ನವದೆಹಲಿ: ದೇಶದ ವಿವಿಧ ಚರ್ಚ್‌ಗಳಲ್ಲಿ ಭಾನುವಾರದ ಮಧ್ಯರಾತ್ರಿ ಈಸ್ಟರ್ ಪ್ರಾರ್ಥನೆಗಳು ಶಾಂತಿಯುತವಾಗಿ ನಡೆಯಿತು. ಈಸ್ಟರ್ ನ ಪವಿತ್ರ ಸಂದರ್ಭಕ್ಕಾಗಿ ಜನರೆಲ್ಲರೂ ಕ್ಯಾಂಡಲ್ನ ಬೆಳಕಿನಿಂದ ಅಲಂಕರಿಸಿದ ಚರ್ಚ್‌ನಲ್ಲಿ ಒಟ್ಟು ಸೇರಿ ಪ್ರಾರ್ಥನೆಗಳನ್ನು ನೆರವೇರಿಸಿದರು. ಈಸ್ಟರ್ ಅನ್ನು ಯೇಸುಕ್ರಿಸ್ತನ ಅದ್ಭುತ ಪುನರುತ್ಥಾನದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಈಸ್ಟರ್ ಹಬ್ಬಕ್ಕಾಗಿ ಈಸ್ಟರ್ ರಾತ್ರಿ ಕೊಚ್ಚಿಯ ಸೈರೋ-ಮಲಬಾರ್ ಚರ್ಚ್‌ನ ಪ್ರಧಾನ ಕಚೇರಿಯಾದ ಮೌಂಟ್ ಸೇಂಟ್ ಥಾಮಸ್‌ನಲ್ಲಿ ಜನರು ಒಟ್ಟುಗೂಡಿದ್ದರು.
ಈಸ್ಟರ್ ರಾತ್ರಿಯ ಹಬ್ಬದ ಜವಬ್ದಾರಿಯನ್ನು ಹೊತ್ತಿದ್ದ ಸಿರೋ-ಮಲಬಾರ್ ಚರ್ಚ್‌ನ ಮೇಜರ್ ಆರ್ಚ್‌ಬಿಷಪ್, ಕಾರ್ಡಿನಲ್ ಜಾರ್ಜ್ ಅಲೆಂಚೇರಿ ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು. ಮೆಸ್ಸಿಹ್ (ರಕ್ಷಕನೆಂಬ ಅರ್ಥದಲ್ಲಿ ಜೀಸಸ್) ಮಾನವಕುಲಕ್ಕಾಗಿ ಏರಿದ, ಮೆಸ್ಸೀಯನ ಪುನರುತ್ಥಾನವು ಮಾನವಕುಲದ ವಿಜಯವಾಗಿದೆ. ಭಗವಂತನ ಸೇವೆಯು ಜೀವವನ್ನು ನೀಡುವ ಸೇವೆಯಾಗಿದೆ ಮತ್ತು ಅದನ್ನು ನಾವು ಮುಂದುವರಿಸಬೇಕು ಎಂದರು. ಮುಂದೆ ಶಾಂತಿ ಮತ್ತು ಸೌಹಾರ್ದತೆಗಾಗಿ ಪ್ರಾರ್ಥಿಸುತ್ತ, ಆಲೆಂಚೇರಿ ಅವರು, ನಮಗೆ ಮೆಸ್ಸಿಹ್ ಜೊತೆಗೆ ದೇವರ ಉಡುಗೊರೆ ಬರುತ್ತದೆ, ಕ್ರೈಸ್ತರು ವೈಭವದ ಬಗ್ಗೆ ಯೋಚಿಸಬೇಕು. ನಾವು ಉದ್ದೇಶ ಮತ್ತು ಜೀವನದ ಸಂಸ್ಕೃತಿಯನ್ನು ಬೆಳೆಸಲು ಶಕ್ತರಾಗಿರಬೇಕು. ಚರ್ಚ್‌ನಲ್ಲಿ, ಕುಟುಂಬದಲ್ಲಿ ಮತ್ತು ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ಅವರು ಹೇಳಿದರು.
ದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್‌ನಲ್ಲಿ. ಕ್ಯಾಥೆಡ್ರಲ್ ಅನ್ನು ಈಸ್ಟರ್ ರಾತ್ರಿಗಾಗಿ ಸಂಪೂರ್ಣವಾಗಿ ಅಲಂಕರಿಸಲಾಗಿತ್ತು. ಇಡೀ ಚರ್ಚ್ ಕಿತ್ತಳೆ ಮತ್ತು ಕೆಂಪು ಬಣ್ಣದಿಂದ ಹೊಳೆಯುತ್ತಿತ್ತು. ಜೀಸಸ್ನ ಭಕ್ತರು ಮೇಣದಬತ್ತಿಗಳನ್ನು ಉರಿಸಿ ಪ್ರಾರ್ಥನೆ ಸಲ್ಲಿಸಿದರು. ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಚರ್ಚ್‌ನಲ್ಲಿಯೂ ಆಚರಣೆಗಳನ್ನು ನಡೆಸಲಾಯಿತು. ಇಲ್ಲಿ ಭಕ್ತರು ಚರ್ಚ್‌ನ ಒಳಗೆ ಕ್ಯಾಂಡಲ್‌ಲೈಟ್ ಹಿಡಿದು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಪವಿತ್ರ ಈಸ್ಟರ್ ಸಲುವಾಗಿ ಮುಂಬೈನ ಚರ್ಚ್‌ನಲ್ಲಿಯೂ ಪ್ರಾರ್ಥನೆ ಸಲ್ಲಿಸಲಾಯಿತು.