ಕರ್ನಾಟಕ

karnataka

By

Published : Apr 18, 2022, 8:00 PM IST

ETV Bharat / bharat

ಜೈಶ್-ಎ-ಮೊಹಮ್ಮದ್ ಕಮಾಂಡರ್ ಆಶಿಕ್ ಅಹ್ಮದ್ ಭಯೋತ್ಪಾದಕನೆಂದು ಘೋಷಣೆ

ಉಗ್ರ ಸಂಘಟನೆಯಲ್ಲಿ ಭಾಗಿಯಾಗಿ ವಿವಿಧ ಸಂಚು ರೂಪಿಸಿರುವ ಕಾರಣ ಜೈಶ್​-ಎ-ಮೊಹಮ್ಮದ್ ಸಂಘಟನೆ ಕಮಾಂಡರ್​ ಆಶಿಕ್​ ಅಹ್ಮದ್ ನೆಂಗ್ರೂನನ್ನ ಭಯೋತ್ಪಾದಕನೆಂದು ಘೋಷಣೆ ಮಾಡಲಾಗಿದೆ..

Ministry of Home Affairs
Ministry of Home Affairs

ನವದೆಹಲಿ :ಜೈಶ್-ಎ-ಮೊಹಮ್ಮದ್ ಸಂಘಟನೆ ಕಮಾಂಡರ್ ಆಶಿಕ್ ಅಹ್ಮದ್ ನೆಂಗ್ರೂನನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ವೈಯಕ್ತಿಕ 'ಭಯೋತ್ಪಾದಕ' ಎಂದು ಘೋಷಣೆ ಮಾಡಿದೆ. ಗೃಹ ವ್ಯವಹಾರಗಳ ಸಚಿವಾಲಯ ಈ ಮಹತ್ವದ ಆದೇಶ ಹೊರ ಹಾಕಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಸಂಘಟಿಸಲು ಪಾಕಿಸ್ತಾನ ನಿಯಂತ್ರಿತ ಕಾರ್ಯಾಚರಣೆಯಲ್ಲಿ ಜೈಶ್​​-ಎ-ಮೊಹಮ್ಮದ್ ಭಾಗಿಯಾಗಿದ್ದು, 35 ವರ್ಷದ ಕಾಶ್ಮೀರದ ಪುಲ್ವಾಮಾ ನಿವಾಸಿ ಆಶಿಕ್ ಅಹ್ಮದ್ ನೆಂಗ್ರೂ ಭಯೋತ್ಪಾದಕರ ಒಳನುಸುಳುವಿಕೆಯಲ್ಲಿ ಸಹಾಯ ಮಾಡಿದ್ದಾನೆಂದು ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ:ಪುಲ್ವಾಮಾ ರೈಲ್ವೆ ನಿಲ್ದಾಣದಲ್ಲಿ ಉಗ್ರರ ಗುಂಡಿನ ದಾಳಿ: ಆರ್​ಪಿಎಫ್ ಸಿಬ್ಬಂದಿ ಹುತಾತ್ಮ

ಪಾಕಿಸ್ತಾನದ ಮಾಹಿತಿ ಆಧಾರದ ಮೇಲೆ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಸಂಘಟನೆ ಮತ್ತಷ್ಟು ಚುರುಕುಗೊಳಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಕಾಶ್ಮೀರದಲ್ಲಿರುವ ವಿವಿಧ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದರೆಂದು ತಿಳಿದು ಬಂದಿದೆ.

2013ರಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹತ್ಯೆ, 2020ರಲ್ಲಿ ಓರ್ವ ನಾಗರಿಕನ ಹತ್ಯೆ ಹಾಗೂ ವಿವಿಧ ಭಯೋತ್ಪಾದಕ ಸಂಘಟನೆಗಳಿಗೆ ಹಣ ಮತ್ತು ಅಕ್ರಮ ಶಸ್ತ್ರಾಸ್ತ್ರ ಪೂರೈಕೆಯ ಹಿಂದೆ ಈತನ ಕೈವಾಡವಿದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.

ABOUT THE AUTHOR

...view details