ಕರ್ನಾಟಕ

karnataka

ETV Bharat / bharat

ಕಾಶ್ಮೀರಿ ಪಂಡಿತ ಕುಟುಂಬದ ಭೇಟಿಗೆ ಮುಂದಾಗಿದ್ದ ಮುಫ್ತಿಗೆ ಗೃಹ ಬಂಧನ - ಉಗ್ರರ ದಾಳಿಗೆ ಕಾಶ್ಮೀರ ಪಂಡಿತ್​ ಗುರಿ

ಕಾಶ್ಮೀರಿ ಪಂಡಿತರ ವಲಸೆಗೆ ಮುಸ್ಲಿಮರು ಕಾರಣವೆಂದು ಭಾರತ ಸರ್ಕಾರ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದೆ ಎಂದು ಮೆಹಬೂಬ ಮುಫ್ತಿ ಟ್ವೀಟ್​ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಮೊಹಬೂಬಾ ಮುಫ್ತಿಗೆ ಗೃಹ ಬಂಧನ
ಮಾಜಿ ಮುಖ್ಯಮಂತ್ರಿ ಮೊಹಬೂಬಾ ಮುಫ್ತಿಗೆ ಗೃಹ ಬಂಧನ

By

Published : Apr 12, 2022, 4:49 PM IST

ಶ್ರೀನಗರ (ಜಮ್ಮು-ಕಾಶ್ಮೀರ): ಇತ್ತೀಚೆಗೆ ಉಗ್ರರ ದಾಳಿಗೆ ಗುರಿಯಾದ ಕಾಶ್ಮೀರ ಪಂಡಿತ ಕುಟುಂಬದ​ ನಿವಾಸಕ್ಕೆ ತೆರಳಲು ಮುಂದಾಗಿದ್ದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರಿಗೆ ಶ್ರೀನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಗೃಹ ಬಂಧನ ವಿಧಿಸಲಾಗಿದೆ. ಭದ್ರತಾ ಕಾರಣದಿಂದ ಮುಫ್ತಿ ಪ್ರವಾಸಕ್ಕೆ ತಡೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಮುಫ್ತಿ, 'ಸೋಫಿಯಾನ್​ನಲ್ಲಿ ದಾಳಿಗೊಳಗಾದ ಕಾಶ್ಮೀರಿ ಪಂಡಿತ​ ಕುಟುಂಬವನ್ನು ಭೇಟಿ ಮಾಡಲು ನಾನು ಬಯಸಿದ್ದೆ. ಈ ಕಾರಣಕ್ಕೆ ನನಗೆ ಗೃಹ ಬಂಧನ ವಿಧಿಸಲಾಗಿದೆ. ಕಾಶ್ಮೀರಿ ಪಂಡಿತರ ವಲಸೆಗೆ ಮುಸ್ಲಿಮರು ಕಾರಣವೆಂದು ಭಾರತ ಸರ್ಕಾರ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದೆ. ಇಂತಹ ಒಡೆದು ಆಳುವ ನೀತಿಯನ್ನು ಬಹಿರಂಗಪಡಿಸಲು ಸರ್ಕಾರ ಅವಕಾಶ ನೀಡುತ್ತಿಲ್ಲ' ಎಂದು ಆರೋಪಿಸಿದ್ದಾರೆ.

ಇದೇ ತಿಂಗಳು ಸೋಪಿಯಾನ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ ಕುಟುಂಬದ​ ಮೇಲೆ ಉಗ್ರರು ದಾಳಿ ಮಾಡಿದ್ದರು. ಇವರ ಕುಟುಂಬವನ್ನು ಭೇಟಿ ಮಾಡಲು ಶ್ರೀನಗರದಿಂದ ಅನಂತ್​ನಾಗ್​ ಜಿಲ್ಲೆಗೆ ತೆರಳಲು ಮುಫ್ತಿ ಮುಂದಾಗಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ:ಉಗ್ರರ ಗುಂಡಿನ ದಾಳಿ: ಓರ್ವ ಕಾಶ್ಮೀರಿ ಪಂಡಿತನ ಸ್ಥಿತಿ ಗಂಭೀರ

ABOUT THE AUTHOR

...view details