ನವದೆಹಲಿ: ಬೃಹತ್ ಸಾಮಾಜಿಕ ಮಾಧ್ಯಮ ಕಂಪನಿ ಮೆಟಾ ನವೆಂಬರ್‌ನಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಭಾರತೀಯ ಬಳಕೆದಾರರು ಪೋಸ್ಟ್ ಮಾಡಿದ್ದ 2.29 ಕೋಟಿಗೂ ಹೆಚ್ಚು ಕಂಟೆಂಟ್‌ಗಳ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಕಂಪನಿ ಗುರುವಾರ ಬಿಡುಗಡೆ ಮಾಡಿದ ಇಂಡಿಯಾ ಮಾಸಿಕ ವರದಿ ತಿಳಿಸಿದೆ. ವರದಿಯಲ್ಲಿನ ಮಾಹಿತಿಯ ಪ್ರಕಾರ, ಫೇಸ್‌ಬುಕ್‌ನಲ್ಲಿ 1.95 ಕೋಟಿಗೂ ಹೆಚ್ಚು ಕಂಟೆಂಟ್ ಪೀಸ್ಗಳು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 33.9 ಲಕ್ಷ ಕಂಟೆಂಟ್ ಪೀಸ್ಗಳ ಮೇಲೆ ಕಂಪನಿಯು ಕ್ರಮ ಕೈಗೊಂಡಿದೆ.
ಕಂಪನಿಯು 1.49 ಕೋಟಿಗೂ ಹೆಚ್ಚು ಸ್ಪ್ಯಾಮ್ ಕಂಟೆಂಟ್ ಮೇಲೆ ಕ್ರಮ ಕೈಗೊಂಡಿದೆ. ಅಲ್ಲದೇ ವಯಸ್ಕ ನಗ್ನತೆ ಮತ್ತು ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದ 18 ಲಕ್ಷ ಕಂಟೆಂಟ್, ಹಿಂಸಾತ್ಮಕ ಮತ್ತು ಗ್ರಾಫಿಕ್ ವಿಷಯ ಇತ್ಯಾದಿಗಳಿಗೆ ಸಂಬಂಧಿಸಿದ 12 ಲಕ್ಷ ಕಂಟೆಂಟ್ ಪೋಸ್ಟ್ಗಳ ಮೇಲೆ ಫೇಸ್‌ಬುಕ್ ಕ್ರಮ ಕೈಗೊಂಡಿದೆ.
ಪ್ರಚೋದನಾತ್ಮಕ ವಿಷಯ ವಜಾ:ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ, ಆತ್ಮಹತ್ಯೆ ಮತ್ತು ಸ್ವಯಂ - ಗಾಯಕ್ಕೆ ಸಂಬಂಧಿಸಿದ 10 ಲಕ್ಷ ಕಂಟೆಂಟ್, ಹಿಂಸಾತ್ಮಕ ವಿಷಯಕ್ಕೆ ಸಂಬಂಧಿಸಿದ 7.27 ಲಕ್ಷ ಕಂಟೆಂಟ್, 7.12 ಲಕ್ಷ ವಯಸ್ಕ ನಗ್ನತೆ ಮತ್ತು ಲೈಂಗಿಕ ಚಟುವಟಿಕೆಯ ಕಂಟೆಂಟ್, 4.84 ಲಕ್ಷ ಬೆದರಿಸುವ ಅಥವಾ ಕಿರುಕುಳಕ್ಕೆ ಸಂಬಂಧಿಸಿದ ಕಂಟೆಂಟ್, ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಇತರ ವಿಷಯದ ಹಿಂಸೆ ಮತ್ತು ಪ್ರಚೋದನೆಯನ್ನು ಉತ್ತೇಜಿಸುವ 2.25 ಲಕ್ಷ ಕಂಟೆಂಟ್ಗಳನ್ನು ಮೆಟಾ ತೆಗೆದುಹಾಕಿದೆ.