ನಾಂದೇಡ್( ಮಹಾರಾಷ್ಟ್ರ):ಚಿಕ್ಕ ಮಕ್ಕಳು ಆಟವಾಡುವ ವೇಳೆ ಬಾಯಿಯೊಳಗೆ ಏನಾದ್ರೂ ವಸ್ತುಗಳನ್ನು ಹಾಕಿಕೊಂಡು ಪೋಷಕರನ್ನು ಪೇಚಾಟಕ್ಕೆ ಸಿಲುಕಿಸುತ್ತಾರೆ. ಹೌದು, ಮಹಾರಾಷ್ಟ್ರದ ನಾಂದೇಡ್ದ ಹಿಂಗೋಳಿಯಲ್ಲಿ ಇದೇ ರೀತಿಯ ಘಟನೆಯೊಂದು ಮತ್ತೆ ಮರುಕಳುಸಿದೆ. ಹಿಂಗೋಳಿಯ 4 ವರ್ಷದ ಬಾಲಕ 3 ಇಂಚಿನ ಲೋಹದ ಹನುಮಂತನ ಮೂರ್ತಿಯನ್ನು ನುಂಗಿದ್ದಾನೆ. ಚಿಕ್ಕ ಹನುಮನ ಮೂರ್ತಿ ಮಗುವಿನ ಅನ್ನನಾಳದಲ್ಲಿ ಸಿಕ್ಕಿಬಿದ್ದಿದೆ.
ಮಗುವಿನ ಅನ್ನನಾಳದಲ್ಲಿ ಹನುಮಂತನ ಮೂರ್ತಿ ಸಿಕ್ಕಿಬಿದ್ದರಿಂದ, ಬಾಲಕನ ಪ್ರಾಣಕ್ಕೆ ಕುತ್ತು ಎದುರಾಗಿತ್ತು. ಉಸಿರಾಟಕ್ಕೆ ತೊಂದರೆಯಾಗಿದ್ದರಿಂದ ಪೋಷಕರು ಮಗುವನ್ನು ಕರೆದುಕೊಂಡು ವೈದ್ಯರ ಬಳಿಗೆ ಹೋದ್ದಾರೆ. ವೈದ್ಯರು ತಡ ಮಾಡದೇ ಮಗುವಿನ ಅನ್ನನಾಳದಲ್ಲಿ ಸಿಕ್ಕಿಹಾಕಿಕೊಂಡಿದ್ದ ಹುನುಮಂತನ ಮೂರ್ತಿಯನ್ನು ವೈದ್ಯಕೀಯ ಸಾಧನ ಬಳಸಿ ಹೊರತೆಗೆಲು ಯಶಸ್ವಿಯಾದರು. ಒಂದು ನಿಮಿಷ ಹತ್ತು ಸೆಕೆಂಡುಗಳಲ್ಲಿ ಮಗುವಿನ ಅನ್ನನಾಳದಲ್ಲಿ ಸಿಲುಕಿಕೊಂಡಿದ್ದ ಚಿಕ್ಕ ಹನುಮನ ಮೂರ್ತಿಯನ್ನು ವೈದ್ಯ ಡಾ.ನಿತಿನ್ ಜೋಶಿ ಅವರು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಮಗು ನುಂಗಿರುವ ಚಿಕ್ಕ ಹನುಮನ ಮೂರ್ತಿ ಲಾಕೆಟ್ ರೀತಿಯಿದ್ದು, ಅದನ್ನು ಚೈನ್ನಲ್ಲಿ ಸೇರಿಸಿ ಸಾಮಾನ್ಯವಾಗಿ ಕೊರಳಲ್ಲಿ ಹಾಕಿಕೊಳ್ಳಲು ಬಳಸುತ್ತಾರೆ. ಮಗು ಆಟವಾಡುತ್ತಾ ಆ ಹನುಮಂತ ಮೂರ್ತಿಯನ್ನು ಬಾಯಿಯಲ್ಲಿ ಹಾಕಿಕೊಂಡಿದೆ. ವೈದ್ಯರ ನೆರವಿನಿಂದ ಆ ಚಿಕ್ಕ ಹನುಮಂತ ಮೂರ್ತಿಯನ್ನು ಹೊರೆತೆಗೆದಿದ್ದಾರೆ. ಇದರಿಂದ ಮಗುವಿನ ಮನೆಯವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ತೀವ್ರ ಪೇಚಾಟಕ್ಕೆ ಸಿಲುಕಿದ ಮಗುವಿನ ಪೋಷಕರು: ಆಟವಾಡುವಾಗ ಮಕ್ಕಳು ಏನು ಬಾಯಿಗೆ ಹಾಕಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಬಾಯಿಯಲ್ಲಿ ಏನನ್ನಾದರೂ ಅಗಿಯುವಾಗ, ಅದು ಗಂಟಲಿಗೆ ಸಿಲುಕಿಕೊಳ್ಳುತ್ತದೆ ಅಥವಾ ಅನ್ನನಾಳದಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಹೀಗಾದರೆ ಕುಟುಂಬದವರು ತೀವ್ರ ಪೇಚಾಟಕ್ಕೆ ಸಿಲುಕಿಕೊಳ್ಳುತ್ತಾರೆ. ಹಿಂಗೋಳಿಯ 4 ವರ್ಷದ ಬಾಲಕ ಮೂರು ಇಂಚಿನ ಲೋಹದ ಹನುಮಂತನನ್ನು ನುಂಗಿದ್ದಾನೆ. ಈ ವಿಗ್ರಹವು ಮಗುವಿನ ಅನ್ನನಾಳದಲ್ಲಿ ಸಿಲುಕಿಕೊಂಡಿದೆ. ಇದಾದ ಬಳಿಕ ಅವರ ಕುಟುಂಬದ ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಧಾವಂತಕ್ಕೆ ಮುಂದಾದರು.