ಭೋಪಾಲ್ (ಮಧ್ಯಪ್ರದೇಶ):ಭೋಪಾಲ್‌ನಲ್ಲಿ ರೈಲ್ವೆ ಹಳಿಗಳ ನಡುವೆ ಸಿಲುಕಿದ್ದ ಮುಸ್ಲಿಮೇತರ ಬಾಲಕಿಯ ಜೀವವನ್ನು ಉಳಿಸಲು, ಮೆಹಬೂಬ್ ಖಾನ್ ಎಂಬ ವ್ಯಕ್ತಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಮುಂದಾಗಿದ್ದಾರೆ. ಇದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ನಾನು ಯಾವ ಧರ್ಮ ಎಂಬುದನ್ನು ನೋಡಿ ಸಹಾಯ ಮಾಡಲಿಲ್ಲ. ಯಾರೋ ತೊಂದರೆಯಲ್ಲಿದ್ದಾರೆ ಮತ್ತು ಆ ಹೆಣ್ಣು ಮಗಳಿಗೆ ನನ್ನ ಸಹಾಯ ಬೇಕಿದೆಂದು ಭಾವಿಸಿ ಸಹಾಯ ಮಾಡಿದ್ದೇನೆ. ಅವಕಾಶವಿದ್ದರೆ ಮತ್ತು ಯಾರಿಗಾದರೂ ಸೇವೆ ಸಲ್ಲಿಸಲು ಸಾಧ್ಯವಾದರೆ, ಪ್ರತಿಯೊಬ್ಬರೂ ಮುಂದೆ ಹೋಗಬೇಕು ಹಾಗೂ ಅದನ್ನು ಮಾಡಬೇಕು ಎಂದು ಮೆಹಬೂಬ್ ಖಾನ್ ಹೇಳುತ್ತಾರೆ.
ಮುಸ್ಲಿಮೇತರ ಬಾಲಕಿಯ ಜೀವವನ್ನು ಉಳಿಸಿದ ಮೆಹಬೂಬ್ ಖಾನ್ ಮೆಹಬೂಬ್ ಖಾನ್ ಅವರ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅವರ ಈ ಕಾರ್ಯಕ್ಕೆ ಸಾಮಾಜಿಕ ಸಂಘಟನೆಗಳು ಸೇರಿದಂತೆ ಪೊಲೀಸ್ ಇಲಾಖೆಯು ಪ್ರಶಂಸಿದೆ.
ಇದನ್ನೂ ಓದಿ:ಲಖೀಂಪುರ ಖೇರಿ ಹಿಂಸಾಚಾರದಲ್ಲಿ ಬಂಧಿತನಾಗಿದ್ದ ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾಗೆ ಜಾಮೀನು, ಬಿಡುಗಡೆ
ಫೆಬ್ರವರಿ 5 ರಂದು ಭೋಪಾಲ್‌ನ ಬರ್ಖೇರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಾಲಕಿಯೊಬ್ಬಳು ರೈಲ್ವೆ ಹಳಿ ದಾಟುವಾಗ ಸರಕು ರೈಲಿನಡಿಗೆ ಬಿದ್ದಿದ್ದಾಳೆ. ಈ ಅಪಘಾತ ಸಂಭವಿಸುವ ಕೆಲವು ನಿಮಿಷಗಳ ಮೊದಲು ವೃತ್ತಿಯಲ್ಲಿ ಬಡಗಿಯಾಗಿರುವ ಮೆಹಬೂಬ್ ಪ್ರಾರ್ಥನೆ ಮುಗಿಸಿ ಬರುತ್ತಿದ್ದರು.
ಇದೇ ವೇಳೆ ಸರಕು ಸಾಗಣೆ ರೈಲು ಬರುತ್ತಿದ್ದ ವೇಳೆ ರೈಲ್ವೆ ಹಳಿ ದಾಟುತ್ತಿದ್ದಾಗ ಬಾಲಕಿಯೊಬ್ಬಳು ಕೂಗುತ್ತಿದ್ದನ್ನು ನೋಡಿದ್ದಾರೆ. ಬಳಿಕ ಮೆಹಬೂಬ್ ಖಾನ್ ಬಾಲಕಿಯನ್ನು ಹಿಡಿದುಕೊಂಡು ರೈಲಿನಡಿಗೆ ಮಲಗಿದ್ದಾರೆ. ಸರಕು ರೈಲಿನ ಸುಮಾರು 24 ಬಾಕ್ಸ್‌ಗಳು ಅವರಿಬ್ಬರ ಮೇಲೆ ಹಾದು ಹೋಗುವವರೆಗೂ ಮಲಗಿದ್ದರು. ಮೆಹಬೂಬ್ ಖಾನ್ ಅವರ ಈ ತಿಳಿವಳಿಕೆ ಮತ್ತು ತ್ವರಿತ ನಿರ್ಧಾರದ ಪರಿಣಾಮ ಬಾಲಕಿ ಬದುಕಿ ಬಂದಿದ್ದಾಳೆ.