ಶ್ರೀನಗರ: ನನ್ನನ್ನು ಮತ್ತು ನನ್ನ ಮಗಳು ಇಲ್ತಿಜಾ ಮುಫ್ತಿ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ. ಪಕ್ಷದ ಮುಖಂಡ ವಾಹಿದ್ ಅವರ ಪುಲ್ವಾಮಾ ನಿವಾಸಕ್ಕೆ ಭೇಟಿ ನೀಡಲು ಅನುಮತಿ ನೀಡುತ್ತಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಮೆಹಬೂಬಾ ಮುಫ್ತಿ, ಪುತ್ರಿ ಇಲ್ತಿಜಾ ಮುಫ್ತಿಗೆ ಮತ್ತೆ 'ಗೃಹ ಬಂಧನ' - ಮೆಹಬೂಬಾ ಮುಫ್ತಿ ಲೇಟೆಸ್ಟ್ ನ್ಯೂಸ್
ನನ್ನನ್ನು ಮತ್ತೆ "ಕಾನೂನುಬಾಹಿರವಾಗಿ" ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೆಹಬೂಬಾ, ನನ್ನನ್ನು ಮತ್ತೆ "ಕಾನೂನು ಬಾಹಿರವಾಗಿ" ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಎರಡು ದಿನಗಳಿಂದ, ಪುಲ್ವಾಮಾದಲ್ಲಿರುವ ವಾಹಿದ್ ಅವರ ಕುಟುಂಬವನ್ನು ಭೇಟಿ ಮಾಡಲು ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ನಿರಾಕರಿಸಿದ್ದಾರೆ. ಬಿಜೆಪಿ ಮಂತ್ರಿಗಳು ಮತ್ತು ಅವರ ಕೈಗೊಂಬೆಯಾಗಿರುವವರು ಕಾಶ್ಮೀರದ ಪ್ರತಿಯೊಂದು ಮೂಲೆಯಲ್ಲೂ ತಿರುಗಾಡಲು ಅವಕಾಶವಿದೆ. ಆದರೆ, ನನ್ನ ವಿಷಯದಲ್ಲಿ ಮಾತ್ರ ಭದ್ರತೆಯ ಸಮಸ್ಯೆ ಇದೆ ಎಂದು ಹೇಳಿದ್ದಾರೆ.
ಆಧಾರ ರಹಿತ ಆರೋಪದ ಮೇಲೆ ವಾಹಿದ್ನನ್ನು ಬಂಧಿಸಲಾಯಿತು. ಅವರ ಕುಟುಂಬವನ್ನು ಸಮಾಧಾನಪಡಿಸಲು ಸಹ ನನಗೆ ಅನುಮತಿ ನಿಡಲಿಲ್ಲ. ನನ್ನ ಮಗಳು ಇಲ್ತಿಜಾಳನ್ನು ಸಹ ಗೃಹಬಂಧನದಲ್ಲಿರಿಸಲಾಗಿದೆ ಏಕೆಂದರೆ ಅವಳು ವಾಹಿದ್ ಅವರ ಕುಟುಂಬವನ್ನು ಭೇಟಿ ಮಾಡಲು ಬಯಸಿದ್ದಳು ಎಂದಿದ್ದಾರೆ.