ಕರ್ನಾಟಕ

karnataka

ETV Bharat / bharat

Shocking: ಯುವತಿಯರ ಹಾಸ್ಟೆಲ್​ ಎದುರೇ ಬೈಕ್​ನಲ್ಲಿ ಕುಳಿತುಕೊಂಡು ಹಸ್ತಮೈಥುನ..! - ಕೇರಳದಲ್ಲಿ ಯುವತಿಯರ ಹಾಸ್ಟೆಲ್​ ಎದುರೇ ಬೈಕ್​ನಲ್ಲಿ ಕುಳಿತುಕೊಂಡು ಹಸ್ತಮೈಥುನ

ಯುವತಿಯರ ಹಾಸ್ಟೆಲ್​ ಎದುರು ಇಬ್ಬರು ವ್ಯಕ್ತಿಗಳು ಬೈಕ್​ನಲ್ಲಿ ಕುಳಿತುಕೊಂಡು ಹಸ್ತಮೈಥುನ ಮಾಡಿರುವ ಘಟನೆ ಕೇರಳದ ಪತ್ತನಂತಿಟ್ಟ ಪಟ್ಟಣದಲ್ಲಿ ನಡೆದಿದೆ.

Men flash at women hostel inmates, Men flash at women hostel inmates in Kerala, Kerala crime news, ಯುವತಿಯರ ಹಾಸ್ಟೆಲ್​ ಎದುರೇ ಬೈಕ್​ನಲ್ಲಿ ಕುಳಿತುಕೊಂಡು ಹಸ್ತಮೈಥುನ, ಕೇರಳದಲ್ಲಿ ಯುವತಿಯರ ಹಾಸ್ಟೆಲ್​ ಎದುರೇ ಬೈಕ್​ನಲ್ಲಿ ಕುಳಿತುಕೊಂಡು ಹಸ್ತಮೈಥುನ, ಕೇರಳ ಅಪರಾಧ ಸುದ್ದಿ,
ಯುವತಿಯರ ಹಾಸ್ಟೆಲ್​ ಎದುರೇ ಬೈಕ್​ನಲ್ಲಿ ಕುಳಿತುಕೊಂಡು ಹಸ್ತಮೈಥುನ

By

Published : Jan 22, 2022, 2:36 PM IST

ಪತ್ತನಂತಿಟ್ಟ(ಕೇರಳ):ಯುವತಿಯರ ಹಾಸ್ಟೆಲ್​ ಎದುರೇ ಇಬ್ಬರು ಕಾಮುಕರು ಅಸಭ್ಯವಾಗಿ ವರ್ತಿಸಿದ್ದಾರೆ. ಇವರಿಬ್ಬರ ಮಾನಗೇಡಿ ಕೃತ್ಯವನ್ನು ಹಾಸ್ಟೆಲ್​ನಲ್ಲಿ ಇರುವ ಯುವತಿಯರು ರೆಕಾರ್ಡ್​ ಮಾಡಿ ಪೊಲೀಸರಿಗೆ ದೂರು ನೀಡಿರುವ ಘಟನೆ ನಗರದಲ್ಲಿ ನಡೆದಿದೆ.

ಯುವತಿಯರ ಹಾಸ್ಟೆಲ್​ ಎದುರೇ ಬೈಕ್​ನಲ್ಲಿ ಕುಳಿತುಕೊಂಡು ಅಸಭ್ಯ ಕೃತ್ಯ

ಇಬ್ಬರು ಪುರುಷರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಕುಳಿತು ಹುಡುಗಿಯರಿಗೆ ಕಾಯುತ್ತಿರುವುದು ಕಂಡುಬಂದಿದೆ. ಇಬ್ಬರೂ ಹಾಸ್ಟೆಲ್ ಅನ್ನು ನೋಡುತ್ತಾ ಹಸ್ತಮೈಥುನ ಮಾಡಿಕೊಳ್ಳುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಓದಿ:ಬಲವಂತದ ಮತಾಂತರ ಯತ್ನ ಆರೋಪ.. ಮಾವನ ವಿರುದ್ಧವೇ ದೂರು ಕೊಟ್ಟ ಅಳಿಯ!

ಹಾಸ್ಟೆಲ್‌ಗೆ ಆರು ಅಡಿ ಎತ್ತರದ ಕಾಂಪೌಂಡ್ ಗೋಡೆಯಿದ್ದು, ಹಾಸ್ಟೆಲ್‌ನ ಮೇಲಿನ ಮಹಡಿಯಲ್ಲಿ ವಾಸಿಸುವ ಹುಡುಗಿಯರನ್ನು ಗುರಿಯಾಗಿಸಿಕೊಂಡು ಈ ರೀತಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರೂ ದುಷ್ಕರ್ಮಿಗಳು ಮಾಸ್ಕ್ ಮತ್ತು ಹೆಲ್ಮೆಟ್ ಧರಿಸಿದ್ದರಿಂದ ಮುಖ ಸ್ಪಷ್ಟವಾಗಿಲ್ಲ. ವಾಹನಗಳ ನಂಬರ್ ಪ್ಲೇಟ್ ಕೂಡ ವಿಡಿಯೋದಲ್ಲಿ ದಾಖಲಾಗಿಲ್ಲ. ಇಬ್ಬರೂ ಲುಂಗಿ ಮತ್ತು ಶರ್ಟ್ ಧರಿಸಿರುವುದು ದೃಶ್ಯದಲ್ಲಿ ಕಾಣುತ್ತಿದೆ.

ಹಾಸ್ಟೆಲ್‌ನ ಯುವತಿಯರು ಮೊದಲು ವಾರ್ಡನ್‌ಗೆ ಈ ವಿಡಿಯೋ ಕ್ಲಿಪ್‌ಗಳನ್ನು ತೋರಿಸಿದರು. ಅವರ ಅನುಮತಿಯೊಂದಿಗೆ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details