ಕರ್ನಾಟಕ

karnataka

ETV Bharat / bharat

ಮೇಕೆದಾಟು ವಿವಾದ: ಅರ್ಜಿ ವಿಚಾರಣೆಗೆ ತಾತ್ಕಾಲಿಕ ದಿನ ಪಟ್ಟಿ ಮಾಡಿದ ಸುಪ್ರೀಂ - ತಮಿಳುನಾಡು ಸರ್ಕಾರ

ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲು ಜುಲೈ 27 ರಂದು ಸುಪ್ರೀಂಕೋರ್ಟ್ ತಾತ್ಕಾಲಿಕವಾಗಿ ದಿನಪಟ್ಟಿ ಮಾಡಿದೆ.

Mekedatu dam
ಸುಪ್ರೀಂ ಕೋರ್ಟ್

By

Published : Jul 14, 2021, 12:17 PM IST

ಚೆನ್ನೈ: ಮೇಕೆದಾಟು ಅಣೆಕಟ್ಟು ಯೋಜನೆ ಸಂಬಂಧ ಕರ್ನಾಟಕ ಮತ್ತು ಕೇಂದ್ರ ಸರ್ಕಾರದ ನೀತಿ ವಿರುದ್ಧ ತಮಿಳುನಾಡು ಸರ್ಕಾರ ನೀಡಿರುವ ಅರ್ಜಿ ಆಲಿಸಲು ಜುಲೈ 27 ರಂದು ಸುಪ್ರೀಂಕೋರ್ಟ್ ತಾತ್ಕಾಲಿಕವಾಗಿ ದಿನಪಟ್ಟಿ ಮಾಡಿದೆ.

ಯೋಜನಾ ಮೌಲ್ಯಮಾಪನ ನಿರ್ದೇಶಕರು (ದಕ್ಷಿಣ), ಕೇಂದ್ರ ಜಲ ಆಯೋಗದ ಅಧ್ಯಕ್ಷರು, ಕೇಂದ್ರ ಜಲ ಆಯೋಗದ ನಿರ್ದೇಶನಾಲಯ, ಕಾವೇರಿ ನೀರಾವರಿ ನಿಗಮ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಸಚಿವರ ವಿರುದ್ಧ ತಮಿಳುನಾಡು ಸರ್ಕಾರ ತಿರಸ್ಕಾರ ಅರ್ಜಿ ಸಲ್ಲಿಸಿತ್ತು.

ನ್ಯಾಯಾಲಯದ ಆದೇಶವನ್ನು ಕೇಂದ್ರ ಜಲ ಆಯೋಗ ನಿರ್ಲಕ್ಷಿಸಿದೆ ಎಂದು ತಮಿಳುನಾಡು ವಾದಿಸಿದೆ. ಸೋಮವಾರ ನಡೆದ ಸರ್ವಪಕ್ಷ ಸಭೆಯಲ್ಲಿ, ನ್ಯಾಯಾಲಯದ ವಿಚಾರಣೆಯ ತಿರಸ್ಕಾರ ಸೇರಿದಂತೆ ಮೇಕೆದಾಟು ಅಣೆಕಟ್ಟುಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ರಾಜ್ಯ ಸರ್ಕಾರ ತೆರವುಗೊಳಿಸಬೇಕೆಂದು ಪ್ರತಿಪಕ್ಷ ಎಐಎಡಿಎಂಕೆ ಒತ್ತಾಯಿಸಿದೆ.

ಸೋಮವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಡಿಎಂಕೆ ಹಿರಿಯ ಮುಖಂಡ ಮತ್ತು ರಾಜ್ಯ ಜಲಸಂಪನ್ಮೂಲ ಸಚಿವ ಎಸ್.ದುರೈಮುರುಗನ್, ಕರ್ನಾಟಕ ಸರ್ಕಾರವು ಪರಿಸರ ಸೇರಿದಂತೆ ಹಲವಾರು ಅನುಮತಿಗಳನ್ನು ಪಡೆಯಬೇಕಾಗಿರುವುದರಿಂದ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ತಮಿಳುನಾಡು ರಾಜ್ಯ ಸರ್ಕಾರ ನಿರಂತರವಾಗಿ ವಿರೋಧಿಸುತ್ತದೆ. ಕಾಡುಗಳು, ವನ್ಯಜೀವಿಗಳು, ಇಂಧನ, ತಾಂತ್ರಿಕ-ಆರ್ಥಿಕ ತೆರವು, ಪುನರ್ವಸತಿಯನ್ನು ಗಮನದಲ್ಲಿಟ್ಟುಕೊಂಡ ಬಳಿಕ ಎಲ್ಲ ಹಂತಗಳಲ್ಲಿ ತಮಿಳುನಾಡು ಸರ್ಕಾರ ಈ ಪ್ರಸ್ತಾಪವನ್ನು ವಿರೋಧಿಸುತ್ತದೆ ಎಂದು ಹೇಳಿದರು.

ಸದ್ಯ ಜುಲೈ 27 ರಂದು ವಿಚಾರಣೆಗೆ ಸುಪ್ರೀಂಕೋರ್ಟ್ ತಾತ್ಕಾಲಿಕವಾಗಿ ಪಟ್ಟಿ ಮಾಡಿದೆ. ಆದರೆ ಅಧಿಕೃತ ದಿನಾಂಕ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ.

ABOUT THE AUTHOR

...view details