ಔರಂಗಾಬಾದ್ (ಮಹಾರಾಷ್ಟ್ರ): ಪ್ರತಿಯೊಂದು ಮಹಿಳೆ ತನಗೆ ಏಳು ಜನ್ಮಗಳಿಗೆ ಈ ಗಂಡನೇಬೇಕು ಎಂದು ಅರಳಿ ಮರಕ್ಕೆ ಪೂಜಿಸಿ ಪ್ರದರ್ಶನ ಹಾಕುವ ಪದ್ಧತಿ ಇರುವುದು ಗೊತ್ತಿರುವ ವಿಚಾರ. ಆದರೆ, ಇಲ್ಲಿ ಕೆಲ ಪುರಷರು 'ನನಗೆ ಈ ಹೆಂಡತಿ ಮತ್ತೆ ಬೇಡ' ಎಂದು ಹೇಳಿ ಅರಳಿ ಮರಕ್ಕೆ ಪೂಜೆ ಮಾಡಿ ಪ್ರದಕ್ಷಿಣೆ ಹಾಕಿರುವ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ.
ನನಗೆ ನನ್ನ ಪತ್ನಿ ಬೇಡವೆಂದು ಅರಳಿ ಮರಕ್ಕೆ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕಿದ ಪತಿ ವತ್ ಸಾವಿತ್ರಿ ಹುಣ್ಣಿಮೆಗೆ ಒಂದು ದಿನ ಮೊದಲು ಕೆಲ ಪುರುಷರು ಅರಳಿ ಮರವನ್ನು ಪೂಜಿಸಿ ಪ್ರದಕ್ಷಿಣೆ ಹಾಕಿದ್ದಾರೆ. ಈ ವೇಳೆ, ಅವರು ಈ ಹೆಂಡತಿ ಮುಂದಿನ ಏಳು ಜನ್ಮಗಳು ಅಥವಾ ಈ ಏಳು ಸೆಕೆಂಡುಗಳಿಂದಲೂ ಬೇಡವೆಂದು ದೇವರ ಬಳಿ ಬೇಡಿಕೊಂಡಿದ್ದಾನೆ. ಸೋಮವಾರ ಬೆಳಗ್ಗೆ ಜಿಲ್ಲೆಯ ವಲುಜ್‌ನಲ್ಲಿರುವ ಆಶ್ರಮದಲ್ಲಿ ಸಂತ್ರಸ್ತ ಪುರುಷ ವತ್ ಸಾವಿತ್ರಿ ಹುಣ್ಣಿಮೆಯನ್ನು ಆಚರಿಸಿದರು. ಪುರುಷರು ಪ್ರದರ್ಶನ ಹಾಕುತ್ತಿದ್ದ ವೇಳೆ ಆಶ್ರಮದ ಸಂಸ್ಥಾಪಕ ಅಧ್ಯಕ್ಷ ಅಡ್ವ, ಭರತ್ ಫುಲಾರೆ, ಭೌಸಾಹೇಬ್ ಸಾಳುಂಕೆ, ಪಾಂಡುರಂಗ ಗಂಡುಲೆ, ಸೋಮನಾಥ ಮನಾಲ್, ಚರಣ್ ಸಿಂಗ್ ಗುಸಿಂಗೆ, ಭಿಕ್ಕನ್ ಚಂದನ್, ಸಂಜಯ್ ಭಂಡ್, ಬಂಕರ್, ನಾಟ್ಕರ್, ಕಾಂಬಳೆ ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು.
ಓದಿ:ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿದ್ದಕ್ಕೆ ಆಕೆಯ ಕೈಯನ್ನೇ ಕತ್ತರಿಸಿದ ಕಿರಾತಕ ಗಂಡ!
‘ವೈಫ್ ವಿಕ್ಟಿಮ್ಸ್ ಮೆನ್ಸ್ ಅಸೋಸಿಯೇಷನ್’ ಯಾವಾಗಲೂ ತಮ್ಮ ಹೆಂಡತಿಯಿಂದ ತೊಂದರೆಗೊಳಗಾದ ಪುರುಷರ ಪರವಾಗಿ ಹೋರಾಡುತ್ತದೆ. ವತ್ ಸಾವಿತ್ರಿ ಪೌರ್ಣಿಮೆಯಂದು ಮಹಿಳೆಯರು ಅರಳಿ ಮರವನ್ನು ಪೂಜಿಸಿ ತಮ್ಮ ಇಷ್ಟಾರ್ಥಗಳನ್ನು ದೇವರ ಮುಂದೆ ಇಡುವುದು ವಾಡಿಕೆ. ಆದರೆ, ಕೆಲ ಮಹಿಳೆಯರಿಗೆ ಈ ಹಕ್ಕು ಇಲ್ಲ ಎಂದು ವೈಫ್ ವಿಕ್ಟಿಮ್ಸ್ ಮೆನ್ಸ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಭರತ್ ಫುಲಾರಿ ಆರೋಪಿಸಿದ್ದಾರೆ.
ನನಗೆ ನನ್ನ ಪತ್ನಿ ಬೇಡವೆಂದು ಅರಳಿ ಮರಕ್ಕೆ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕಿದ ಪತಿ ಅರಳಿ ಮರವನ್ನು ಪೂಜಿಸುವ ಮೂಲಕ ಮಹಿಳೆಯರು ತಮ್ಮ ಚೆನ್ನಾಗಿ ನೋಡಿಕೊಳ್ಳುವ ಗಂಡನನ್ನು ಮುಂದಿನ ಏಳು ಜನ್ಮವೂ ನೀಡುವಂತೆ ಆ ದೇವರನ್ನು ಕೇಳುತ್ತಾರೆ. ಆದರೆ, ಕೆಲವು ಪುರುಷರು ಮತ್ತು ಅವರ ಕುಟುಂಬಗಳಿಗೆ ತಮ್ಮ ಪತ್ನಿಯಿಂದ ಅನ್ಯಾಯ ಎದುರಿಸುತ್ತಿದ್ದಾರೆ. ಮಹಿಳೆಯರ ಸಬಲೀಕರಣಕ್ಕಾಗಿ ವಿವಿಧ ಕಾನೂನುಗಳನ್ನು ಜಾರಿಗೆ ತರಲಾಗಿದೆ.
ಆ ಕಾನೂನುಗಳನ್ನು ಆಧರಿಸಿ ಗಂಡ ಮತ್ತು ಆತನ ಕುಟುಂಬದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತದೆ. ಭಾರತವು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತವಾಗಿದೆ. ಆದರೆ, ಈ ಏಕಪಕ್ಷೀಯ ಕಾನೂನು ಪುರುಷರನ್ನು ಮಹಿಳೆಯರ ಗುಲಾಮರನ್ನಾಗಿ ಮಾಡಿಸುತ್ತಿದೆ. ಆದ್ದರಿಂದ ಪುರುಷರು ಸಬಲರಾಗಬೇಕು ಎಂದು ವೈಫ್ ವಿಕ್ಟಿಮ್ಸ್ ಮೆನ್ಸ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಭರತ್ ಫುಲಾರಿ ಆಗ್ರಹಿಸಿದರು.