ನವದೆಹಲಿ: ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿದಂತೆ ರಾಜ್ಯದ 17 ಕಾಂಗ್ರೆಸ್ ಶಾಸಕರ ಪೈಕಿ 12 ಶಾಸಕರು ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದು, ಈಶಾನ್ಯದಲ್ಲಿ ಬಂಗಾಳದ ಆಡಳಿತ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಜೊತೆಗೆ ಮಮತಾ ಪಕ್ಷ ವಿರೋಧ ಪಕ್ಷವಾಗಿ ದಿಢೀರನೇ ಹೊರ ಹೊಮ್ಮಿದೆ.
ಮೇಘಾಲಯ: ಮಾಜಿ ಸಿಎಂ ಸೇರಿದಂತೆ ರಾತ್ರೋರಾತ್ರಿ ತೃಣಮೂಲ ಪಕ್ಷಕ್ಕೆ ಸೇರಿದ 12 ಕಾಂಗ್ರೆಸ್ ಶಾಸಕರು - ಮಮತಾ ಬ್ಯಾನರ್ಜಿ
ಮುಕುಲ್ ಸಂಗ್ಮಾ ಸೇರಿದಂತೆ ರಾಜ್ಯದ 17 ಕಾಂಗ್ರೆಸ್ ಶಾಸಕರ ಪೈಕಿ 12 ಶಾಸಕರು ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇದು ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಪೆಟ್ಟುಕೊಟ್ಟಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ಬಗ್ಗೆಯೂ ಮಮತಾ ಅವರು ಬೇಸರದ ಮಾತುಗಳನ್ನಾಡಿದ್ದಾರೆ.
ಈ ಕುರಿತು ಮೇಘಾಲಯ ಶಾಸಕರು ಈಗಾಗಲೇ ವಿಧಾನಸಭಾ ಸ್ಪೀಕರ್ ಮೆತ್ಬಾ ಲಿಂಗ್ಡೋ ಅವರಿಗೆ ಪತ್ರ ಬರೆದಿದ್ದಾರೆ. ಇಲ್ಲಿನ ವಿಧಾನಸಭೆಯು 60 ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರೊಂದಿಗೆ ಸೌಹಾರ್ದ ಸಂಬಂಧವನ್ನು ಇಟ್ಟುಕೊಂಡಿರುವ ಬ್ಯಾನರ್ಜಿ ಅವರು ಈ ಬಾರಿ ಅವರನ್ನು ಭೇಟಿ ಮಾಡಿಲ್ಲ. ಆದರೂ ಭೇಟಿ ಮಾಡಲಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ.
ಈ ವಿಷಯ ಬ್ಯಾನರ್ಜಿ ಬಳಿ ಕೇಳಿದಾಗ ಬೇಸರ ಹೊರಹಾಕಿದ್ದಾರೆ. ಸೋನಿಯಾ ಗಾಂಧಿಯವರೊಂದಿಗೆ ಯಾವುದೇ ಅಪಾಯಿಂಟ್‌ಮೆಂಟ್ ಕೇಳಿರಲಿಲ್ಲ, ಅವರು ಪಂಜಾಬ್ ಚುನಾವಣೆಯಲ್ಲಿ ನಿರತರಾಗಿದ್ದಾರೆ. ನಾವು ಪ್ರತಿ ಬಾರಿ ಸೋನಿಯಾರನ್ನು ಏಕೆ ಭೇಟಿಯಾಗಬೇಕು? ಇದು ಸಾಂವಿಧಾನಿಕವಾಗಿ ಕಡ್ಡಾಯವಾಗಿಲ್ಲ ಎಂದಿದ್ದಾರೆ.