಮಾನ ಪತನ
ಭಾರತೀಯ ನೌಕಾಪಡೆಯ ಮಿಗ್ 29K ತರಬೇತಿ ವಿಮಾನವೊಂದು ಅರಬ್ಬಿ ಸಮುದ್ರದ ಮೇಲೆ ಹಾರಾಟ ನಡೆಸುತ್ತಿದ್ದ ವೇಳೆ ಪತನಗೊಂಡಿದೆ.
ನೌಕಾಪಡೆಯ ವಿಮಾನ ಪತನ
ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಅರೇಬಿಯನ್ ಸಮುದ್ರದಲ್ಲಿ ಹಾರಾಟ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ಈ ಮಾಹಿತಿ ದೃಢಪಡಿಸಿದ್ದಾರೆ.
ನಾಪತ್ತೆಯಾದ ಪೈಲಟ್ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಅಲ್ಲದೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.