ಕರ್ನಾಟಕ

karnataka

ETV Bharat / bharat

ಜನಿಸಿದ ಎರಡೇ ತಾಸಿನಲ್ಲಿ ಪ್ರಾಣಬಿಟ್ಟ ಮತ್ಸ್ಯ ರೂಪದ ಮಗು - ಸೈರೆನೋಮೆಲಿಯಾ

ಹೈದರಾಬಾದ್​ನಲ್ಲಿ ಮಹಿಳೆಯೊಬ್ಬರು ಮೀನಿನಾಕಾರದ ಮಗುವಿಗೆ ಜನ್ಮ ನೀಡಿದ್ದು, ಎರಡೇ ತಾಸಿನಲ್ಲಿ ಆ ಶಿಶು ಪ್ರಾಣಬಿಟ್ಟಿದೆ.

Mermaid shape baby died within 2 hours after birth
ಜನಿಸಿದ ಎರಡೇ ತಾಸಿನಲ್ಲಿ ಪ್ರಾಣಬಿಟ್ಟ ಮತ್ಸ್ಯ ರೂಪದ ಮಗು

By

Published : Mar 12, 2021, 10:38 AM IST

ಹೈದರಾಬಾದ್​: ಅಪರೂಪದಲ್ಲಿ ಅಪರೂಪ ಎಂಬಂತೆ ತೆಲಂಗಾಣದ ಹೈದರಾಬಾದ್​ನಲ್ಲಿ ಮತ್ಸ್ಯರೂಪದ ಮಗುವೊಂದು ಜನಿಸಿದೆ. ಆದರೆ ಹುಟ್ಟಿದ ಎರಡೇ ಗಂಟೆಯಲ್ಲಿ ಕೊನೆಯುಸಿರೆಳೆದಿದೆ.

ಹೈದರಾಬಾದ್​ನ ಪೆಟ್ಲಾಬುರ್ಜ್​ನಲ್ಲಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮೀನಿನಾಕಾರದ ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಎರಡು ತಾಸುಗಳಲ್ಲೇ ಮೃತಪಟ್ಟಿದೆ. ಇನ್ನು ತಾಯಿ ಕ್ಷೇಮವಾಗಿದ್ದಾರೆ.

ಇದನ್ನೂ ಓದಿ: ಅಯ್ಯೋ ದುರ್ವಿಧಿಯೇ.. ಮಕ್ಕಳ ಮೃತದೇಹ ಒಯ್ಯಲು ಹಣವಿಲ್ಲದೆ ಪೋಷಕರು ವಿಲ ವಿಲ!

ಇಂತಹ ಶಿಶು ಜನಿಸುವುದು ಬಹಳ ಅಪರೂಪ ಹಾಗೂ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪುತ್ತವೆ. ಈ ವಿಚಿತ್ರ ಕಾಯಿಲೆಯನ್ನು 'ಮರ್ಮೇಡ್​ ಸಿಂಡ್ರೋಮ್​' ಅಥವಾ 'ಸೈರೆನೋಮೆಲಿಯಾ' ಎಂದು ಕರೆಯುತ್ತಾರೆ. ಈ ಮಕ್ಕಳಲ್ಲಿ ಜಠರ, ಕರುಳು, ಬೆನ್ನುಮೂಳೆ, ಮೂತ್ರಪಿಂಡ ಸೇರಿದಂತೆ ದೇಹದ ಕೆಲ ಅಂಗಾಂಗಗಳು ಒಂದಕ್ಕೊಂದು ಅಂಟಿಕೊಂಡು, ಕಾಲುಗಳು ಕೂಡಿಕೊಂಡಿರುತ್ತವೆ ಎಂದು ವೈದ್ಯರು ಹೇಳುತ್ತಾರೆ.

ABOUT THE AUTHOR

...view details