ಕರ್ನಾಟಕ

karnataka

ETV Bharat / bharat

ಮುಂಬೈ: ₹1,400 ಕೋಟಿ ಮೌಲ್ಯದ ಮೆಫೆಡ್ರೊನ್ ಡ್ರಗ್ಸ್​ ವಶ, ಐವರ ಬಂಧನ - mephedrone seized by Mumbai police

ಔಷಧ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿರುವ ಮುಂಬೈ ಮಾದಕ ವಸ್ತು ನಿಗ್ರಹ ಪಡೆ ಒಂದು ಸಾವಿರ ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮೆಫೆಡ್ರೊನ್​ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ.

ಮೆಫೆಡ್ರೋನ್​ ಮಾದಕ ವಸ್ತು
mephedrone seized by Mumbai police

By

Published : Aug 4, 2022, 5:11 PM IST

ಮುಂಬೈ(ಮಹಾರಾಷ್ಟ್ರ):700 ಕೆ.ಜಿಗೂ ಅಧಿಕ ಪ್ರಮಾಣದ ಮೆಫೆಡ್ರೊನ್(Mephedrone) ಮಾದಕ ವಸ್ತು ವಶಕ್ಕೆ ಪಡೆದುಕೊಳ್ಳುವಲ್ಲಿ ಮುಂಬೈ ಮಾದಕ ವಸ್ತು ನಿಗ್ರಹ ಪಡೆ ಯಶಸ್ವಿಯಾಗಿದೆ. ಇದರ ಒಟ್ಟು ಮೌಲ್ಯ 1,400 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪದವೀಧರ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪಾಲ್ಘಾಟ್​ ಜಿಲ್ಲೆಯ ನಳಸೋಪಾರಾ ಎಂಬಲ್ಲಿ ಔಷಧ ತಯಾರಿಕಾ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿದ್ದರು.

ಇದನ್ನೂ ಓದಿ:ಭೂ ಹಗರಣ ಪ್ರಕರಣ: ಸಂಜಯ್​​ ರಾವುತ್ ಪತ್ನಿಗೂ ಸಮನ್ಸ್ ನೀಡಿದ ಇಡಿ

ದಾಳಿಗೊಳಗಾದ ಕಾರ್ಖಾನೆಯಲ್ಲಿ ನಿಷೇಧಿತ ಮೆಫೆಡ್ರೊನ್​​ ತಯಾರು ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಗರ ಪೊಲೀಸರು ದಾಳಿ ನಡೆಸಿ ಪತ್ತೆ ಹಚ್ಚಿದ ಅತಿ ದೊಡ್ಡ ಪ್ರಮಾಣದ ಅಕ್ರಮ ಡ್ರಗ್ಸ್ ಕೇಸ್ ಇದಾಗಿದೆ.

ABOUT THE AUTHOR

...view details