ಥಾಣೆ (ಮಹಾರಾಷ್ಟ್ರ):ಪ್ರತಿ ವರ್ಷದಂತೆ ಈದ್ ಮಿಲಾದ್-ಉನ್-ನಬಿಯ ಶುಭ ಸಂದರ್ಭದಲ್ಲಿ ರಝಾ ಅಕಾಡೆಮಿ ಭಿವಂಡಿ ಮತ್ತು ಈದ್ ಮಿಲಾದ್ ಟ್ರಸ್ಟ್ ವತಿಯಿಂದ 19 ನೇ ವಾರ್ಷಿಕ ಮೆರವಣಿಗೆಯನ್ನು ಕೋಟರ್ ಗೇಟ್ನಿಂದ ವಿಜೃಂಭಣೆಯಿಂದ ಆರಂಭವಾಗಿಯಿತು. ಆದರೆ, ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಯುವಕನೊಬ್ಬ ಎತ್ತರದ ಬಿದಿರಿನ ಮೇಲೆ ಧ್ವಜವನ್ನು ಹಿಡಿದುಕೊಂಡು ನಿಂತಿದ್ದ. ಅದೇ ಧ್ವಜ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಯುವಕ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಈ ಘಟನೆಯಿಂದಾಗಿ ಯುವಕ ವಾಸಿಸುವ ಪಿರಾನಿ ಪದಾ ಪ್ರದೇಶದಲ್ಲಿ ಶೋಕ ಮಡುಗಟ್ಟಿದೆ. ಮೃತ ಯುವಕನನ್ನು ಅಶ್ಫಾಕ್ ಶೇಖ್ (21) ಎಂದು ಗುರುತಿಸಲಾಗಿದೆ.
ವರದಿಯ ಪ್ರಕಾರ, ಭಿವಂಡಿ ನಗರದ ಪಿರಾನಿ ಪದಾ ಪ್ರದೇಶದಿಂದ ನೂರಾರು ಯುವಕರು ಈದ್ ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಪಿರಾನಿ ಪದಾದಲ್ಲಿ ವಾಸವಾಗಿರುವ ಅಶ್ಫಾಕ್ ಎಂಬ ಯುವಕ ಕೈಯಲ್ಲಿ ಎತ್ತರದ ಧ್ವಜ ಹಿಡಿದು ಜೋರಾಗಿ ಘೋಷಣೆಗಳನ್ನು ಕೂಗುತ್ತಿದ್ದ. ಅವನ ಕೈಯಲ್ಲಿ ಧ್ವಜವಿತ್ತು. ಮೆರವಣಿಗೆಯಲ್ಲಿ ಪಾಲ್ಗೊಂಡು ಧ್ವಜವನ್ನು ಗಾಳಿಯಲ್ಲಿ ಬೀಸುವಾಗ ಆತನ ಕೈಯಲ್ಲಿದ್ದ ಧ್ವಜ ತಂತಿಗೆ ತಗುಲಿತು. ಇದರಿಂದ ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.