ಪುಣೆ (ಮಹಾರಾಷ್ಟ್ರ):ಈವರೆಗೆ ನೀವು ಅನೇಕ ರೀತಿಯ ಕಳ್ಳತನ ಪ್ರಕರಣಗಳನ್ನು ನೋಡಿರಬಹುದು. ಸಿನಿಮಾದ ರೀತಿಯಲ್ಲೂ ಕಳ್ಳತನದ ಕೇಸ್ಗಳು ನಿಮ್ಮ ಗಮನಕ್ಕೆ ಬಂದಿರಬಹುದು. ಆದರೆ, ಸೋಮವಾರ ರಾತ್ರಿ ಚಿನ್ನದ ಕಳ್ಳ ಸಾಗಣೆಯ ವಿಚಿತ್ರ ಪ್ರಕರಣಯೊಂದು ಬೆಳಕಿಗೆ ಬಂದಿದೆ. ಆಘಾತಕಾರಿ ಸಂಗತಿಯೆಂದರೆ, ಮಹಿಳೆಯೊಬ್ಬರು ಈ ಚಿನ್ನದ ಪುಡಿಯನ್ನು ಕ್ಯಾಪ್ಸುಲ್ನಲ್ಲಿ ತುಂಬಿ ತನ್ನ ಖಾಸಗಿ ಅಂಗದಲ್ಲಿ ಬಚ್ಚಿಟ್ಟಿದ್ದಳು.
ಹೌದು, ಈ ಪ್ರಕರಣಕ್ಕೆ 41 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಆಕೆಯ ವಿರುದ್ಧ ಕಸ್ಟಮ್ಸ್ ಕಾಯ್ದೆಯಡಿ ದೂರೂ ದಾಖಲಿಸಲಾಗಿದೆ. ಮಹಿಳೆ ತನ್ನ ಖಾಸಗಿ ಅಂಗದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡಿದ್ದರಿಂದ, ಅಧಿಕಾರಿಗಳಿಗೆ ಈ ಪ್ರಕರಣ ಭೇದಿಸಲು ಕೂಡ ತುಂಬಾ ತಲೆ ಕೆಡಿಸಿಕೊಂಡಿದ್ದಾರೆ.
ಕ್ಯಾಪ್ಸುಲ್ಗಳಲ್ಲಿತ್ತು ಚಿನ್ನದ ಪುಡಿ:ಮಹಿಳೆಯೊಬ್ಬರು ದುಬೈನಿಂದ ಚಿನ್ನ ತರುತ್ತಿರುವ ಬಗ್ಗೆ ಕಸ್ಟಮ್ಸ್ ಇಲಾಖೆಗೆ ಮಾಹಿತಿ ಸಿಕ್ಕಿದೆ. ಅದರಂತೆ ವಿಮಾನ ನಿಲ್ದಾಣದಲ್ಲಿ ಪೊಲೀಸರು ತಪಾಸಣೆ ಹೆಚ್ಚಿಸಿದ್ದರು. ದುಬೈನಿಂದ ಬಂದ ವಿಮಾನವು ಪುಣೆಗೆ ಬಂದಾಗ, ಒಬ್ಬ ಮಹಿಳೆ ಗಾಬರಿಯಿಂದ ವಿಮಾನ ನಿಲ್ದಾಣದಿಂದ ಹೊರಗೆ ಹೋಗುತ್ತಿರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿದರು. ಮಹಿಳೆಯ ವರ್ತನೆಯು ಅವರ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತು. ಭದ್ರತಾ ಸಿಬ್ಬಂದಿ ಮಹಿಳೆಯನ್ನು ನಿಲ್ಲಿಸಿ ಅವಳನ್ನು ಪ್ರಶ್ನಿಸಲು ಪ್ರಾರಂಭಿಸಿತು.