ಹೈದರಾಬಾದ್ :ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 27ರಂದು ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ದಿನವನ್ನಾಗಿ ಆಚರಿಸಲು ಮುಂದಾಗಿದೆ. ಸುಸ್ಥಿರ ಅಭಿವೃದ್ಧಿ ಮತ್ತು ಜಾಗತಿಕ ಆರ್ಥಿಕತೆಗೆ ಈ ವಲಯಗಳು ನೀಡಿರುವ ಕೊಡುಗೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ‘ಎಂಎಸ್‌ಎಂಇ 2021 : ಸುಸ್ಥಿರ ಚೇತರಿಕೆಯ ಕೀಲಿ’ ಎಂಬ ಥೀಮ್ ಅಡಿ ಆಚರಣೆಗೆ ನಿರ್ಧರಿಸಲಾಗಿದೆ.
ಎಂಎಸ್ಎಂಇಗಳು ಸುಸ್ಥಿರ ಚೇತರಿಕೆಯ ಕೀಲಿ
ಖಾಸಗಿ ವಲಯದಲ್ಲಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು (ಎಂಎಸ್‌ಎಂಇ), ವಿಶೇಷವಾಗಿ ಮಹಿಳೆಯರು, ಯುವಕರು, ಅಲ್ಪಸಂಖ್ಯಾತರು ಮತ್ತು ವಲಸಿಗರೇ ನಡೆಸುತ್ತಿದ್ದ ಕೈಗಾರಿಕೆಗಳು ಹೆಚ್ಚು ನಷ್ಟ ಅನುಭವಿಸಿದವು. 136 ದೇಶಗಳಲ್ಲಿನ ವ್ಯವಹಾರಗಳಲ್ಲಿ ಕೋವಿಡ್ ಪ್ರಭಾವದ ಕುರಿತು ಅಂತಾರರಾಷ್ಟ್ರೀಯ ವ್ಯಾಪಾರ ಕೇಂದ್ರದ ಸಮೀಕ್ಷೆಯು ಮಹಿಳೆಯರ ನೇತೃತ್ವದ ಸಣ್ಣ ಉದ್ಯಮಗಳಲ್ಲಿ ಸುಮಾರು ಶೇ.62ರಷ್ಟು ಬಿಕ್ಕಟ್ಟಿನಿಂದ ಬಳಲಿದೆ ಎಂದು ವರದಿ ಮಾಡಿದೆ.
ಸರ್ಕಾರಗಳು ಹಲವು ಸವಾಲುಗಳ ನಡುವೆಯೂ ಜನರಿಗೆ ಲಸಿಕೆ ನೀಡಲು ಶ್ರಮಿಸುತ್ತಿದೆ. ಜೊತೆಗೆ ಆರ್ಥಿಕ ಬೆಳವಣಿಗೆಯ ಮೇಲೂ ಉಂಟಾಗುತ್ತಿರುವ ಬಿಕ್ಕಟ್ಟನ್ನು ಎದುರಿಸುವುದು ಅನಿವಾರ್ಯವಾಗಿದೆ. ಮಾನವ ಆರೋಗ್ಯ ಮತ್ತು ಪರಿಸರ ವ್ಯವಸ್ಥೆಗಳು, ಉದ್ಯೋಗ ಮತ್ತು ಜೀವನೋಪಾಯಗಳಿಗೆ ತೀವ್ರ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ ಎಂದು ನಿರೀಕ್ಷಿಸಲಾಗಿದೆ. ಎಂಎಸ್ಎಂಇಗಳು ಹವಾಮಾನ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುತ್ತಿವೆ.
ಬೆಳೆಯುತ್ತಿರುವ ಜಾಗತಿಕ ಉದ್ಯೋಗಿಗಳ ಸಂತೃಪ್ತಿಗಾಗಿ 2030ರ ವೇಳೆಗೆ 600 ಮಿಲಿಯನ್ ಉದ್ಯೋಗಗಳು ಸೃಷ್ಟಿಸಬೇಕಾಗುತ್ತದೆ. ಹೀಗಾಗಿ, ಎಸ್‌ಎಂಇ ವಲಯದ ಅಭಿವೃದ್ಧಿಗೆ ವಿಶ್ವದಾದ್ಯಂತದ ಅನೇಕ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುತ್ತಿವೆ. ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಹೆಚ್ಚಿನ ಔಪಚಾರಿಕ ಉದ್ಯೋಗಗಳು ಎಸ್‌ಎಂಇಗಳಿಂದ ಸೃಷ್ಟಿಯಾಗುತ್ತದೆ. ಇದು 10ರಲ್ಲಿ 7 ಉದ್ಯೋಗಗಳನ್ನು ಸೃಷ್ಟಿಸುತ್ತದೆ.
ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಲ್ಲಿ ವಾರ್ಷಿಕ ಹೂಡಿಕೆಗಳನ್ನು 1 ಟ್ರಿಲಿಯನ್ ಹೆಚ್ಚಿಸುವುದರಿಂದ ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಪ್ರಗತಿಯ ದೃಷ್ಟಿಯಿಂದ ಅಸಮಾನ ಲಾಭಾಂಶವನ್ನು ನೀಡುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಸಣ್ಣ ಸಂಸ್ಥೆಗಳು ಹವಾಮಾನ ಬದಲಾವಣೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತವೆ. ಆಫ್ರಿಕಾದ ಶೇ.68ರಷ್ಟು ಕಂಪನಿಗಳು ಪರಿಸರ ಅಪಾಯಗಳು ತಮ್ಮ ವ್ಯವಹಾರಕ್ಕೆ ಮಹತ್ವದ್ದಾಗಿವೆ ಎಂದು ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರದ (ಐಟಿಸಿ) ಸಂಶೋಧನೆಯ ಪ್ರಕಾರ ತಿಳಿಸಲಾಗಿದೆ.