ಕರ್ನಾಟಕ

karnataka

ETV Bharat / bharat

ಮೆಗಾಸ್ಟಾರ್​ ಜಿರಂಜೀವಿಗೆ ಶಸ್ತ್ರಚಿಕಿತ್ಸೆ.. ಯಾವುದೇ ಸಮಸ್ಯೆ ಇಲ್ಲ ಅಂದ 'ಆಚಾರ್ಯ'.. - ಮೆಗಾಸ್ಟಾರ್​ ಜಿರಂಜೀವಿ

ಸದ್ಯ ಚಿರಂಜೀವಿ ಅವರು ಕೊರಟಾಲ ಶಿವ ನಿರ್ದೇಶನದ ಬಹುನಿರೀಕ್ಷಿತ 'ಆಚಾರ್ಯ' ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ..

megastar-chiranjeevi-undergone-for-his-right-hand-surgey
ಮೆಗಾಸ್ಟಾರ್​ ಜಿರಂಜೀವಿ

By

Published : Oct 17, 2021, 9:19 PM IST

ಹೈದರಾಬಾದ್ ​:ಮೆಗಾಸ್ಟಾರ್ ಚಿರಂಜೀವಿ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅಪೋಲೋ ಆಸ್ಪತ್ರೆಯಲ್ಲಿ ಅವರ ಬಲಗೈ ಮಣಿಕಟ್ಟಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಕುರಿತು ಅಭಿಮಾನಿಗಳಿಗೆ ಮಾಹಿತಿ ನೀಡಿರುವ ಮೆಗಾಸ್ಟಾರ್​​​ 'ಬಲಗೈ ನೋವಾಗಿದ್ದಕ್ಕೆ ವೈದ್ಯರನ್ನು ಸಂಪರ್ಕಿಸಿದೆ.

ಮಣಿಕಟ್ಟಿನ ಬಳಿಯ ನರ ಸಮಸ್ಯೆ ಇದೆ ಅಂತೆ. ಅಪೋಲೋ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಮಧ್ಯದ ನರವನ್ನು ಶಸ್ತ್ರ ಚಿಕಿತ್ಸೆಯಿಂದ ಸರಿಪಡಿಸಲಾಗಿದೆ. ಶಸ್ತ್ರ ಚಿಕಿತ್ಸೆಯ ನಂತರ 15 ದಿನಗಳವರೆಗೆ ಬಲಗೈ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತದೆ' ಎಂದು ಹೇಳಿಕೊಂಡಿದ್ದಾರೆ.

ಸದ್ಯ ಚಿರಂಜೀವಿ ಅವರು ಕೊರಟಾಲ ಶಿವ ನಿರ್ದೇಶನದ ಬಹುನಿರೀಕ್ಷಿತ 'ಆಚಾರ್ಯ' ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details