ಮುಂಬೈ: ನಗರದ ಕರಿ ರಸ್ತೆಯ ಅವಿಘ್ನ ಪಾರ್ಕ್ ಬಹುಮಹಡಿ ಕಟ್ಟಡದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ದಳವು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಮುಂಬೈನ ಮಹಾದೇವ ಪಲವ್ ಮಾರ್ಗದ ಕರಿ ರಸ್ತೆಯ ಭಾರತ್ ಮಾತಾ ಚಿತ್ರಮಂದಿರದ ಎದುರಿಗೆ ಇರುವ ಅವಿಘ್ನಾ ಪಾರ್ಕ್‌ನ ಕಟ್ಟಡದ ಒಂದು ಅಪಾರ್ಟ್ಮೆಂಟ್ನಲ್ಲಿ ಬೆಳಗ್ಗೆ 10.45ಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು, ಅಗ್ನಿ ಶಾಮಕ ದಳಕ್ಕೆ ಜನರು ಮಾಹಿತಿ ತಲುಪಿಸಿದ್ದಾರೆ. ಕೂಡಲೇ ಅಗ್ನಿ ಶಾಮಕ ದಳ, ಮುಂಬೈ ಪೊಲೀಸರು, ಮುನ್ಸಿಪಲ್ ಕಾರ್ಪೊರೇಷನ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಲು ಪ್ರಯತ್ನಿಸಿದೆ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.