ಕರ್ನಾಟಕ

karnataka

By

Published : Oct 28, 2022, 10:56 AM IST

ETV Bharat / bharat

ಕೊಯ್ನಾ ಅಣೆಕಟ್ಟು ಪ್ರದೇಶದಲ್ಲಿ ನಡುಗಿದ ಭೂಮಿ.. ರಿಕ್ಟರ್​ ಮಾಪಕದಲ್ಲಿ 2.8 ತೀವ್ರತೆ ದಾಖಲು

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೊಯ್ನಾ ಅಣೆಕಟ್ಟಿನ ಬಳಿ ಲಘು ಭೂಕಂಪನವಾಗಿದೆ. ಭೂಕಂಪದ ಕೇಂದ್ರಬಿಂದು ಹೆಲ್ವಾಕ್ ಗ್ರಾಮದ ನೈಋತ್ಯಕ್ಕೆ 5 ಕಿ.ಮೀ ದೂರದಲ್ಲಿದೆ.

Koyna dam area was shaken  mild earthquake  mild earthquake in Koyna dam area  Earthquake in Maharashtra  ಕೊಯ್ನಾ ಅಣೆಕಟ್ಟು ಪ್ರದೇಶದಲ್ಲಿ ನಡುಗಿದ ಭೂಮಿ  ಕೊಯ್ನಾ ಅಣೆಕಟ್ಟಿನ ಬಳಿ ಲಘು ಭೂಕಂಪ  ಭೂಕಂಪದಿಂದ ಯಾವುದೇ ಜೀವ ಹಾನಿ
ಕೊಯ್ನಾ ಅಣೆಕಟ್ಟು ಪ್ರದೇಶದಲ್ಲಿ ನಡುಗಿದ ಭೂಮಿ

ಸತಾರಾ, ಮಹಾರಾಷ್ಟ್ರ: ಜಿಲ್ಲೆಯ ಸತಾರಾ - ಕೊಯ್ನಾ ಅಣೆಕಟ್ಟು ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ 6:34 ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 2.8 ತೀವ್ರತೆ ದಾಖಲಾಗಿದೆ. ಭೂಕಂಪದಿಂದ ಯಾವುದೇ ಜೀವ ಹಾನಿ ಅಥವಾ ಆರ್ಥಿಕ ನಷ್ಟ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ವರ್ಷದಲ್ಲಿ ನಾಲ್ಕನೇ ಆಘಾತ: ಕೊಯ್ನಾ ಅಣೆಕಟ್ಟು ಪ್ರದೇಶದಲ್ಲಿ ಇಂದು ಬೆಳಗ್ಗೆ 6:34 ಕ್ಕೆ ಲಘು ಭೂಕಂಪ ಸಂಭವಿಸಿದ್ದು, ಇದರ ಕೇಂದ್ರಬಿಂದು ಹೆಲ್ವಾಕ್ ಗ್ರಾಮದ ನೈಋತ್ಯಕ್ಕೆ 5 ಕಿ.ಮೀ. ದೂರದಲ್ಲಿ ಕಂಡುಬಂದಿದೆ. ಇದು ಈ ವರ್ಷದ ನಾಲ್ಕನೇ ಆಘಾತವಾಗಿದೆ. ವರ್ಷದ ಮೊದಲ ಭೂಕಂಪ ಜನವರಿ 8 ರಂದು ಸಂಭವಿಸಿದೆ. ಕೊಯ್ನಾ ಅಣೆಕಟ್ಟು ಪ್ರದೇಶದಲ್ಲಿ ಲಘು ಭೂಕಂಪನವು ರಿಕ್ಟರ್ ಮಾಪಕದಲ್ಲಿ 2.9 ರಷ್ಟಿತ್ತು.

ನಂತರ ಫೆಬ್ರವರಿ 1 ರಂದು ಕೊಯ್ನಾ ಅಣೆಕಟ್ಟು ಪ್ರದೇಶದಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದೆ. ಜುಲೈ 22 ರಂದು, ಮಧ್ಯಾಹ್ನ ಒಂದು ಗಂಟೆಗೆ ಮೂರನೇ ಲಘು ಭೂಕಂಪನ ಸಂಭವಿಸಿತ್ತು. ಮತ್ತೆ ಇಂದು ಬೆಳಗ್ಗೆ ಭೂಕಂಪ ಸಂಭವಿಸಿದ್ದು ಸೇರಿ ಇಲ್ಲಿಯವರೆಗೆ ನಾಲ್ಕು ಬಾರಿ ಲಘು ಭೂಕಂಪ ಸಂಭವಿಸಿದಂತಾಗಿದೆ.

ಹಿಂದಿನ ವರ್ಷದಲ್ಲಿ 128 ಕಂಪನಗಳು ದಾಖಲು: ಕೊಯ್ನಾ ಅಣೆಕಟ್ಟು ಪ್ರದೇಶವು 2021 ರಲ್ಲಿ ಲಘು ಮತ್ತು ಅತ್ಯಂತ ಲಘು ಭೂಕಂಪಗಳ ಸರಣಿಯನ್ನು ಹೊಂದಿದೆ. ಕಳೆದ ವರ್ಷ ಭೂಕಂಪನ ಕೇಂದ್ರದಲ್ಲಿ 128 ಬಾರಿ ಲಘು ಭೂಕಂಪಗಳು ದಾಖಲಾಗಿವೆ ಎಂದು ಭಾರತೀಯ ಭೂಕಂಪ ಕೇಂದ್ರ ಇಲಾಖೆಯಿಂದ ತಿಳಿದು ಬಂದಿದೆ.

ಓದಿ:ಆರು ಕಡೆಗಳಲ್ಲಿ ಕಂಪಿಸಿದ ಭೂಮಿ.. ಮನೆಯಿಂದ ಹೊರ ಓಡಿ ಬಂದ ಜನ

ABOUT THE AUTHOR

...view details