ಶ್ರೀಶೈಲಂ(ಆಂಧ್ರಪ್ರದೇಶ): ಯುಗಾದಿ ಹಬ್ಬಕ್ಕೆ ಆಂಧ್ರಪ್ರದೇಶದ ಶ್ರೀಶೈಲಂ ಕ್ಷೇತ್ರದಲ್ಲಿ ಭರ್ಜರಿ ಸಿದ್ಧತೆ ನಡೆದಿದ್ದು, ಈ ಬೆನ್ನಲ್ಲೇ ಬುಧವಾರ ಮಧ್ಯರಾತ್ರಿ ಶ್ರೀಶೈಲಂನಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ದೇವಾಲಯದ ಆವರಣದಲ್ಲಿ ಕರ್ನಾಟಕದಿಂದ ತೆರಳಿದ್ದ ಭಕ್ತರು ಮತ್ತು ಸ್ಥಳೀಯರ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಈ ಘಟನೆಯಲ್ಲಿ ದೇವಾಲಯದ ಸಮೀಪದಲ್ಲಿದ್ದ ಟೀ ಅಂಗಡಿಗೆ ಮತ್ತು ಹಲವು ವಾಹನಗಳಿಗೆ ಹಾನಿಯಾಗಿದೆ.
ಆಂಧ್ರದ ಶ್ರೀಶೈಲಂನಲ್ಲಿ ಕನ್ನಡಿಗರು, ಸ್ಥಳೀಯರ ನಡುವೆ ಘರ್ಷಣೆ: ವಾಹನಗಳು, ಅಂಗಡಿಗಳಿಗೆ ಹಾನಿ - ಶ್ರೀಶೈಲಂನಲ್ಲಿ ವಾಹನಗಳು ಅಂಗಡಿಗಳಿಗೆ ಹಾನಿ
ಶ್ರೀಶೈಲಂನ ದೇವಾಲಯದ ಆವರಣದಲ್ಲಿ ಕರ್ನಾಟಕದಿಂದ ತೆರಳಿದ್ದ ಭಕ್ತರು ಮತ್ತು ಸ್ಥಳೀಯರ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ದೇವಾಲಯದ ಸಮೀಪದಲ್ಲಿದ್ದ ಟೀ ಅಂಗಡಿಗೆ ಮತ್ತು ಹಲವು ವಾಹನಗಳಿಗೆ ಹಾನಿಯಾಗಿದೆ.
ಘಟನೆಯಲ್ಲಿ ಕರ್ನಾಟಕದ ಓರ್ವ ವ್ಯಕ್ತಿಗೆ ಗಂಭೀರವಾದ ಗಾಯವಾಗಿದ್ದು, ಗಾಯಾಳುವನ್ನು ಆ್ಯಂಬುಲೆನ್ಸ್ನಲ್ಲಿ ಸುನ್ನಿಪೆಂಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸಂತ್ರಸ್ತರನ್ನು ಚೆನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮಿಗಳು ಭೇಟಿ ಮಾಡಿದ್ದಾರೆ. ಇನ್ನು ಸ್ಥಳದಲ್ಲಿ ಉದ್ವಿಗ್ನ ವಾತಾವರಣವಿದ್ದು, ಪೊಲೀಸರು ಪರಿಸ್ಥಿತಿಯನ್ನ ಹತೋಟಿಗೆ ತಂದಿದ್ದಾರೆ. ಕರ್ನೂಲ್ ಎಸ್ಪಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಯಾವುದೇ ಕಾರಣಕ್ಕೂ ಗಾಳಿ ಸುದ್ದಿಗಳನ್ನು ನಂಬಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ರೈಲಿನಲ್ಲಿ ಮಹಿಳೆಯ ಕೆನ್ನೆಗೆ ಮುತ್ತು: ಏಳು ವರ್ಷ ವಿಚಾರಣೆ, ಈಗ ಶಿಕ್ಷೆ ಪ್ರಕಟ