ಕರ್ನಾಟಕ

karnataka

ETV Bharat / bharat

ಕೊರೊನಾ ನಿಯಂತ್ರಣಕ್ಕಾಗಿ ಗೃಹ ಸಚಿವಾಲಯದಿಂದ ಮಾರ್ಗಸೂಚಿ  : ಡಿ.1ರಿಂದ ಜಾರಿ - States/ UTs mandated to strictly enforce

ಗೃಹ ವ್ಯವಹಾರಗಳ ಸಚಿವಾಲಯ ಕೊರೊನಾ ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ದೇಶದಲ್ಲಿ ಕೋವಿಡ್​​-19 ಹರಡುವಿಕೆಯನ್ನು ನಿಯಂತ್ರಿಸುವುದು ಈ ಮಾರ್ಗಸೂಚಿಗಳ ಮುಖ್ಯ ಉದ್ದೇಶವಾಗಿದೆ. ಡಿಸೆಂಬರ್ 1ರಿಂದ ಜಾರಿಗೆ ಬರಲಿವೆ ಮತ್ತು 31.12. 2020 ರವರೆಗೆ ಜಾರಿಯಲ್ಲಿರುತ್ತವೆ.

MHA Guidelines
MHA Guidelines

By

Published : Nov 25, 2020, 6:30 PM IST

Updated : Nov 25, 2020, 7:20 PM IST

ನವದೆಹಲಿ: ಗೃಹ ವ್ಯವಹಾರಗಳ ಸಚಿವಾಲಯ ಕೋವಿಡ್​ನ ನಿಯಂತ್ರಣ, ಕಣ್ಗಾವಲು ಮತ್ತು ಎಚ್ಚರಿಕೆಗಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿಗಳು 2020ರ ಡಿಸೆಂಬರ್ 1ರಿಂದ ಜಾರಿಗೆ ಬರಲಿವೆ ಮತ್ತು 31.12. 2020 ರವರೆಗೆ ಜಾರಿಯಲ್ಲಿರುತ್ತವೆ.

ದೇಶದಲ್ಲಿ ಕೋವಿಡ್​​-19 ಹರಡುವಿಕೆಯನ್ನು ನಿಯಂತ್ರಿಸುವುದು ಈ ಮಾರ್ಗಸೂಚಿಗಳ ಮುಖ್ಯ ಉದ್ದೇಶವಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಬ್ಬ ಹಾಗೂ ಚಳಿಗಾಲದ ಹಿನ್ನೆಲೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುತ್ತಿದೆ.

ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಚಿವಾಲಯ ಹೇಳಿದೆ. ಇವುಗಳನ್ನು ಪಾಲಿಸುವಂತೆ ನೋಡಿಕೊಳ್ಳುವ ಜವಬ್ದಾರಿ ಆಯಾ ರಾಜ್ಯದ ಜಿಲ್ಲೆಗಳ ಡಿಸಿ, ಪೊಲೀಸ್​ ಮತ್ತು ಪುರಸಭೆ ಅಧಿಕಾರಿಗಳ ಜವಬ್ದಾರಿಯಾಗಿರುತ್ತದೆ. ಆಯಾ ರಾಜ್ಯದಲ್ಲಿ ಬರುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ನೋಡಿಕೊಂಡು ರಾಜ್ಯ ಸರ್ಕಾರಗಳು ನಿರ್ಬಂಧವನ್ನು ವಿಧಿಸಬಹುದಾಗಿದೆ.

ಮಾರ್ಗಸೂಚಿಗಳು ಈ ಕೆಳಗಿನಂತಿವೆ:

ಸಚಿವಾಲಯ ಜಾರಿಗೊಳಿಸಿದ ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಂಡು ಕೊರೊನಾ ಹೆಚ್ಚಿರುವ ಪ್ರದೇಶಗಳನ್ನು ಕಂಟೇನ್​ಮೆಂಟ್​ ಝೋನ್ ಎಂದು ಜಿಲ್ಲೆಯ ಜಿಲ್ಲಾಧಿಕಾರಿಗಳು ಘೋಷಿಸಬೇಕು. ಕಂಟೇನ್​ಮೆಂಟ್​ ವಲಯಗಳ ಪಟ್ಟಿಯನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ರಾಜ್ಯದ/ಯೂನಿಯನ್​ ಟೆರಿಟರಿಸ್​​ ವೆಬ್‌ಸೈಟ್‌ಗಳಲ್ಲಿ ನಮೂದಿಸಬೇಕು.

ಈ ವಲಯಗಳಲ್ಲಿ ಅಗತ್ಯ ಚಟುವಟಿಕೆಗಳನ್ನು ಮಾತ್ರ ಅವಕಾಶ ನೀಡಬೇಕು.

ವೈದ್ಯಕೀಯ, ತುರ್ತುಪರಿಸ್ಥಿತಿಯನ್ನು ಹೊರತುಪಡಿಸಿ ಮತ್ತು ಅಗತ್ಯ ಸರಕು ಹಾಗೂ ಸೇವೆಗಳ ಪೂರೈಕೆ ಮಾತ್ರ ಅವಕಾಶ ನೀಡಬೇಕು. ಅನಗತ್ಯವಾಗಿ ಓಡಾಡುವುದನ್ನು ತಡೆಯಬೇಕು.

ಈ ವಲಯಗಳಲ್ಲಿ ಸೋಂಕಿತರು ಮನೆಯಲ್ಲೇ ಇರಬೇಕು. 14 ದಿನಗಳವರೆಗಿನ ಅವರ ಪ್ರಯಾಣದ ಇತಿಹಾಸ, ಯಾರೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಇತರ ವಿಷಯಗಳನ್ನು ಪತ್ತೆ ಹಚ್ಚಿ, ಕ್ರಮಕೈಗೊಳ್ಳಬೇಕು. (72 ಗಂಟೆಗಳಲ್ಲಿ 80 ಪ್ರತಿಶತ ಸಂಪರ್ಕಗಳನ್ನು ಕಂಡುಹಿಡಿಯಬೇಕು).

ಕೊರೊನಾ ರೋಗಿಗಳಿಗೆ ತ್ವರಿತವಾಗಿ ಪ್ರತ್ಯೇಕವಾಗಿ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು. ಮನೆಯಲ್ಲೇ ಇದ್ದರೇ ಅವರಿಗೆ ಅವಶ್ಯಕ ಮಾರ್ಗಸೂಚಿಗಳನ್ನು ನೀಡಬೇಕು.

ಐಎಲ್ಐ / ಸಾರಿ ಪ್ರಕರಣಗಳ ಕಣ್ಗಾವಲನ್ನು ಆರೋಗ್ಯ ಕೇಂದ್ರಗಳಲ್ಲಿ ಅಥವಾ ಮೊಬೈಲ್ ಘಟಕಗಳಲ್ಲಿ, ಬಫರ್ ವಲಯಗಳಲ್ಲಿನ ಜ್ವರ ಚಿಕಿತ್ಸಾಲಯಗಳ ಮೂಲಕ ನಡೆಸಬೇಕು.

ಕೊರೊನಾ ಬಗ್ಗೆ ಸಮುದಾಯಗಳಲ್ಲಿ ಜಾಗೃತಿ ಮೂಡಿಸಬೇಕು.

ಕಂಟೇನ್​ಮೆಂಟ್​ ವಲಯಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ನೋಡಿಕೊಳ್ಳಬೇಕು.

ಮಾಸ್ಕ್​ ಧರಿಸುವುದು, ಕೈಗಳನ್ನು ಸ್ವಚ್ಛಗೊಳಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು. ಈ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು.

ಸಾರ್ವಜನಿಕ ಮತ್ತು ಕೆಲಸದ ಸ್ಥಳಗಳಲ್ಲಿ ಮಾಸ್ಕ್​​ ಧರಿಸದ ವ್ಯಕ್ತಿಗಳ ಮೇಲೆ ದಂಡ ವಿಧಿಸುವುದು ಸೇರಿದಂತೆ ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ.

ಜನದಟ್ಟಣೆ ಇರುವ ಸ್ಥಳಗಳಲ್ಲಿ, ವಿಶೇಷವಾಗಿ ಮಾರುಕಟ್ಟೆಗಳು, ಸಾಪ್ತಾಹಿಕ ಬಜಾರ್‌ಗಳು ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಸಾಮಾಜಿಕ ಅಂತರವನ್ನು ಕಪಾಡಿಕೊಳ್ಳುವುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಒಂದು ಎಸ್‌ಒಪಿ ಹೊರಡಿಸುತ್ತದೆ, ಇದನ್ನು ರಾಜ್ಯಗಳು ಮತ್ತು ಯುಟಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ಎಂಎಚ್‌ಎ ಅನುಮತಿ ನೀಡಿದಂತೆ ಪ್ರಯಾಣಿಕರ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಇರಬೇಕು.

ಶೇ.50 ರಷ್ಟು ಸಾಮರ್ಥ್ಯ ಹೊಂದಿರುವ ಸಿನೆಮಾ ಹಾಲ್‌ಗಳು ಮತ್ತು ಚಿತ್ರಮಂದಿರಗಳು,ಈಜುಕೊಳಗಳು, ಕ್ರೀಡಾ ಕೂಟಗಳು ತೆರೆಯಬಹುದಾಗಿದೆ.

ಸಾಮಾಜಿಕ / ಧಾರ್ಮಿಕ / ಕ್ರೀಡೆ / ಮನರಂಜನೆ / ಶೈಕ್ಷಣಿಕ / ಸಾಂಸ್ಕೃತಿಕ / ಧಾರ್ಮಿಕ ಕೂಟಗಳು, ಸಭಾಂಗಣದ ಸಾಮರ್ಥ್ಯದ ಗರಿಷ್ಠ 50 ಪ್ರತಿಶತದವರೆಗೆ ಇರಬೇಕು. ಹೊರಂಗಾಣ ಸ್ಥಳಗಳಲ್ಲಿ 200 ಜನರರಿಗೆ ಮಾತ್ರ ಅವಕಾಶ. ಪರಿಸ್ಥಿತಿಯನ್ನು ನೋಡಿಕೊಂಡು ರಾಜ್ಯ ಸರ್ಕಾರಗಳು 100 ಅಥವಾ ಅದಕ್ಕಿಂತ ಕಡಿಮೆ ವ್ಯಕ್ತಿಗಳಿಗೆ ಅನುಮತಿ ನೀಡಬಹುದು.

ರಾತ್ರಿ ಕರ್ಫ್ಯೂನನ್ನು ಸಹ ಆಯಾ ರಾಜ್ಯಗಳು ಕೊರೊನಾ ಪ್ರಕರಣಗಳಿಗೆ ಅನುಗುಣವಾಗಿ ವಿಧಿಸಬಹುದಾಗಿದೆ.

ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದೊಂದಿಗೆ ಪೂರ್ವ ಸಮಾಲೋಚನೆ ಮಾಡದೆ, ಕಂಟೇನ್​ಮೆಂಟ್​​ ವಲಯಗಳಲ್ಲಿ ಅಥವಾ ಯಾವುದೇ ಸ್ಥಳೀಯ ಲಾಕ್‌ಡೌನ್ ವಿಧಿಸಬಾರದು.

ರಾಜ್ಯಗಳು ಕಚೇರಿಗಳಲ್ಲಿ ಸಹ ಸಾಮಾಜಿಕ ಅಂತರವನ್ನು ಜಾರಿಗೊಳಿಸಬೇಕಾಗಿದೆ. ನಗರಗಳಲ್ಲಿ, ಕೊರೊನಾ ಪ್ರಕರಣಗಳ ಸಂಖ್ಯೆ ಶೇ.10 ಕ್ಕಿಂತ ಹೆಚ್ಚಿದ್ದರೆ, ಸಂಬಂಧಪಟ್ಟ ರಾಜ್ಯಗಳು ಕಚೇರಿಯ ಸಮಯ, ನೌಕರರ ಸಂಖ್ಯೆಯನ್ನು ಅಗತ್ಯತೆಗೆ ಅನುಗುಣವಾಗಿ ಬದಲಾಯಿಸಬಹುದಾಗಿದೆ.

ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಡುವ ಅಂತಾರಾಜ್ಯ ಮತ್ತು ಜಿಲ್ಲೆಗಳಲ್ಲಿ ನಡೆಯುವ ಚಳುವಳಿಗೆ ಯಾವುದೇ ನಿರ್ಬಂಧವಿಲ್ಲ.

ನೆರೆಯ ರಾಷ್ಟ್ರಗಳೊಂದಿಗಿನ ಒಪ್ಪಂದಗಳ ಅಡಿಯಲ್ಲಿ ವ್ಯಾಪಾರ, ಅಂತಾರಾಜ್ಯ ವ್ಯಾಪಾರ ಮತ್ತು ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಅಂತಹ ಚಲನೆಗಳಿಗೆ ಪ್ರತ್ಯೇಕ ಅನುಮತಿ / ಅನುಮೋದನೆ / ಇ-ಪರ್ಮಿಟ್ ಅಗತ್ಯವಿಲ್ಲ.

65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಅಸ್ವಸ್ಥರು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ತುರ್ತು ಪರಿಸ್ಥಿತಿ ಮತ್ತು ಆರೋಗ್ಯದ ಉದ್ದೇಶಕ್ಕಾಗಿ ಹೊರತುಪಡಿಸಿ ಬೇರೆ ಸಮಯದಲ್ಲಿ ಮನೆಯಲ್ಲಿಯೇ ಇರಲು ಸೂಚಿಸಲಾಗುತ್ತದೆ.

ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್‌ನ ಬಳಕೆಯನ್ನು ಪ್ರೋತ್ಸಾಹಿಸಬೇಕು.

Last Updated : Nov 25, 2020, 7:20 PM IST

ABOUT THE AUTHOR

...view details