ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):2020ರಲ್ಲಿ ದಕ್ಷಿಣ ಕಾಶ್ಮೀರದ ಶೋಪಿಯಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರಾಜೌರಿಯ ಪಟ್ಟಣದ ಮೂವರು ಯುವಕರನ್ನು ಕೊಂದ ಪ್ರಕರಣದಲ್ಲಿ ಭಾಗಿಯಾಗಿರುವ ಸೇನಾ ಕ್ಯಾಪ್ಟನ್ಗೆ ಜೀವಾವಧಿ ಶಿಕ್ಷೆ ವಿಧಿಸಲು ಸೇನಾ ನ್ಯಾಯಲಯ ಶಿಫಾರಸು ಮಾಡಿರುವುದನ್ನು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಪ್ತಿ ಸ್ವಾಗತಿಸಿದ್ದಾರೆ.
‘‘ಅಂಶಿಪೋರಾ ನಕಲಿ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿರುವ ಕ್ಯಾಪ್ಟನ್ಗೆ ಜೀವಾವಧಿ ಶಿಕ್ಷೆಯನ್ನು ಶಿಫಾರಸು ಮಾಡುವುದು ಅಂತಹ ಪ್ರಕರಣದಲ್ಲಿ ಹೊಣೆಗಾರಿಕೆ ಸೃಷ್ಟಿಸಿರುವುದು ಸ್ವಾಗತರ್ಹ ಹೆಜ್ಜೆಯಾಗಿದೆ ಮತ್ತು ಇಂತಹ ಘೋರ ಘಟನೆಗಳು ಪುನಾರಾವರ್ತನೆಯಾಗದಂತೆ ತಡೆಯಲು ಲಾವಪೋರಾ ಮತ್ತು ಹೈದರ್ಪೋರಾ ಎನ್ಕೌಂಟರ್ಗಳಲ್ಲಿ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಲಾಗುವುದು ಎಂದು ಭಾವಿಸುತ್ತೇನೆ’’ ಮೆಹಬೂಬಾ ಮುಪ್ತಿ ಅವರು ಸೋಮವಾರ ಟ್ವೀಟ್ ಮಾಡಿದ್ದರು.
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅಂಶಿಪುರ ಎಂಬ ಪ್ರದೇಶದಲ್ಲಿ 2020 ಜುಲೈ 18ರಂದು ನಕಲಿ ಎನ್ಕೌಂಟರ್ನ ನೇತೃತ್ವ ವಹಿಸಿದ್ದ ಕ್ಯಾಪ್ಟನ್ ಭೂಪೇಂದ್ರ ಸಿಂಗ್ಗೆ ಇತ್ತೀಚಿಗೆ ಸೇನಾ ನ್ಯಾಯಲಯ ಶಿಕ್ಷೆಯನ್ನು ವಿಧಿಸಿತು. ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಮೂವರು ಯುವಕರನ್ನು ಸೇನೆಯು ‘‘ಹಾರ್ಡ್ಕೋರ್’’ ಭಯೋತ್ಪಾದಕರು ಎಂದು ಹೆಸರಿಸಿತ್ತು. ಕೊಲೆಯಾದ ನಂತರ ಆ ಮೂವರು ಯುವಕರನ್ನು ರಾಜೌರಿಯ ನಿವಾಸಿಗಳಾದ ಇಮ್ತಿಯಾಜ್ ಅಹ್ಮದ್, ಆಬ್ರಾರ್ ಅಹ್ಮದ್ ಮತ್ತು ಮೊಹಮ್ಮದ್ ಇಬ್ರಾರ್ ಎಂದು ಗುರುತಿಸಲಾಯಿತು.
ನಂತರ ಎನ್ಕೌಂಟರ್ನ ಸತ್ಯಾಸತ್ಯತೆ ತಿಳಿಯಲು ರಾಜಕೀಯ ಮುಖಂಡರು ಮತ್ತು ನೆಟಿಜೆನ್ಸ್ಗಳು ಪ್ರಶ್ನಿಸಿದ್ದರು. ನಂತರ ಅಧಿಕಾರಿಗಳು ಹತ್ಯೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಿದರು. ಎನ್‌ಕೌಂಟರ್ ಬಗ್ಗೆ ತನಿಖೆ ಮಾಡಲು ಸೇನಾ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭಿಸಿತು, ಎಎಫ್ಎಸ್ಪಿಎ ಅಡಿಯಲ್ಲಿ ಸೇನಾ ಪಡೆ ತಮ್ಮ ಅಧಿಕಾರವನ್ನು ‘‘ಮೀರಿದವು’’ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು.
2020ರ ಡಿಸೆಂಬರ್ನ ಕೊನೆಯ ವಾರದಲ್ಲಿ ಸಾಕ್ಷ್ಯಾಧಾರಗಳ ಸಾರಾಂಶವನ್ನು ಪೂರ್ಣಗೊಳಿಸಲಾಗಿತ್ತು. ಇದಕ್ಕೆ ಎನ್ಕೌಂಟರ್ಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಕ್ಯಾಪ್ಟನ್ ಭೂಪೇಂದ್ರ ಸಿಂಗ್ ಸೇರಿದಂತೆ ಮೂವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಉಮೇಶ್ ಪಾಲ್ ಹತ್ಯೆ ಪ್ರಕರಣ ಶೂಟರ್ ವಿಜಯ್ ಚೌಧರಿ ಎನ್‌ಕೌಂಟರ್: ಫೆಬ್ರವರಿ 24 ರಂದು ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಸೋಮವಾರ ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದ್ದಾರೆ. ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತರಾದ ಶೂಟರ್‌ನ ಹೆಸರು ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್. ಘಟನೆಯಲ್ಲಿ ಸ್ಥಳಕ್ಕಾಗಮಿಸಿದ ಉಮೇಶ್ ಪಾಲ್ ಮೇಲೆ ಮೊದಲು ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಅಷ್ಟೇ ಅಲ್ಲ, ಉಮೇಶ್ ಪಾಲ್ ಜೊತೆಗೆ ಉಸ್ಮಾನ್ ಕೂಡ ಸಂದೀಪ್ ನಿಶಾದ್ ಎಂಬ ಕಾನ್ಸ್ಟೇಬಲ್ ಮೇಲೆಯೂ ಗುಂಡು ಹಾರಿಸಿದ್ದನು. ಘಟನೆಯಲ್ಲಿ ಭಾಗಿಯಾಗಿರುವ ಉಸ್ಮಾನ್‌ಗೆ ಪತ್ತೆಗಾಗಿ 50,000 ರೂಪಾಯಿ ಬಹುಮಾನವನ್ನೂ ಪೊಲೀಸರು ಘೋಷಿಸಿದ್ದರು.
ಇದನ್ನೂ ಓದಿ:ಚೀನಾದ ಬೆದರಿಕೆಯ ಬಗ್ಗೆ ಎಚ್ಚರಿಕೆ ನೀಡಿದ ರಕ್ಷಣಾ ಗುಪ್ತಚರ ಸಂಸ್ಥೆಗಳು..!