ಮುಂಬೈ, ಮಹಾರಾಷ್ಟ್ರ: ಕುರ್ಲಾದಲ್ಲಿ ಮೂವರು ಹಂತಕರು ಮನೆಗೆ ನುಗ್ಗಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮಾಸುವ ಮುನ್ನವೇ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಸಂಚಲನ ಮೂಡಿಸಿದೆ. ಈ ಘಟನೆ ಮುಲುಂಡ್‌ನಲ್ಲಿ ನಡೆದಿದೆ. ಪತ್ನಿಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಖಾಸಗಿ ಭಾಗದಲ್ಲಿ ಪ್ಲಾಸ್ಟಿಕ್ ವಸ್ತುವನ್ನುವಿಟ್ಟು ವಿಕೃತಿ ಮೆರೆದಿದ್ದಾನೆ.
ಆಕೆಯ ಪತಿ ಕುಡಿದು ಮನೆಗೆ ಬಂದು ಮಹಿಳೆಯನ್ನು ಥಳಿಸಲು ಆರಂಭಿಸಿದ್ದನು. ಥಳಿಸಿದ ನಂತರ ಪತ್ನಿಯ ಬಟ್ಟೆಗಳನ್ನು ಹರಿದು ಹಾಕಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಖಾಸಗಿ ಭಾಗದಲ್ಲಿ ಪ್ಲಾಸ್ಟಿಕ್ ವಸ್ತುವನ್ನಿಟ್ಟು ವಿಕೃತಿ ಮೆರೆದಿದ್ದಾನೆ. ಇದರಿಂದ ಮಹಿಳೆಗೆ ತುಂಬಾ ನೋವಾಗಿದ್ದು, ಆಸ್ಪತ್ರೆಗೆ ತೆರಳಿದ್ದಾಳೆ. ಆಸ್ಪತ್ರೆಯ ವೈದ್ಯರು ಆಕೆಯ ಖಾಸಗಿ ಭಾಗಗಳಿಂದ ಪ್ಲಾಸ್ಟಿಕ್ ಪೈಪ್ ತರಹದ ವಸ್ತುವನ್ನು ತೆಗೆದುಹಾಕಿದ್ದಾರೆ ಎಂದು ಮುಲುಂಡ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಕಾಂತಿಲಾಲ್ ಕೊತ್ಮೆರೆ ಹೇಳಿದ್ದಾರೆ.