ಪುಣೆ (ಮಹಾರಾಷ್ಟ್ರ):ದೇಶದೆಲ್ಲೆಡೆ ವಿಶ್ವಕಪ್ ಜ್ವರ ಕಾಣಿಸಿಕೊಂಡಿದೆ. ಕ್ರಿಕೆಟ್ ಪ್ರೇಮಿಗಳಿಗೆ ಇದು ಅತ್ಯಂತ ಸಂತಸದ ಕ್ಷಣ. ಕ್ರಿಕೆಟ್ ಎಲ್ಲರ ಅಚ್ಚುಮೆಚ್ಚಿನ ಆಟ. ಕೆಲವರು ಮೈದಾನದಲ್ಲಿ ಆಡುತ್ತಾರೆ ಮತ್ತು ಕೆಲವರು ಮೊಬೈಲ್‌ನಲ್ಲಿಯೂ ಆಡುತ್ತಾರೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೋಮನಾಥ್ ಝೆಂಡೆ ಗೇಮಿಂಗ್ಸ್ನಲ್ಲಿ 1.5 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾರೆ.
ಹಲವು ಬಾರಿ ಸೋತಿದ್ದ ಸೋಮನಾಥ್ ಝೆಂಡೆ:ಪಿಎಸ್ಐ ಸೋಮನಾಥ್ ಝೆಂಡೆ ಅವರನ್ನು ಪಿಂಪ್ರಿ ಚಿಂಚ್ವಾಡ್ ಪೊಲೀಸ್ ಹೆಡ್ ಕ್ವಾರ್ಟರ್ಸ್ನಲ್ಲಿ ಆರ್ಸಿಪಿಯಲ್ಲಿ ನಿಯೋಜಿಸಲಾಗಿದೆ. ಅವರು ಕ್ರಿಕೆಟ್‌ನಲ್ಲಿ ಒಲವು ಹೊಂದಿರುವ ಕಾರಣ, ಅವರು ಆನ್ಲೈನ್ನಲ್ಲಿ ಗೇಮಿಂಗ್ಸ್ನಲ್ಲಿ ತಮ್ಮ ನೆಚ್ಚಿನ ತಂಡ ಆಯ್ಕೆ ಮಾಡಿ ಬಹುಮಾನ ಪಡೆದುಕೊಂಡಿದ್ದಾರೆ.
ಕುಟುಂಬದಲ್ಲಿ ಮೂಡಿದ ಸಂತಸ:ನಿನ್ನೆ (ಅಕ್ಟೋಬರ್ 10ರಂದು) ಮಂಗಳವಾರವೂ ಕರ್ತವ್ಯದಲ್ಲಿರುವಾಗಲೇ ಗೇಮ್ಸ್ನಲ್ಲಿ ತಂಡವನ್ನು ಕಣಕ್ಕಿಳಿಸುವ ಮೂಲಕ ಬಾಂಗ್ಲಾದೇಶ ವರ್ಸಸ್ ಇಂಗ್ಲೆಂಡ್ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ್ದರು. ಕೆಲವೇ ಸಮಯದಲ್ಲಿ, ಅವರ ತಂಡವು ನಂಬರ್ ಸ್ಥಾನ ಪಡೆದುಕೊಂಡಿದ್ದರಿಂದ ಅವರು ಬಹುಮಾನ ಪಡೆದಿದ್ದಾರೆ. ಆ ಬಹುಮಾನವನ್ನು ನೋಡಿ ಅವರು ಆಶ್ಚರ್ಯಚಕಿತರಾಗಿದ್ದಾರೆ. ಒಂದೂವರೆ ಕೋಟಿ ರೂಪಾಯಿ ಬಹುಮಾನ ಸಿಕ್ಕಿದ್ದು ಸೋಮನಾಥ್ ಝೆಂಡೆ ಕುಟುಂಬಕ್ಕೆ ತುಂಬಾ ಖುಷಿ ತಂದಿದೆ.