ಕರ್ನಾಟಕ

karnataka

ETV Bharat / bharat

ವಯಸ್ಸು 90 ದಾಟಿದ್ರೂ ಕೊರೊನಾ ಜೊತೆ ಸೆಣಸಾಡಿ ಗೆದ್ದ ಹಿರಿಜೀವಗಳಿವು! - ಕೊರೊನಾ ಗೆದ್ದ 90 ರ ಅಜ್ಜಿ

ಕೊರೊನಾ ಸೋಂಕಿಗೆ ಒಳಗಾಗಿ ಯುವಜನತೆಯೇ ಕಂಗಾಲಾಗಿರುವಾಗ ವಯಸ್ಸು 90 ದಾಟಿದ ಅದೆಷ್ಟೋ ಹಿರಿಜೀವಗಳು ಮಹಾಮಾರಿ ವೈರಸ್​ ವಿರುದ್ಧ ಹೋರಾಟ ಮಾಡಿ ಮರುಜೀವ ಪಡೆದಿದ್ದಾರೆ.

old people
old people

By

Published : Apr 24, 2021, 5:37 PM IST

ಹೈದರಾಬಾದ್​​: ಕೊರೊನಾ ವೈರಸ್​ ಯುವಕರು, ವೃದ್ಧರು ಎಂದು ನೋಡದೇ ಎಲ್ಲರನ್ನೂ ಬಿಡದೇ ಕಾಡುತ್ತಿದೆ. ಕೊರೊನಾ ಮೊದಲ ಅಲೆ ವಯಸ್ಸಾದವರನ್ನೇ ಹೆಚ್ಚು ಬಾಧಿಸಿತ್ತು ಆದರೆ, 2ನೇ ಅಲೆ ಎಲ್ಲ ವಯೋಮಾನದವರನ್ನು ಸಂಕಷ್ಟಕ್ಕೆ ದೂಡಿದೆ.

ಕೊರೊನಾ ಸೋಂಕು ತಗುಲಿದ ನಂತರ ಕೆಲವು ಯುವಕರು ಬದುಕಿನ ಬಗೆಗೆನ ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಆದರೆ, ಈ ಮಧ್ಯೆ ಅದೆಷ್ಟೋ ಹಿರಿಜೀವಗಳು ಕೊರೊನಾದೊಂದಿಗೆ ಸೆಣಸಾಟ ಮುಂದುವರಿಸಿವೆ. ಕೋವಿಡ್ -19 ಅನ್ನು ಸೋಲಿಸಿ ಜೀವನದ ಹೊಸ ಇನ್ನಿಂಗ್ಸ್ ಪ್ರಾರಂಭಿಸಿದ ಛತ್ತೀಸ್​ಗಢ ಮತ್ತು ಮಧ್ಯಪ್ರದೇಶದ ಅಜ್ಜ - ಅಜ್ಜಿಯಂತೆಯೇ, ಮಹಾರಾಷ್ಟ್ರದ 60 ವರ್ಷದ ವೃದ್ಧರೊಬ್ಬರು ಸಹ ಆರು ತಿಂಗಳಲ್ಲಿ ಎರಡು ಬಾರಿ ಕೋವಿಡ್ -19 ಸೋಂಕಿಗೆ ಒಳಗಾದರೂ ವೈರಸ್​ನಿಂದ ಗೆದ್ದು ಜೀವನದ ಮತ್ತೊಂದು ಅಧ್ಯಯನ ಆರಂಭಿಸಿದ್ದಾರೆ.

ಕೊರೊನಾ ಗೆದ್ದ 96 ವರ್ಷದ ಉಜ್ಜಯಿನಿಯ ಶಾಂತಿಬಾಯಿ:

ಮಧ್ಯಪ್ರದೇಶದ ಉಜ್ಜಯಿನಿಯ 96 ವರ್ಷದ ಶಾಂತಿಬಾಯಿ ದುಬೆ ಇಂದೋರ್​ನ ಆಸ್ಪತ್ರೆಗೆ ಏ. 8ರಂದು ದಾಖಲಾದಾಗ ಅವರಿಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಅವರ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಆದರೂ ಶಾಂತಿಬಾಯಿ ಎದೆಗುಂದಲಿಲ್ಲ, ವೈರಸ್​ನೊಂದಿಗೆ ಸೆಣಸಾಡಿ ಗೆದ್ದು, ಇದೀಗ ತಮ್ಮ ಜನ್ಮದಿನದಂದೇ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್​ ಆಗಿ ಮನೆಗೆ ತೆರಳಿದ್ದು, ಹುಟ್ಟಿದ ದಿನವೇ ಅವರಿಗೆ ಮರುಹುಟ್ಟು ಸಿಕ್ಕಂತಾಗಿದೆ.

6 ತಿಂಗಳಲ್ಲಿ ಎರಡು ಬಾರಿ ಕೊರೊನಾ ಗೆದ್ದ 90 ರ ಅಜ್ಜ:

ಪಾಂಡುರಂಗ ಆತ್ಮರಾಮ್​ ಮಹಾರಾಷ್ಟ್ರದ ಬೀಡ್​ ಜಿಲ್ಲೆಯವರಾಗಿದ್ದು, ಕೊರೊನಾ ವಿರುದ್ಧ 2 ಬಾರಿ ಯುದ್ಧ ಮಾಡಿ ಗೆದ್ದಿದ್ದಾರೆ. ಅವರಿಗೆ 2020ರ ನವೆಂಬರ್​ 1 ರಂದು ಕೊರೊನಾ ಸೋಂಕು ತಗುಲಿದ್ದು ಪತ್ತೆಯಾಗಿದ್ದು, ನಂತರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ರು. ಆದರೆ, ಪುನಃ ಇದೇ ಏಪ್ರಿಲ್​ 3 ರಂದು ಮತ್ತೆ ಕೊರೊನಾ ಸೋಂಕು ತಗುಲಿದ್ದು, ಇದೀಗ ಚಿಕಿತ್ಸೆ ಪಡೆದು ಈ ಬಾರಿಯೂ ಕೊರೊನಾ ಸೋಲಿಸಿ ತಾವೇ ಗೆದ್ದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು , ನಾವು ಭರವಸೆ ಕಳೆದುಕೊಳ್ಳದಿದ್ದರೆ ಮಾತ್ರ ಕೊರೊನಾ ವಿರುದ್ಧ ಗೆಲುವು ಸಾಧಿಸಬಹುದು ಅಂತಾರೆ.

ಕೊರೊನಾ ಸೋಲಿಸಿದ 76 ವರ್ಷದ ಯಾಸ್ಮಿನ್​:

76 ವರ್ಷ ವಯಸ್ಸಿನ ಯಾಸ್ಮಿನ್​ ರೆಹಮಾನ್​ ಕಚಂದೂರ್​ ನಿವಾಸಿಯಾಗಿದ್ದು, ಕೋವಿಡ್​ 19 ಎಂಬ ಮಾರಕ ವೈರಸ್​ ವಿರುದ್ಧ ಹೋರಾಡಿ ಪ್ರಾಣ ಉಳಿಸಿಕೊಂಡಿದ್ದಾರೆ.

ಕೊರೊನಾ ಸೋಲಿಸಿದ 76 ವರ್ಷದ ಕಸ್ತೂರಿ:

ಛತ್ತೀಸ್​ಗಢದ 76 ವರ್ಷದ ಕಸ್ತೂರಿ ಬಾಯಿ ಸಾಹುಗರ ಕೊರೊನಾ ಸೋಂಕು ತಗುಲಿತ್ತು. ಬದುಕುಳಿಯುವ ಯಾವ ಲಕ್ಷಣಗಳೂ ಇರಲಿಲ್ಲ. ಆದರೆ ಅವರಿಗೆ ಬದುಕುವ ಮನೋಸ್ಥೈರ್ಯ ಹೆಚ್ಚಾಗಿದ್ದರಿಂದ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿ ಕೊರೊನಾವನ್ನು ಹೊಡೆದೋಡಿಸಿದ್ದಾರೆ.

ABOUT THE AUTHOR

...view details