ಜಾರ್ಖಂಡ್:ಪುರಾತತ್ವತಜ್ಞರ ತಂಡ ಹಜಾರಿಬಾಗ್ನ ಮೆಗಾಲಿಥ್ (ಬೃಹತ್ ಬಂಡೆ) ಪ್ರದೇಶದಲ್ಲಿ ಕೊಳಲನ್ನು ಹೋಲುವ ಉಪಕರಣವೊಂದನ್ನು ಪತ್ತೆ ಹಚ್ಚಿದ್ದಾರೆ. ಇದನ್ನು ಗಮನಿಸಿದರೆ, ಇತಿಹಾಸ ಪೂರ್ವ ಕಾಲದಲ್ಲಿ ಇದೇ ಮಾದರಿಯ ಹಲವು ಉಪಕರಣಗಳು ಇದ್ದಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಸಂಶೋಧಕರು, ಹಜಾರಿಬಾಗ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಐದು ಮೆಗಾಲಿಥ್ ಸ್ಥಳಗಳನ್ನು ಗುರುತಿಸಿದ್ದಾರೆ. ಹೀಗೆ ಗುರುತಿಸಲಾದ ಪ್ರದೇಶಗಳಲ್ಲಿ ಪ್ರಾಚೀನ ನಾಗರೀಕತೆಗೆ ಸಂಬಂಧಿಸಿದ ಅನೇಕ ಕುರುಹುಗಳು ದೊರೆತಿದೆ. ಪುರಾತತ್ವಶಾಸ್ತ್ರದ ಸಂಶೋಧಕ ಸುಭಾಶಿಶ್ ದಾಸ್, ಸಂಶೋಧನೆಯ ಆಧಾರದ ಮೇಲೆ ‘ಜಾರ್ಖಂಡ್‌ನ ಕೆಲವು ಮೆಗಾಲಿಥ್ ಸೈಟ್‌ಗಳ ಆರ್ಕಿಯೋಆಸ್ಟ್ರೊನಮಿ’ (The Archaeoastronomy of few megalithic sites of Jharkhand) ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಅವರು ಪುರಾತನ ವಸ್ತುಗಳು, ಪುರಾವೆಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ಹಜಾರಿಬಾಗ್ನ ಚಾನೊ ಗ್ರಾಮದಲ್ಲಿ ಮನುಷ್ಯ ಅಥವಾ ಇತರೆ ಪ್ರಾಣಿಗಳ ಮೂಳೆಗಳಿಂದ ತಯಾರಿಸಿದ ಕೊಳಲಿನಂತರ ಉಪಕರಣ ಪತ್ತೆಯಾಗಿದೆ. ಆ ಕಾಲದಲ್ಲಿ ಸಂಗೀತ ಉಪಕರಣಗಳನ್ನು ಬಳಸಲು ಮೂಳೆಗಳನ್ನು ಬಳಸಲಾಗುತ್ತಿತ್ತು. ಇದನ್ನು ಖಚಿತಪಡಿಸಲು ಸಂಶೋಧನೆಯ ಅಗತ್ಯವಿದೆ ಎಂದು ದಾಸ್ ಹೇಳಿದ್ದಾರೆ.