ಮಹಾರಾಷ್ಟ್ರ:''ಪುಣೆ ಜಿಲ್ಲೆಯ ಭೀಮಾಂಶಕರ ಜ್ಯೋತಿರ್ಲಿಂಗ ನಿಜವಲ್ಲ'' ಎಂದು ಅಸ್ಸೋಂ ಸರ್ಕಾರವು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಈ ಕುರಿತು ಭೀಮಾಶಂಕರ ದೇವಸ್ಥಾನದ ಅರ್ಚಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಹೌದು, ಮಹಾರಾಷ್ಟ್ರದ ಪುಣ್ಯಕ್ಷೇತ್ರ ಭೀಮಾಶಂಕರವು ಪುಣೆ ಜಿಲ್ಲೆಯ ಅಂಬೇಗಾಂವ್ ತಾಲೂಕಿನಲ್ಲಿರುವ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಭೀಮಾಶಂಕರ ಕೂಡಾ ಒಂದು. ಆದರೆ, ಈಗ ಈ ಜ್ಯೋತಿರ್ಲಿಂಗಕ್ಕೆ ಹೊಸ ವಿವಾದ ಸುತ್ತಿಕೊಂಡಿದೆ.
ಭೀಮಾ ನದಿ ದಡದಲ್ಲಿರುವ ಜ್ಯೋತಿರ್ಲಿಂಗ:''ಪುಣೆಯಲ್ಲಿರುವ ಜ್ಯೋತಿರ್ಲಿಂಗವು ಪುಣೆ ಜಿಲ್ಲೆಯಲ್ಲಿಲ್ಲ. ಅದು ಅಸ್ಸೋಂನಲ್ಲಿದೆ'' ಎಂದು ಅಸ್ಸೋಂ ಸರ್ಕಾರ ಹೇಳಿಕೊಂಡಿದೆ. ಹೀಗಾಗಿ ಈ ಕ್ಷೇತ್ರದ ಬಗ್ಗೆ ವಿವಾದ ಹುಟ್ಟಿಕೊಂಡಿದೆ. ''ಭೀಮಾ ನದಿಯ ದಡದಲ್ಲಿರುವ ಜ್ಯೋತಿರ್ಲಿಂಗವನ್ನು ಹಿಂದಿನಿಂದಲೂ ಭೀಮಾಶಂಕರ ಎಂದು ಕರೆಯಲಾಗುತ್ತಿತ್ತು. ಅಸ್ಸೋಂ ಸರ್ಕಾರ ಹೇಳುವುದನ್ನು ಯಾರೂ ನಂಬಬಾರದು'' ಎಂದು ಭೀಮಾಶಂಕರ ದೇವಸ್ಥಾನದ ಪ್ರಧಾನ ಅರ್ಚಕ ಮಧುಕರಶಾಸ್ತ್ರಿ ಗಾವಂಡೆ ಎಚ್ಚರಿಸಿದ್ದಾರೆ.
ದೇಶದಲ್ಲಿವೆ 12 ಜ್ಯೋತಿರ್ಲಿಂಗಗಳು:ದೇಶದ 12 ಜ್ಯೋತಿರ್ಲಿಂಗಗಳ ಪೈಕಿ ಮೂರು ಜ್ಯೋತಿರ್ಲಿಂಗಗಳು ಮಹಾರಾಷ್ಟ್ರದಲ್ಲಿವೆ. ಅವುಗಳಲ್ಲಿ ಒಂದು ಪುಣೆಯಲ್ಲಿರುವ ಭೀಮಾಶಂಕರ, ದೇಶದ ಎಲ್ಲೆಡೆಯಿಂದ ಶಿವಭಕ್ತರು ಶಂಕರನ ದರ್ಶನಕ್ಕಾಗಿ ಇಲ್ಲಿಗೆ ಬರುತ್ತಾರೆ. ಇದು 12 ಜ್ಯೋತಿರ್ಲಿಂಗಗಳಲ್ಲಿ ಆರನೆಯ ಜ್ಯೋತಿರ್ಲಿಂಗವಾಗಿದೆ. ಆದರೆ, ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಹಾರಾಷ್ಟ್ರದಿಂದ ತೀರ್ಥಕ್ಷೇತ್ರವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ದೊಡ್ಡ ವಿವಾದವೇ ಸೃಷ್ಟಿ:ಮಹಾರಾಷ್ಟ್ರದಲ್ಲಿರುವ ಭೀಮಾಶಂಕರ ಜ್ಯೋತಿರ್ಲಿಂಗ ನಿಜವಲ್ಲ ಎಂದು ಅಸ್ಸಾಂ ಸರ್ಕಾರ ಪ್ರತಿಪಾದಿಸಲು ಹೊರಟಿಗೆ. ಆರನೇ ಜ್ಯೋತಿರ್ಲಿಂಗ ಅಸ್ಸಾಂನಲ್ಲಿದೆ ಎಂದು ಅಸ್ಸಾಂ ಸರ್ಕಾರ ಹೇಳಿಕೊಂಡಿದೆ. ಇದೀಗ ಬಿಜೆಪಿ ಆಡಳಿತದ ಅಸ್ಸೋಂ ಸರ್ಕಾರ ಬಿಡುಗಡೆ ಮಾಡಿರುವ ಜಾಹೀರಾತಿನಿಂದ ದೊಡ್ಡ ವಿವಾದವೇ ಸೃಷ್ಟಿಯಾಗಿದೆ.