1. ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ 'ಮೆಟ್ರೋ ಮ್ಯಾನ್' ಇ.ಶ್ರೀಧರನ್ ಅವರು ಅಂಚೆ ಮತಗಳ ಎಣಿಕೆಯಲ್ಲಿ 1,804 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
2. ಬಿಜೆಪಿಯ ಕುಮ್ಮನಂ ರಾಜಶೇಖರನ್ ಅವರು ನೆಮೊಮ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಅಂಚೆ ಮತ ಎಣಿಸಿದ ಸಮಯದಿಂದ ಅವರು ಮುನ್ನಡೆ ಸಾಧಿಸುತ್ತಿದ್ದರು.
3.ಕಾಂಗ್ರೆಸ್ ಅಭ್ಯರ್ಥಿ ರೋಮೆನ್ ಚಂದ್ರ ಬೋರ್ತಕೂರ್ ಅವರ ವಿರುದ್ಧ ಅಸ್ಸೋಂ ಆರೋಗ್ಯ ಸಚಿವ ಮತ್ತು ಬಿಜೆಪಿ ಅಭ್ಯರ್ಥಿ ಹಿಮಂತ ಬಿಸ್ವಾ ಶರ್ಮಾ ಜಲುಕ್ಬರಿ ಕ್ಷೇತ್ರದಲ್ಲಿ ಮುನ್ನಡೆ ಕಂಡುಕೊಂಡಿದ್ದಾರೆ.
4.ಪಶ್ಚಿಮ ಬಂಗಾಳದ ಪ್ರತಿಷ್ಠಿತ ನಂದಿಗ್ರಾಮ ಕ್ಷೇತ್ರದಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗಿಂತ ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ 2000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
5.ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧರ್ಮಡಂ ಕ್ಷೇತ್ರದಲ್ಲಿ ತಮ್ಮ ಸ್ಪರ್ಧಿಗಿಂತ ಮುನ್ನಡೆ ಕಾಯ್ದುಕೊಂಡದ್ದಾರೆ.