ನವದೆಹಲಿ:ದೆಹಲಿ ಮೆಟ್ರೋ ಇತ್ತೀಚೆಗೆ ವಿಚಿತ್ರ ಕಾರಣಗಳಿಗಾಗಿಯೇ ಸುದ್ದಿಯಾಗುತ್ತಿದೆ. ಕೆಲ ದಿನಗಳ ಹಿಂದೆ ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಳ್ಳವ ದೃಶ್ಯ ಸೆರೆಯಾಗಿತ್ತು. ಬಳಿಕ ಯುವ ಜೋಡಿ ಮೈ ಮರೆತು ಲಿಪ್‌ಲಾಕ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಇತ್ತೀಚೆಗೆ ಯುವಕರಿಬ್ಬರು ಮೆಟ್ರೋ ರೈಲಿನಲ್ಲಿ ಹುಚ್ಚಾಟ ಮೆರೆಯುತ್ತಿರುವುದು ಕಂಡು ಬಂದಿತ್ತು. ಇದೀಗ ನಿನ್ನೆ (ಶುಕ್ರವಾರ) ಮೆಟ್ರೋದಲ್ಲಿ ಯುವತಿಯೊಬ್ಬಳು ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ರೈಲಿನ ಒಳಗೆ ಮತ್ತು ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರ ಅನುಕೂಲ ಮತ್ತು ಸುರಕ್ಷತೆ ತಮ್ಮ ಆದ್ಯತೆಯಾಗಿದೆ ಎಂದು ಮೆಟ್ರೋ ಪೊಲೀಸರು ಹೇಳುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋದಲ್ಲಿ ಅಶ್ಲೀಲ ಕೃತ್ಯಗಳು, ಹೊಡೆದಾಟದ ಘಟನೆಗಳು, ಪ್ರಯಾಣಿಕರ ನಡುವೆ ಪ್ರವೇಶಿಸಿ ವಿಡಿಯೋ ಚಿತ್ರೀಕರಣ, ನೃತ್ಯ ಮಾಡುವುದು, ಮೆಟ್ರೋ ಸೇವೆಗೆ ಅಡ್ಡಿಪಡಿಸುವ ಅನೇಕ ವಿಡಿಯೋಗಳು ವೈರಲ್ ಆಗುತ್ತಿವೆ.
ಇಂತಹ ಘಟನೆಗಳು ದೆಹಲಿ ಮೆಟ್ರೋಗೆ ತೊಂದರೆಯಾಗಿ ಪರಿಣಮಿಸಿದೆ. ಕೃತ್ಯ ಎಸಗುವವರು ದೆಹಲಿ ಮೆಟ್ರೋಗೆ ಸವಾಲಾಗಿ ಉಳಿದಿದ್ದಾರೆ. ಇಂತಹ ಘಟನೆಗಳು ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವುದಲ್ಲದೇ, ದೆಹಲಿ ಮೆಟ್ರೋದಲ್ಲಿನ ಭದ್ರತಾ ವ್ಯವಸ್ಥೆಗಳ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಕಳೆದ ನಾಲ್ಕೈದು ತಿಂಗಳಲ್ಲಿ ಸಾಮಾನ್ಯ ಪ್ರಯಾಣಿಕರು ತೊಂದರೆ ಎದುರಿಸಬೇಕಾದ ಇಂತಹ ಹಲವು ಘಟನೆಗಳು ನಡೆದಿವೆ. ಹೀಗಿರುವಾಗ ಇಂತಹ ಘಟನೆಗಳನ್ನು ಏಕೆ? ತಡೆಯಲಾಗುತ್ತಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ.
ನೃತ್ಯದ ವಿಡಿಯೋ ವೈರಲ್: ಶಾಲಿನಿ ಕುಮಾವತ್ ಎಂಬ ಬಳಕೆದಾರರು ಸಲ್ಮಾನ್ ಖಾನ್ ಅವರ ಹಾಡಿಗೆ ಯುವಕನೊಬ್ಬ ನೃತ್ಯ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರ ಗುಂಪನ್ನು ಪ್ರವೇಶಿಸಿ ಯುವಕ ವಿಡಿಯೋ ಮಾಡುತ್ತಿದ್ದಾನೆ. ಮಹಿಳಾ ಪ್ರಯಾಣಿಕರು ಸಹ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದು, ಅವರು ಕಿರಿಕಿರಿ ಅನುಭವಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ.
ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರು ಮತ್ತು ಹುಡುಗಿಯರಿಗೆ ಇದು ಒಂದು ರೀತಿಯ ಕಿರುಕುಳವಾಗಿದೆ ಎಂದು ಶಾಲಿನಿ ಕುಮಾವತ್ ಬರೆದಿದ್ದಾರೆ. ಅಂತಹವರ ವಿರುದ್ಧ ದೆಹಲಿ ಮೆಟ್ರೋ ಕಠಿಣ ಕ್ರಮ ಕೈಗೊಳ್ಳಬೇಕು. ಇದರಿಂದ ಮೆಟ್ರೋದಲ್ಲಿ ಪ್ರಯಾಣಿಸುವ ಜನರನ್ನು ತೊಂದರೆಯಿಂದ ಪಾರು ಮಾಡಬಹುದು ಎಂದು ಸಲಹೆ ನೀಡಿದ್ದರು. ಇದಾದ ನಂತರ ಶುಕ್ರವಾರ ಯುವತಿಯೊಬ್ಬಳು ಪಂಜಾಬಿ ಹಾಡಿಗೆ ಸ್ಕರ್ಟ್ ಟಾಪ್ ಹಾಕಿಕೊಂಡು ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಹುಚ್ಚಾಟ ಮೆರೆದಿದ್ದ ಯುವಕರು:ಯುವಕರಿಬ್ಬರು ಮೆಟ್ರೋ ರೈಲಿನಲ್ಲಿ ಹುಚ್ಚಾಟ ಮೆರೆಯುತ್ತಿರುವುದು ಇತ್ತೀಚೆಗೆ ಕಂಡು ಬಂದಿದೆ. ಪಕ್ಕದಲ್ಲೇ ಇರುವ ಸ್ನೇಹಿತರು ಅಪಹಾಸ್ಯ ಮಾಡುತ್ತ ನಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಯುವಕರಿಬ್ಬರು ಮೆಟ್ರೋ ರೈಲಿನ ಬಾಗಿಲ ಬಳಿ ನಿಂತು ಅದನ್ನು ಮುಚ್ಚುವ ಸಮಯಕ್ಕೆ ಆಟೋ ಮ್ಯಾಟಿಕ್ ಡೋರ್ಗೆ ಅಡ್ಡಲಾಗಿ ಕಾಲನ್ನು ಇರಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿತ್ತು.
ಮೈ ಮರೆತು ಲಿಪ್‌ಲಾಕ್ ಮಾಡಿದ ಜೋಡಿ:ದೆಹಲಿಯ ಮೆಟ್ರೋ ಕೋಚ್‌ನಲ್ಲಿ ಯುವ ಜೋಡಿ ಪರಸ್ಪರ ಚುಂಬಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಮೆಟ್ರೋ ರೈಲಿನಲ್ಲಿ ಸಾರ್ವಜನಿಕವಾಗಿ ಕಿಸ್ ಮಾಡುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ದೆಹಲಿ ಮೆಟ್ರೋ ಪ್ರಯಾಣದ ಹೊರತಾಗಿ ಇತರ ಚಟುವಟಿಕೆಗಳ ತಾಣವಾಗಿದೆ ಎಂದು ಹಲವರು ಕೋಪ ಮತ್ತು ಹಾಸ್ಯದಿಂದ ಪ್ರತಿಕ್ರಿಯಿಸಿದ್ದರು.
ಮೆಟ್ರೋದಲ್ಲಿ ಜಡೆಜಗಳ:ಇಬ್ಬರು ಯುವತಿಯರು ಮೆಟ್ರೋದೊಳಗೆ ಕ್ಷುಲ್ಲಕ ಕಾರಣಕ್ಕೆ ಕಿತ್ತಾಡಿಕೊಂಡಿದ್ದ, ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಇಬ್ಬರು ಯುವತಿಯರು ಜೋರು ಜೋರಾಗಿ ಪರಸ್ಪರ ಕೆಟ್ಟ ಪದಗಳಿಂದ ಬೈಯ್ದುಕೊಂಡಿದ್ದರು. ಈ ವೇಳೆ ಉಳಿದ ಮಹಿಳೆಯರು ಜಗಳವನ್ನು ನಿಲ್ಲಿಸುವಂತೆ ಕೇಳಿಕೊಳ್ಳುತ್ತಾರೆ. ಆದರೆ ಇಬ್ಬರೂ ತಮ್ಮ ವಾಕ್ಸಮರವನ್ನು ಮುಂದುವರಿಸುತ್ತಾರೆ. ಒಬ್ಬಳು ಯುವತಿ ಕಾಲಿನಿಂದ ಚಪ್ಪಲಿ ತೆಗೆದು ಹೊಡೆಯಲು ಯತ್ನಿಸುತ್ತಾಳೆ. ಮತ್ತೊಬ್ಬಳು ವಾಟರ್ ಬಾಟಲ್‌ನ ಮುಚ್ಚಳ ತೆಗೆದು ಮತ್ತೊಬ್ಬಳ ಮುಖಕ್ಕೆ ನೀರನ್ನು ಎರಚುವುದು ವಿಡಿಯೋದಲ್ಲಿ ಸೆರೆಯಾಗಿತ್ತು.
ಬಿಕಿನಿ ತೊಟ್ಟು ಮೆಟ್ರೋ ಹತ್ತಿದ ಯುವತಿ:ಮೆಟ್ರೋದ ಕೋಚ್‌ನಲ್ಲಿ ಯುವತಿಯೊಬ್ಬಳು ಚಿಕ್ಕ ಬಟ್ಟೆಯಲ್ಲಿ ಪ್ರಯಾಣಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಆಕೆ ಇತರ ಮಹಿಳಾ ಪ್ರಯಾಣಿಕರೊಂದಿಗೆ ಮೆಟ್ರೋ ಕೋಚ್‌ನೊಳಗೆ ಕುಳಿತಿರುವುದನ್ನು ಕಾಣಬಹುದು.
ದೆಹಲಿ ಮೆಟ್ರೋ ಮೂಲಕ ಪ್ರತಿದಿನ ಲಕ್ಷಾಂತರ ಜನರು ತಮ್ಮ ಗಮ್ಯ ಸ್ಥಾನವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಆರಾಮದಾಯಕವಾಗಿ ತಲುಪುತ್ತಾರೆ. ಆದರೆ ಕೆಲವು ಪ್ರಯಾಣಿಕರು ರೈಲಿನಲ್ಲಿ ಮಿತಿಗಳನ್ನು ಮೀರುತ್ತಾರೆ. "ಮೆಟ್ರೋದಲ್ಲಿ ಪ್ರಯಾಣಿಸುವಾಗ ಇಂತಹ ಘಟನೆಗಳು ನಡೆಯದಂತೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೆಟ್ರೋ ರೈಲು ಮತ್ತು ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಇಂತಹ ಅನಗತ್ಯ ಘಟನೆಗಳನ್ನು ತಡೆಗಟ್ಟುವುದು ನಮ್ಮ ಆದ್ಯತೆಯಾಗಿದೆ. ಇಂತಹ ಘಟನೆಗಳಿಂದ ಮೆಟ್ರೋ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಅವುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ"- ಡಿ.ರಾಮ್ ಗೋಪಾಲ್ ನಾಯ್ಕ್, ಮೆಟ್ರೋ ಡಿಸಿಪಿ
ಇದನ್ನೂ ಓದಿ:ಮೆಟ್ರೋ ರೈಲಿನಲ್ಲಿ ಯುವತಿ ಎದುರಿಗೆ ಹಸ್ತಮೈಥುನ ಮಾಡಿದ ಯುವಕ... ಮುಂದೇನಾಯ್ತು?