ಪುಣೆ, ಮಹಾರಾಷ್ಟ್ರ:ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇನಲ್ಲಿ (Mumbai-Pune Expressway) ಕಂಟೈನರ್ ಪಲ್ಟಿಯಾದ ಪರಿಣಾಮ ಐದು ಕಾರುಗಳು ಜಖಂಗೊಂಡಿದ್ದು, ಅಪಘಾತ ನಡೆದ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಯಗಡ ಎಸ್ಪಿ ಸೋಮನಾಥ್ ಘರ್ಗೆ ತಿಳಿಸಿದರು.
ಮುಂಬೈ - ಪುಣೆ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಭೀಕರ ರಸ್ತೆ ಅಪಘಾತ ನಡೆದಿದೆ. ಪುಣೆ - ಮುಂಬೈ ಎಕ್ಸ್‌ಪ್ರೆಸ್ ವೇಯಲ್ಲಿ ಮುಂಬೈಗೆ ತೆರಳುತ್ತಿದ್ದ ಕಂಟೈನರ್ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಕಂಟೈನರ್ ಐದು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ, ಕಾರಿನಲ್ಲಿದ್ದ ಚಾಲಕ ಹಾಗೂ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ವೇಳೆ, ಈ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಕಂಟೈನರ್ ಪುಣೆಯಿಂದ ಮುಂಬೈಗೆ ಹೋಗುತ್ತಿದ್ದಾಗ ಲೋನಾವಾಲಾ ಪ್ರದೇಶದಲ್ಲಿ ಕಂಟೇನರ್ ಚಾಲಕನ ನಿಯಂತ್ರಣ ತಪ್ಪಿದೆ. ನಂತರ ಕಂಟೇನರ್ ಇನ್ನೊಂದು ಮಾರ್ಗದಲ್ಲಿ (ಲೈನ್) ಹೋಗಿ ಪಲ್ಟಿಯಾಗಿದೆ. ಪರಿಣಾಮ ಕಂಟೈನರ್ ಐದು ಕಾರುಗಳಿಗೆ ಡಿಕ್ಕಿ ಹೊಡೆದಿದೆ.
ನಿಧಾನವಾಗಿ ಹೆದ್ದಾರಿಯಲ್ಲಿ ಸಂಚಾರ ಆರಂಭ:ಘಟನೆಯ ಬಗ್ಗೆ ಹೆದ್ದಾರಿ ಪೊಲೀಸರಿಗೆ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಮತ್ತು ರಕ್ಷಣಾ ತಂಡ ಸ್ಥಳಕ್ಕೆ ತಲುಪಿತು. ಕೂಡಲೇ ಗಾಯಾಳುಗಳನ್ನು ಎಂಜಿಎಂ ಆಸ್ಪತ್ರೆ ಕಥೋಕೆಗೆ ದಾಖಲಿಸಿದ್ದಾರೆ. ಇತರ ಐದು ವಾಹನಗಳು ಜಖಂಗೊಂಡಿವೆ. ಆದರೆ, ಅದರಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಅಪಘಾತದ ನಂತರ ಮುಂಬೈ ಮತ್ತು ಪುಣೆಗೆ ತೆರಳುವ ವಾಹನ ಸಂಚಾರಕ್ಕೆ ಕೆಲಕಾಲ ತೊಂದರೆಯಾಯಿತು. ಪ್ರಸ್ತುತ, ಪುಣೆ ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ನಿಧಾನಗತಿಯಲ್ಲಿ ಸಂಚಾರ ಆರಂಭವಾಗಿದೆ.