ಪಾಲಕ್ಕಾಡ್ (ಕೇರಳ): ವಿಧಾನಸಭಾ ಚುನಾವಣೆ ಹತ್ತಿರದಲ್ಲಿದ್ದು, ಕೇರಳದ ಪಾಲಕ್ಕಾಡ್ನಲ್ಲಿ ಸಾರ್ವಜನಿಕ ರ‍್ಯಾಲಿಯ್ನನುದ್ದೇಶಿಸಿ ಮಾತನಾಡಲು ಬಂದಿರುವ ಪ್ರಧಾನಿ ನರೇಂದ್ರ ಮೋದಿಗೆ 'ಮೆಟ್ರೋ ಮ್ಯಾನ್' ಎಂದು ಹೆಸರುವಾಸಿಯಾಗಿರುವ ಇ. ಶ್ರೀಧರನ್ ಸನ್ಮಾನ ಮಾಡಿದ್ದಾರೆ.
ಬಳಿಕ ಮಾತನಾಡಿದ ಶ್ರೀಧರನ್, ಪಾಲಕ್ಕಾಡ್ ಕ್ಷೇತ್ರದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಿರುವುದಾಗಿ ತಿಳಿಸಿದರು. ಪಾಲಕ್ಕಾಡ್ಗೆ ದಿನದ 24 ಗಂಟೆಗಳ ನೀರು ಸರಬರಾಜು ಮಾಡಿಸುವೆ, ಘನತ್ಯಾಜ್ಯ ನಿರ್ವಹಣಾ ಯೋಜನೆ ಜಾರಿಗೆ ತರುವೆ ಎಂದ ಅವರು, ಮುಂದಿನ 5 ವರ್ಷಗಳಲ್ಲಿ 25 ಲಕ್ಷ ಮರಗಳನ್ನು ನೆಡುವ ಮೂಲಕ ಈ ಪ್ರದೇಶವನ್ನು ಹಸಿರಾಗಿಸುವೆ ಎಂದು ಭರವಸೆಗಳನ್ನು ನೀಡಿದರು.