ಮುಂಬೈ :ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ವಿರೋಧ ಪಕ್ಷಗಳೆಲ್ಲ ಒಗ್ಗೂಡಿ ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿಗೆ ಇಂಡಿಯಾ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್) ಎಂದು ನಾಮಕರಣ ಮಾಡಿಕೊಂಡಿವೆ. ಈ ಮೈತ್ರಿ ಪಕ್ಷಗಳು ಆಗಸ್ಟ್ 25 ಮತ್ತು 26 ರಂದು ಮುಂಬೈನಲ್ಲಿ ಮೂರನೇ ಬಾರಿಗೆ ಸಭೆ ಸೇರಲಿವೆ ಎಂಬುದು ತಿಳಿದು ಬಂದಿದೆ.
ಈ ಸಭೆಯನ್ನು ಉದ್ಧವ್ ಠಾಕ್ರೆ ಗುಂಪು, ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷ ಆಯೋಜಿಸಲಿದೆ ಎಂಬ ಮಾಹಿತಿ ತಿಳಿದುಬಂದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಈ ಮೈತ್ರಿಕೂಟವನ್ನು ರಚಿಸಲಾಗಿದೆ. ಈ ಮೈತ್ರಿಪಕ್ಷಗಳ ಸಭೆಗಳಲ್ಲಿ ದೇಶದ 26 ಬಿಜೆಪಿ ವಿರೋಧಿ ಪಕ್ಷಗಳು ಭಾಗವಹಿಸಿದ್ದವು. ಮೊದಲ ಸಭೆ ಜೂನ್ 23 ರಂದು ಬಿಹಾರದ ಪಾಟ್ನಾದಲ್ಲಿ ನಡೆದಿತ್ತು. ನಂತರ ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ 2ನೇ ಸಭೆ ನಡೆದಿದೆ. ಮುಂಬೈನಲ್ಲಿ ಮೂರನೇ ಸಭೆ ನಡೆಯಲಿದೆ.
ಸಂಸತ್ತಿನ ಅಧಿವೇಶನ ಮುಗಿದ ನಂತರ ಒಂದು ದಿನ ಅಥವಾ ಎರಡು ದಿನದಲ್ಲಿ ದಿನಾಂಕಗಳನ್ನು ಅಂತಿಮಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಸಮನ್ವಯ ಸಮಿತಿಗಳ ಸಂಯೋಜನೆ ಕುರಿತು ಸಮಾಲೋಚನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ಎಎಪಿ, ಜೆಡಿ(ಯು), ಆರ್ಜೆಡಿ, ಶಿವಸೇನೆ (ಯುಬಿಟಿ), ಎನ್‌ಸಿಪಿ, ಜೆಎಂಎಂ, ಸಮಾಜವಾದಿ ಪಕ್ಷ ಹಾಗೂ ಸಿಪಿಐ(ಎಂ) 11 ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಶರದ್ ಪವಾರ್ ಭೇಟಿಗೆ ಕಾಂಗ್ರೆಸ್ ನಾಯಕ : ಹಿರಿಯ ಕಾಂಗ್ರೆಸ್ ನಾಯಕ ಬಾಳಾಸಾಹೇಬ್ ಥೋರಟ್ ಮತ್ತು ರಾಜ್ಯಾಧ್ಯಕ್ಷ ನಾನಾ ಪಟೋಲೆ ಶೀಘ್ರದಲ್ಲೇ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿಯಾಗಲಿದ್ದಾರೆ. ಇಂಡಿಯಾ ಸಭೆ ಹಿನ್ನೆಲೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಪ್ರಸ್ತುತ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಪ್ರತಿಪಕ್ಷ ನಾಯಕರ ಆಯ್ಕೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಮಹಾವಿಕಾಸ್ ಅಘಾಡಿಯ ಮುಂದಿನ ಕಾರ್ಯತಂತ್ರ ಹೇಗಿರಬೇಕು? ಎಂಬ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಯಾರು ಸಂಘಟನೆ ಮಾಡಬೇಕು ಎಂಬುದು ಪಕ್ಷದ ಅಭಿಪ್ರಾಯ. ನೀವು ನಮಗೆ ಜವಾಬ್ದಾರಿ ನೀಡಿದರೆ ನಾವು ಸಂತೋಷಪಡುತ್ತೇವೆ. ಸಂಕೋಚವಿಲ್ಲದೇ ಎಲ್ಲರನ್ನು ಸಂತೋಷದಿಂದ ನೋಡುತ್ತೇವೆ. ಕಳೆದ ಕೆಲವು ದಿನಗಳಲ್ಲಿ ಮುಂಬೈನಲ್ಲಿ ಮಹಾ ಮೆರವಣಿಗೆ ಯಶಸ್ವಿಯಾಗಿ ಆಯೋಜಿಸಿದಾಗ ಎನ್‌ಸಿಪಿ ಮತ್ತು ಕಾಂಗ್ರೆಸ್ ಸಹ ಸಹಕರಿಸಿದ್ದನ್ನು ನೀವು ನೋಡಿರಬಹುದು. ನಮಗೆ ಸಂಘಟಿಸಲು ಅವಕಾಶ ನೀಡಿದರೆ ಒಳ್ಳೆಯದು ಎಂದು ಠಾಕ್ರೆ ಗುಂಪಿನ ಶಾಸಕ ಸಚಿನ್ ಅಹಿರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉದ್ಧವ್ ಠಾಕ್ರೆ ಅವರೊಂದಿಗೆ ಸಭೆ ನಡೆಸಿದ್ದೇವೆ: ಕಾಂಗ್ರೆಸ್ ಪಕ್ಷವು ಇಂಡಿಯಾ ಸಭೆಯನ್ನು ಆಯೋಜಿಸಬೇಕೆಂದು ನಾವು ಬಯಸುತ್ತೇವೆ. ಈ ನಿಟ್ಟಿನಲ್ಲಿ ನಾವು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ಸಭೆ ನಡೆಸಿದ್ದೇವೆ. ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ಮಾಹಿತಿ ನೀಡಿದರು.
ಇದನ್ನೂ ಓದಿ:ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ 2.0 ಪ್ರಾರಂಭಿಸಲು ಕಾಂಗ್ರೆಸ್ ಸಜ್ಜು!