ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಕುಟುಂಬ ರಾಜಕಾರಣಕ್ಕೂ ವಿಶೇಷ ಪ್ರಾಮುಖ್ಯತೆ ಇದೆ. ಈ ಕುಟುಂಬ ರಾಜಕಾರಣ ಇಲ್ಲಿ ಉತ್ತಮ ವರ್ಚಸ್ಸು ಉಳಿಸಿಕೊಂಡು ಮುಂದುವರಿದಿದೆ. ಇತ್ತೀಚೆಗೆ ಮಹಾರಾಷ್ಟ್ರದ ಎನ್‌ಸಿಪಿ ಮುತ್ಸದ್ಧಿ ನಾಯಕ ಹಾಗೂ ದೇಶದ ರಾಜಧಾನಿಯನ್ನೇ ನಡುಗಿಸುವ ಶಕ್ತಿ ಹೊಂದಿದ್ದ ಏಕೈಕ ನಾಯಕ ಶರದ್ ಪವಾರ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಇತ್ತೀಚೆಗೆ ಘೋಷಿಸಿದ್ದಾರೆ. ಹಾಗಾದರೆ ಪವಾರ್ ಉತ್ತರಾಧಿಕಾರಿ ಯಾರು? ಈ ಕುರಿತು ಚರ್ಚೆ ಚಾಲ್ತಿಯಲ್ಲಿದೆ.
ಶರದ್ ಪವಾರ್ ಏಕೈಕ ಪುತ್ರಿ ಸುಪ್ರಿಯಾ ಸುಳೆ:ರಾಜಕೀಯ ಪಣತೊಟ್ಟ ಶರದ್ ಪವಾರ್ ಅವರ ಏಕೈಕ ಪುತ್ರಿ ಸುಪ್ರಿಯಾ ಸುಳೆ ಜೂನ್ 3, 1969 ರಂದು ಜನಿಸಿದರು. ತಾಯಿಯ ಹೆಸರು ಪ್ರತಿಭಾ ಪವಾರ್. ಶರದ್ ಪವಾರ್ ಹಾಗೂ ಪ್ರತಿಭಾ ಮಗಳಿಗೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಸುಪ್ರಿಯಾ ಸುಳೆ ಪುಣೆಯ ಸೇಂಟ್ ಕೊಲಂಬಸ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣ ಪಡೆದರು. ಮುಂಬೈನ ಜೈ ಹಿಂದ್ ಕಾಲೇಜಿನಲ್ಲಿ ಮೈಕ್ರೋಬಯಾಲಜಿಯಲ್ಲಿ ಬಿ.ಎಸ್ಸಿ ಮಾಡಿದರು. ನಂತರ ಎಸ್‌ಸಿ ಪೂರ್ಣಗೊಳಿಸಿ, ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಜಲಮಾಲಿನ್ಯದಲ್ಲಿ ತಮ್ಮ ಸ್ನಾತಕೋತ್ತರ ಪದವಿ ಪಡೆದರು. ವಿದ್ಯಾಭ್ಯಾಸ ಮುಗಿದ ನಂತರ ಸದಾನಂದ ಸುಳೆ ಎಂಬುವರನ್ನು ಮದುವೆಯಾದರು. ಸುಪ್ರಿಯಾ ಸುಳೆ ಅವರಿಗೆ ರೇವತಿ ಮತ್ತು ವಿಜಯ್ ಎಂಬ ಇಬ್ಬರು ಮಕ್ಕಳಿದ್ದಾರೆ. ರಾಜ್ಯದ ವಿರೋಧ ಪಕ್ಷದ ನಾಯಕ, ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸೋದರ ಸಂಬಂಧಿ ಶಾಸಕ ರೋಹಿತ್ ಪವಾರ್ ಸೋದರಳಿಯ. ಆ ನಂತರ ಬಾಳಾಸಾಹೇಬರಿಂದ ಸುಪ್ರಿಯಾ ಸುಳೆ ಅವರ ರಾಜಕೀಯ ಜೀವನ ಆರಂಭವಾಯಿತು.
ಸುಪ್ರಿಯಾರ ರಾಜಕೀಯ ಪ್ರವೇಶವನ್ನು ಬಾಳಾಸಾಹೇಬ್ ಠಾಕ್ರೆ ಬೆಂಬಲಿಸಿದ್ದರು. ಈ ಮೂಲಕ 2006 ರಲ್ಲಿ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. 2009ರಲ್ಲಿ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೂರೂವರೆ ಲಕ್ಷ ಮತಗಳಿಂದ ಗೆದ್ದಿದ್ದರು. ಬಾರಾಮತಿ ಲೋಕಸಭೆ ಕ್ಷೇತ್ರದಿಂದ ನಿರಂತರವಾಗಿ ಅವರು ಆಯ್ಕೆಯಾಗುತ್ತಿದ್ದಾರೆ.
ರಾಜಕೀಯ ಪ್ರವೇಶಿಸಿದ ಸುಪ್ರಿಯಾಗೆ ತಾಯಿ ಪ್ರತಿಭಾ ಹೆಚ್ಚಿನ ಬೆಂಬಲ ಸೂಚಿಸಿದ್ದರು. ಶರದ್ ಪವಾರ್, ಪತಿ ಸದಾನಂದ್ ಸುಳೆ ಅವರಿಂದಲೂ ಪ್ರಬಲ ಬೆಂಬಲ ಸಿಕ್ಕಿದೆ. ಪುತ್ರಿ ತಂದೆಗಿಂತ ಐದು ಪಟ್ಟು ಹೆಚ್ಚು ಶ್ರೀಮಂತಳು. ಎಡಿಆರ್ ವರದಿ ಪ್ರಕಾರ, ಸುಳೆ ಅವರ ಸಂಪತ್ತು 89 ಕೋಟಿಗಳಷ್ಟಿದೆ. 2019 ರ ಅಫಿಡವಿಟ್ ಪ್ರಕಾರ, ಸುಪ್ರಿಯಾ ಸುಳೆ ಮತ್ತು ಅವರ ಪತಿ 165.4 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಸುಳೆ ಕುಟುಂಬದ ಸರಾಸರಿ ಆದಾಯ 6.41 ಕೋಟಿಗೂ ಹೆಚ್ಚು ಎಂಬುದು ಬಹಿರಂಗವಾಗಿದೆ.
ಶರದ್ ಪವಾರ್ ಅವರ ಮಾರ್ಗದರ್ಶನದಲ್ಲಿ ಮುನ್ನೆಡೆಯುತ್ತಿರುವ ಸುಪ್ರಿಯಾ ಸುಳೆ ಪ್ರಸ್ತುತ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. 2011 ರಲ್ಲಿ, ಸುಪ್ರಿಯಾ ಹೆಣ್ಣು ಶಿಶು ಹತ್ಯೆಯ ವಿರುದ್ಧ ರಾಜ್ಯಾದ್ಯಂತ ಅಭಿಯಾನ ಶುರು ಮಾಡಿದ್ದರು. 2012ರಲ್ಲಿ, ಕಾಂಗ್ರೆಸ್ ಹನ್ನೆರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಯುವತಿಯರನ್ನು ರಾಜಕೀಯ ಸೇರ್ಪಡೆ ಪ್ರೋತ್ಸಾಹಿಸಲು ಮುಂಬೈನಲ್ಲಿ ರಾಷ್ಟ್ರೀಯವಾದಿ ಯುವ ಕಾಂಗ್ರೆಸ್ ಎಂಬ ವೇದಿಕೆ ಪ್ರಾರಂಭಿಸಲಾಯಿತು. ಈ ವೇದಿಕೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.
ಎನ್‌ಸಿಪಿಯಿಂದ ಸುಪ್ರಿಯಾ ಸುಳೆ ಅವರು ಸರ್ಕಾರದಲ್ಲಿ ಮಹಿಳೆಯರನ್ನು ಮುಂದಾಳತ್ವಕ್ಕೆ ತರಲು ಮತ್ತು ಸಮಾಜದ ಎಲ್ಲ ವರ್ಗಕ್ಕೂ ನ್ಯಾಯ ಒದಗಿಸಲು, ಅವರೊಂದಿಗೆ ಬೆರೆತು ಅವರ ಸಮಸ್ಯೆ ಆಲಿಸಿ ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ. ಸುಪ್ರಿಯಾ ಶರದ್ ಪವಾರ್ರಂತೆ ರಾಜಕೀಯ ಮತ್ತು ಸಾಮಾಜಿಕ ಕಾರಣಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದಾರೆ.