ಕರ್ನಾಟಕ

karnataka

ETV Bharat / bharat

ಮಗುವನ್ನು ಕೊಂದ ಮಾನಸಿಕ ಅಸ್ವಸ್ಥ: ರೊಚ್ಚಿಗೆದ್ದು ಆರೋಪಿಯನ್ನು ಸಾಯಿಸಿ ಬೆಂಕಿಹಚ್ಚಿದ್ರು ಜನ!

ಮಾನಸಿಕ ಅಸ್ವಸ್ಥನೋರ್ವ ಮಗುವನ್ನು ಕೊಂದಿದ್ದು, ಇದರಿಂದ ಕುಪಿತರಾದ ಸ್ಥಳೀಯರು ಆರೋಪಿಯನ್ನು ಹೊಡೆದು ಕೊಂದು ಬಳಿಕ ಬೆಂಕಿಹಚ್ಚಿದ್ದಾರೆ.

ಮಗುವನ್ನು ಕೊಂದ ಮಾನಸಿಕ ಅಸ್ವಸ್ಥ
ಮಗುವನ್ನು ಕೊಂದ ಮಾನಸಿಕ ಅಸ್ವಸ್ಥ

By

Published : Mar 13, 2022, 3:45 PM IST

Updated : Mar 13, 2022, 5:16 PM IST

ಮೊರನ್ (ಅಸ್ಸೋಂ): ಅಸ್ಸೋಂನ ದಿಬ್ರುಗಢ ಜಿಲ್ಲೆಯಲ್ಲಿ ಘೋರ ಘಟನೆಯೊಂದು ಬೆಳಕಿಗೆ ಬಂದಿದೆ. ಗ್ರಾಮಸ್ಥರು ವ್ಯಕ್ತಿಯೊಬ್ಬನನ್ನು ಹತ್ಯೆಗೈದು ಬಳಿಕ ಸುಟ್ಟು ಹಾಕಿದ್ದಾರೆ. ಜಿಲ್ಲೆಯ ರಹಮಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಧಲಜನ್ ಟೀ ಎಸ್ಟೇಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಗುವನ್ನು ಕೊಂದ ಮಾನಸಿಕ ಅಸ್ವಸ್ಥ: ರೊಚ್ಚಿಗೆದ್ದು ಆರೋಪಿಯನ್ನು ಸಾಯಿಸಿ ಬೆಂಕಿಹಚ್ಚಿದ್ರು ಜನ!

ಪ್ರಕರಣ ಹಿನ್ನೆಲೆ:

ಸ್ಥಳೀಯರ ಪ್ರಕಾರ ಸೋನಿತ್ ತಂತಿ ಎಂಬಾತ ನಾಲ್ಕು ವರ್ಷದ ಮಗು ಆಟವಾಡುತ್ತಿದ್ದಾಗ ಕೊಂದಿದ್ದಾನೆ. ಈ ಘಟನೆ ಬಗ್ಗೆ ಎಲ್ಲರಿಗೂ ತಿಳಿದು ಮಾನಸಿಕ ಅಸ್ವಸ್ಥನಾದ ಆತನನ್ನು ಹಿಡಿದು ಥಳಿಸಿದ್ದಾರೆ. ಇದಾದ ನಂತರ ಸಾವಿಗೀಡಾದ ಆತನನ್ನು ಆಕ್ರೋಶದಿಂದ ಸುಟ್ಟು ಹಾಕಿದ್ದಾರೆ.

ಇದನ್ನೂ ಓದಿ:ಎದೆ ಝಲ್​ ಎನ್ನಿಸುವ ದೃಶ್ಯ : ಚಲಿಸುತ್ತಿದ್ದ ರೈಲಿಗೆ ತಲೆಯೊಡ್ಡಿದ ಯುವಕ

ಮಗುವಿನ ಕುಟುಂಬದವರು ಸೋನಿತ್ ತಂತಿ ವಿರುದ್ಧ ದಿಬ್ರುಗಢ್ ಜಿಲ್ಲೆಯ ರಹ್ಮರಿಯಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

Last Updated : Mar 13, 2022, 5:16 PM IST

ABOUT THE AUTHOR

...view details